Get Even More Visitors To Your Blog, Upgrade To A Business Listing >>

ನರೇಶ್ ಶೆಣೈಯಿಂದ ಹಲ್ಲೆ, ಜೀವ ಬೆದರಿಕೆ,  ಭರತ್ ಕಾಮತ್‌ರಿಂದ ಬಂದರು ಠಾಣೆಯಲ್ಲಿ ದೂರು

whatsapp-image-2017-03-15-at-6-21-10-pm

ವಿನಾಯಕ ಬಾಳಿಗಾ ಕೊಲೆ ಪ್ರಕರಣದ ಪ್ರಮುಖ ಆರೋಪಿ ನರೇಶ್ ಶೆಣೈ ತನ್ನ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಮಂಗಳೂರಿನ ವಿ. ಟಿ. ರೋಡ್ ನಿವಾಸಿ ಭರತ್ ಕಾಮತ್ ಎಂಬವರು ಬಂದರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾಶೀ ಮಠಾಧಿಪತಿ ಸಂಯಮೀಂದ್ರ ಸ್ವಾಮಿ ಅಯ್ಯಪ್ಪ ದೇವರಲ್ಲ ಎಂಬ ಹೇಳಿಕೆ ನೀಡಿದ್ದು, ಸ್ವಾಮಿಯ ವಿರುದ್ಧ ಬಂದರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಕ್ಕಾಗಿ. ನರೇಶ್ ಶೆಣೈ ತನ್ನ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಭರತ್ ಕಾಮತ್ ಆರೋಪಿಸಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ನನ್ನ ಮೊಬೈಲ್‌ಗೆ ನರೇಶ್ ಶೆಣೈಯಿಂದ ವಾಟ್ಸಾಪ್ ಸಂದೇಶ ಬಂದಿತ್ತು. ಸಂದೇಶಕ್ಕೆ ಪ್ರತಿಕ್ರಿಯಿಸಿ ಏನು ಎಂದು ಪ್ರಶ್ನಿಸಿದ್ದೆ. ನಿನ್ನ ಬಳಿ ಮಾತನಾಡಲು ಇದೆ ಎಂದು ಹೇಳಿದ್ದ. ಅದರಂತೆ ಅವರು ಬಳಿ ಮಾತುಕತೆಗೆ ತೆರಳಿದ್ದೆ. ಆ ಸಂದರ್ಭದಲ್ಲಿ ನರೇಶ್ ಶೆಣೈ ನನ್ನ ಮೇಲೆ ಹಲ್ಲೆ ನಡೆಸಿದ್ದ. ಹಲ್ಲೆ ನಡೆಸಿದ ಕಾರಣಕ್ಕೆ ದೂರು ದಾಖಲಿಸಿದ್ದೆ ಎಂದು ಹೇಳಿದರು.
ಇದೀಗ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ನರೇಶ್ ಶೆಣೈಗೆ ಬಂಧನದ ಭೀತಿ ಎದುರಾಗಿದೆ. ಬಂಧನದ ಭೀತಿಯಿಂದ ಕೇಸನ್ನು ವಾಪಸ್ ಪಡೆಯುವಂತೆ ಒತ್ತಡ ಹೇರಲಾಗುತ್ತಿದೆ. ಮನೆಯವರನ್ನು ಬೆದರಿಸಲಾಗುತ್ತಿದೆ. ನಾಳೆ ನನ್ನ ಅಣ್ಣನ ಬರ್ತ್‌ಡೇ ಇದೆ. ಅಣ್ಣನ ಮೇಲೆ ಒತ್ತಡ ಹೇರಲಾಗುತ್ತಿದೆ. ಕೇಸ್ ವಾಪಸ್ ಪಡೆಯದಿದ್ದರೆ ನಾಳೆ ನನ್ನ ಡೆತ್‌ಡೇ ಆಗಬಹುದು ಎಂದು ನನ್ನ ಅಣ್ಣ ಹೇಳುತ್ತಿದ್ದಾನೆ. ಇಷ್ಟರಮಟ್ಟಿಗೆ ಒತ್ತಡ, ಭಯವನ್ನು ನರೇಶ್ ಶೆಣೈ ಸೃಷ್ಟಿಸಿದ್ದಾನೆ ಎಂದು ಆರೋಪಿಸಿದ್ದಾರೆ.



This post first appeared on V4news, please read the originial post: here

Share the post

ನರೇಶ್ ಶೆಣೈಯಿಂದ ಹಲ್ಲೆ, ಜೀವ ಬೆದರಿಕೆ,  ಭರತ್ ಕಾಮತ್‌ರಿಂದ ಬಂದರು ಠಾಣೆಯಲ್ಲಿ ದೂರು

×

Subscribe to V4news

Get updates delivered right to your inbox!

Thank you for your subscription

×