Get Even More Visitors To Your Blog, Upgrade To A Business Listing >>

ಬಿಳಿನೆಲೆ- ಕೊಂಬಾರು ಗಡಿಭಾಗದ ರಸ್ತೆ, ಕುಸಿದ ಸೇತುವೆ ನಿರ್ಮಾಣವಾಗಿಲ್ಲ

Tags: agravesup

ಕಡಬ- ಸುಬ್ರಹ್ಮಣ್ಯ ಹೆದ್ದಾರಿ ನಡುವಿನ ಬಿಳಿನೆಲೆ -ಕೊಂಬಾರು ಗಡಿಭಾಗದ ನೆಟ್ಟಣ ರೈಲ್ವೇ ಸ್ಟೇಷನ್ ಸಮೀಪದಿಂದ ಹಾದು ಹೋಗುವ ಜಿಲ್ಲಾ ಪಂಚಾಯತ್ ರಸ್ತೆ, ಕೊಂಬಾರು ಗ್ರಾಮವಾಗಿ ಸುಂಕದಕಟ್ಟೆ ಸಂಪರ್ಕಿಸುತ್ತಿದೆ. ಈ ರಸ್ತೆಯಲ್ಲಿ ಒಂದಿಷ್ಟು ಡಾಮರೀಕರಣ ಹೊರತುಪಡಿಸಿ ಉಳಿದೆಲ್ಲಾ ಭಾಗಗಳಲ್ಲಿ ತೀವ್ರ ಹದಗೆಟ್ಟಿದ್ದು ಸಂಚಾರವೇ ದುಸ್ತರವಾಗಿದೆ.

