Get Even More Visitors To Your Blog, Upgrade To A Business Listing >>

ಜೇಬಿನಲ್ಲಿದ್ದ ಮೊಬೈಲ್ ಏಕಾ‌ಏಕಿ ಸ್ಫೋಟ, ಉಪ್ಪಿನಂಗಡಿ ಬಸ್ ಚಾಲಕ ಸಂದೇಶ್‌ಗೆ ಸಣ್ಣಪುಟ್ಟ ಗಾಯ

mobiluppi

ಅಂಗಿಯ ಜೇಬಿನಲ್ಲಿದ್ದ ಮೊಬೈಲ್ ಪೋನ್ ಏಕಾ‌ಏಕಿ ಸ್ಪೋಟಗೊಂಡು ಬೆಂಕಿಯಾದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಬಸ್ ಚಾಲಕ ಬೆಳ್ತಂಗಡಿ ತಾಲೂಕಿನ ಬಂದಾರು ನಿವಾಸಿ ಸಂದೇಶ್ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸಂದೇಶ್ ಅವರು ಶಿವಕೃಪ ಎಂಬ ಖಾಸಗಿ ಬಸ್‌ವೊಂದರಲ್ಲಿ ಚಾಲಕರಾಗಿದ್ದು, ಮಂಗಳವಾರ ಬಳಗ್ಗೆ ಮಡಂತ್ಯಾರಿನಿಂದ ಉಪ್ಪಿನಂಗಡಿಗೆ ಬಸ್ ಚಲಾಯಿಸಿಕೊಂಡು ಬರುತ್ತಿದ್ದಾಗ ದಾರಿ ಮಧ್ಯೆ ಅಳಕೆ ಬಳಿ ಇವರ ಅಂಗಿಯ ಜೇಬಿನಲ್ಲಿಟ್ಟಿದ್ದ ಮೊಬೈಲ್ ಏಕಾ‌ಏಕಿ ಸ್ಪೋಟಗೊಂಡು ಬೆಂಕಿ ಹತ್ತಿಕೊಂಡಿದೆ. ಅಂಗಿಗೂ ಬೆಂಕಿ ತಗುಲಿದ್ದು, ಈ ಸಂದರ್ಭ ಇವರು ಅಂಗಿ ತೆಗೆದು ಬಿಸಾಡಿದ್ದರಿಂದ ಹೆಚ್ಚಿನ ಅಪಾಯದಿಂದ ಪಾರಾಗಿದ್ದಾರೆ. ಮೊಬೈಲ್ ಸಿಡಿದಿದ್ದರಿಂದ ಸಂದೇಶ್ ಅವರ ಎಡಗಣ್ಣಿಗೆ ಸಣ್ಣ ಪ್ರಮಾಣದ ಏಟು ಬಿದ್ದಿದೆ. ಇಂಟೆಕ್ಸ್ ಕಂಪನಿಯ ಟಚ್ ಸ್ಕ್ರೀನ್ ಮೊಬೈಲ್ ಇದಾಗಿದ್ದು, ಸುಮಾರು ಒಂದು ವರ್ಷದ ಹಿಂದೆ ಮೊಬೈಲ್ ಖರೀದಿಸಿದ್ದರು.This post first appeared on V4news, please read the originial post: here

Share the post

ಜೇಬಿನಲ್ಲಿದ್ದ ಮೊಬೈಲ್ ಏಕಾ‌ಏಕಿ ಸ್ಫೋಟ, ಉಪ್ಪಿನಂಗಡಿ ಬಸ್ ಚಾಲಕ ಸಂದೇಶ್‌ಗೆ ಸಣ್ಣಪುಟ್ಟ ಗಾಯ

×

Subscribe to V4news

Get updates delivered right to your inbox!

Thank you for your subscription

×