Get Even More Visitors To Your Blog, Upgrade To A Business Listing >>

ದಿನಬಳಕೆ ವಸ್ತುಗಳು, ಗ್ಯಾಸ್ ಬೆಲೆ ಏರಿಕೆಗೆ ಖಂಡನೆ, ಉಳ್ಳಾಲದಲ್ಲಿ ಜನವಾದಿ ಮಹಿಳಾ ಸಂಘಟನೆಯಿಂದ ಪ್ರತಿಭಟನೆ

janavadi

janavaadi
ದಿನಬಳಕೆ ವಸ್ತುಗಳ ಹಾಗೂ ಅಡುಗೆ ಅನಿಲದ ಬೆಲೆ ಏರಿಕೆ ವಿರೋಧಿಸಿ ಜನವಾದಿ ಮಹಿಳಾ ಸಂಘಟನೆಯ ವತಿಯಿಂದ ಉಳ್ಳಾಲದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಅಧ್ಯಕ್ಷೆ ಜಯಂತಿ ಶೆಟ್ಟಿ, ಮೋದಿ ಸರಕಾರ ಆಡಳಿತ ಚುಕ್ಕಾಣಿ ಹಿಡಿದನಂತರ ಮಹಿಳೆಯರು ಕಷ್ಟದ ದಿನಗಳನ್ನೇ ಎದುರಿಸುತ್ತಿದ್ದಾರೆ. ಯುವ ಜನಾಂಗ ಇಂದು ದಿಕ್ಕೆಟ್ಟು ಹೋಗಿದೆ. ಬದುಕಿಗೆ ಆಸರೆ, ನೆಮ್ಮದಿ ಸಿಗುತ್ತಿಲ್ಲ. ಉದ್ಯೋಗ ಅರಸಿ ವಲಸೆ ಹೋಗುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಬಡ ಯುವತಿಯರು ಉದ್ಯೋಗ ವಂಚಿತರಾಗಿದ್ದಾರೆ ಎಂದು ಆರೋಪಿಸಿದರು.
ಉಳ್ಳಾಲ ಸಮಿತಿ ಅಧ್ಯಕ್ಷೆ ನಳಿನಾಕ್ಷಿ ಉಳ್ಳಾಲಬೈಲು, ಉಳ್ಳಾಲ ವಲಯ ಕಾರ್‍ಯದರ್ಶಿ ಸೌಮ್ಯ ಸಂಜೀವ್, ಪ್ರಮೋದಿನಿ ಕಲ್ಲಾಪು, ಪುಷ್ಪಾ ಲಕ್ಷ್ಮೀಗುಡ್ಡೆ, ಬೇಬಿ ಲಕ್ಷ್ಮಿಗುಡ್ಡೆ, ಕೋಟೆಕಾರು ಪಟ್ಟಣಪಂಚಾಯತ್ ಸದಸ್ಯೆ ಸುಮತಿ ಮತ್ತಿತರರು ಉಪಸ್ಥಿತರಿದ್ದರು.



This post first appeared on V4news, please read the originial post: here

Share the post

ದಿನಬಳಕೆ ವಸ್ತುಗಳು, ಗ್ಯಾಸ್ ಬೆಲೆ ಏರಿಕೆಗೆ ಖಂಡನೆ, ಉಳ್ಳಾಲದಲ್ಲಿ ಜನವಾದಿ ಮಹಿಳಾ ಸಂಘಟನೆಯಿಂದ ಪ್ರತಿಭಟನೆ

×

Subscribe to V4news

Get updates delivered right to your inbox!

Thank you for your subscription

×