ಬೈಲ, ನಾರಡ್ಕ, ಕೆ‌ಎಡಿಸಿ ತೋಟ, ಪೊರ್ದೆಲು, ಕೋಲ್ಕಜೆ, ಕೆಂಜಾಳ, ನೆಟ್ಟಣ ಭಾಗಗಳನ್ನು ಸಂಪರ್ಕಿಸುವ ರಸ್ತೆ ಇದು. ಈ ಮಾರ್ಗದಲ್ಲಿ ನಿತ್ಯ ಸುಬ್ರಹ್ಮಣ್ಯ, ಬಿಳಿನೆಲೆ, ಕಡಬ ಪರಿಸರಕ್ಕೆತೆರಳಬೇಕಾದ ಗ್ರಾಮಸ್ಥರು, ವಿದ್ಯಾರ್ಥಿಗಳು ತೀವ್ರ ಸಮಸ್ಯೆಗೊಳಗಾಗುತ್ತಿದ್ದಾರೆ.
ಸುಬ್ರಹ್ಮಣ್ಯ – ಕಡಬ ಮುಖ್ಯರಸ್ತೆಯಿಂದ ಅರ್ದ ಕಿ.ಮೀ. ನಷ್ಟು ನೆಟ್ಟಣರೈಲ್ವೆ ನಿಲ್ದಾಣವರೆಗೆ ಕಾಂಕ್ರೀಟಿಕರಣಗೊಂಡಿದೆ. ರೈಲ್ವೆ ನಿಲ್ದಾಣ ರಸ್ತೆಯಾದರಿಂದ ಇದು ಕಾರ್ಯವಾಗಿದ್ದರೂ ನಿಲ್ದಾಣದಿಂದ ಮುಂದೆ ತೆರಳುವಂತೆ ರಸ್ತೆ ಮುಂದಿನ ಸಂಪೂಣ ಚಿತ್ರಣವೇ ಅರಿವಾಗುತ್ತಿದೆ. ರಸ್ತೆಯುದ್ದಕ್ಕೂ ಸರಿಯಾದ ಚರಂಡಿ, ಮೋರಿ, ಸೇತುವೆಗಳಿಲ್ಲ. ನೀರು ರಸ್ತೆಯಲ್ಲೆ ನಿಂತು ಕೆಸರಾಗಿದೆ. ದ್ವಿಚಕ್ರ ವಾಹನಕ್ಕೆ ತೆರಳುವುದೇ ಹರಸಾಹಸ. ನಡೆದಾಡಲು ಪ್ರಯತ್ನಿಸಿದರೆ ಕಾಲೇ ಹೂತು ಹೋಗುವ ಪರಿಸ್ಥಿತಿ.ನಾರಡ್ಕ ಪರಿಸರದಲ್ಲಿ ಪೂರ್ತಿ ಹದಗೆಟ್ಟಿದೆ. ದಶಕಗಳ ಬೇಡಿಕೆಯಿದ್ದರೂ ಇನ್ನೂ ಅಭಿವೃದ್ದಿ ಕಂಡಿಲ್ಲ.ಮಾರ್ಗ ಮಧ್ಯೆ ಬರುವ ಹಿಂದೆ ರೈಲ್ವೆ ಇಲಾಖೆಯೇ ನಿರ್ಮಿಸಿದ ಸೇತುವೆ ಕುಸಿದು ವರ್ಷಗಳಾದರೂ ಇನ್ನೂ ನಿರ್ಮಿಸಿಲ್ಲ. ವರ್ಷದೊಳಗಾಗಿ ಪಂಚಾಯತ್ ವತಿಯಿಂದ ನಿರ್ಮಿಸುವ ಭರವಸೆ ನೀಡಿದ್ದರೂ ನಿರ್ಮಾಣಕ್ಕೆ ಮುಂದಾಗಿಲ್ಲ. ಗ್ರಾಮಸ್ಥರೇ ದ್ವಿಚಕ್ರ ವಾಹನ ತೆರಳುವಂತೆ ಮರದ ತುಂಡು ಹಾಕಿ ಸೇತುವೆ ನಿರ್ಮಿಸಿಕೊಂಡಿದ್ದಾರೆ ಎಂದು ದೂರುತ್ತಾರೆ ಗ್ರಾಮಸ್ಥರಾದ ನಿತ್ಯಾನಂದ ಕೋಲ್ಕಜೆ.
ಮುಂದೆ ಸಿಗುವ ಕೊಂಬಾರು ಪಂಚಾಯತ್ ಸಮೀಪದಿಂದ ಡಾಮರೀಕರಣಗೊಂಡಿದೆಯಾದರೂ ಒಂದೆರಡು ಕಿ.ಮೀ. ರಸ್ತೆ ಹೊರತುಪಡಿಸಿ ಉಳಿದಂತೆ ಸುಂಕದಕಟ್ಟೆವರೆಗೆ ರಸ್ತೆ ಡಾಮರು ಕಿತ್ತುಹೋಗಿ ಸಂಚಾರಕ್ಕೆ ಅಯೋಗ್ಯವೆನಿಸಿದೆ.
ನೆಟ್ಟಣದಿಂದ 1 ಕಿ.ಮೀ. ಮುಂದಕ್ಕೆ ರೈಲ್ವೆ ಇಲಾಖೆ ಸಾರ್ವಜನಿಕರಿಗೆಂದು ಮೇಲ್ಸೇತುವೆ ನಿರ್ಮಿಸಿದೆ. ಈ ಮಾರ್ಗದಲ್ಲಿ ತೆರಳಿದಾಗ ದೊರೆಯುವ ಈ ಸೇತುವೆ ಅಡಿ ಮಳೆಯಾದರೆ ಪೂರ್ತಿ ನೀರು ನಿಂತು ನದಿಯಂತಾಗುತ್ತದೆ.
ಬಹುತೇಕ ಅರಣ್ಯದಿಂದ ಆವೃತ್ತವಾದ ಗ್ರಾಮ ಪಂಚಾಯತ್ ಕೊಂಬಾರು. ನೆಟ್ಟಣ ಭಾಗದಲ್ಲಿ ಸಿಗುವ ರಸ್ತೆ ಬಿಳಿನೆಲೆ ಗ್ರಾಮಕ್ಕೂ ಒಳಪಡುತ್ತದೆ. ಇವೆರಡು ಕಾಡಾನೆ ಸಮಸ್ಯೆ ಇರುವ ಗ್ರಾಮಗಳು. ಹಿಂದೆ ನಕ್ಸಲ್ ಬಾದಿತ ಗ್ರಾಮವಾಗಿಯೂ ಗುರುತಿಸಲ್ಪಟ್ಟಿತ್ತು. ಕಂದಾಯ ತಾಲೂಕಾಗಿ ಪುತ್ತೂರಿಗೆ ಸೇರಿದ್ದರೂ ಆಡಳಿತಾತ್ಮಕವಾಗಿ ಸುಳ್ಯವಿಧಾನಸಭಾ ಕ್ಷೇತ್ರಕ್ಕೊಳಪಟ್ಟ ಗ್ರಾಮ. ಅಲ್ಲದೇ ಇದು ಹಾಲಿ ಜಿ.ಪಂ. ರಸ್ತೆ ಎನಿಸುವುದರೊಂದಿಗೆ. ಹಾಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರ ತವರೂರು ಕೂಡಾ. ಎಂಬುದು ಗಮನಾರ್ಹ. ಈ ಗ್ರಾಮಗಳೆರಡು ಕಡಬ ಜಿ.ಪಂ. ಸದಸ್ಯರ ವ್ಯಾಪ್ತಿಗೊಳಪ
ತೇಜೇಶ್ವರ್ ತೊಡಿಕಾನThis post first appeared on V4news, please read the originial post: here

Share the post

ಬಿಳಿನೆಲೆ- ಕೊಂಬಾರು ಗಡಿಭಾಗದ ರಸ್ತೆ, ಕುಸಿದ ಸೇತುವೆ ನಿರ್ಮಾಣವಾಗಿಲ್ಲ

×

Subscribe to V4news

Get updates delivered right to your inbox!

Thank you for your subscription

×