Get Even More Visitors To Your Blog, Upgrade To A Business Listing >>

ಕುಂದಾಪುರ: ಉಳ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ನೂತನ ಒಳಸುತ್ತು ಪೌಳಿ ಶಿಲನ್ಯಾಸ

18-kun-02-copy

ಹಿಂದೆ ದೇವಾಲಯಗಳನ್ನು ರಾಜ ಮಹಾರಾಜನೇ ಕಟ್ಟಬೇಕೆಂದಿರಲ್ಲಿಲ್ಲ ಶ್ರೀ ಸಾಮಾನ್ಯ ಕೂಡ ದೇವಾಲಯವನ್ನು ಕಟ್ಟಿ ಅದಕ್ಕೆ ಸೂಕ್ತ ಪೂಜೆ ಪುನಸ್ಕಾರದ ವ್ಯವಸ್ಥೆಯನ್ನು ಮಾಡುತ್ತಿದ್ದರು. ಆದರೆ ಬ್ರಿಟೀಷರು ಭಾರತ ಮೇಲೆ ವ್ಯಾಪಾರಕ್ಕೆಂದು ಬಂದು ನಮ್ಮ ದೇಶದ ಸ್ಥಿತಿಯನ್ನೇ ಬುಡಮೇಲು ಮಾಡಿದರು. ಭೂಮಿ, ಅಕ್ಕಿ ಎಲ್ಲವಿದ್ದರೂ ಶಕ್ತಿ ಇರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಜನರಿಗೆ ಶಕ್ತಿ ಬಂದಿದೆ. ಹಾಗಾಗಿ ದೇಗುಲಗಳ ಜೀರ್ಣೋದ್ದಾರ ಕಾರ್ಯ ನಡೆಯುತ್ತಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಉಳ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ನೂತನ ಒಳಸುತ್ತು ಪೌಳಿ ಶಿಲನ್ಯಾಸ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕಲಿಯುಗ ಕೆಟ್ಟದ್ದು ಎನ್ನುತ್ತಾರೆ ಆದರೆ ಎಲ್ಲಿಯೂ ಕೆಟ್ಟಿಲ್ಲ. ಕಲಿಯುಗದಲ್ಲಿ ಎಲ್ಲರಿಗೂ ಸ್ವಾಬಿಮಾನ ಬರುವಂತಹ ಕಾಲ ಬಂದಿದೆ. ಒಂದು ಕಾಲದಲ್ಲಿ ಸಮಾಜದಲ್ಲಿ ಬಹಳಷ್ಟು ಮೇಲು ಕೀಳು, ಸ್ಪರ್ಶ ಅಸ್ಪಶ್ಯವೆನ್ನುವ ಭೇದಗಳಿದ್ದವು, ಇದರಿಂದ ಸಮಾಜದಲ್ಲಿ ವರ್ಗಿಕರಣವಾಗಿತ್ತು. ಅವರು ಎಂದಿಗೂ ಒಟ್ಟಾಗುವ ಅವಕಾಶವಿರಲಿಲ್ಲ. ಸ್ವಾತಂತ್ರ್ಯ ಬಂದ ಬಳಿಕ ಮಕ್ಕಳು ಶಾಲೆಗಳಿಗೆ ಹೋಗಲು ಶುರುಮಾಡಿದ ಬಳಿಕ ಸಮಾನತೆಯ ಮಂತ್ರ ಕೇಳಿ ಬಂದಿದ್ದು, ನಮಗರಿವಿಲ್ಲದೇ ಬದಲಾವಣೆ ಉಂಟಾಗಿದೆ . ಮಕ್ಕಳು ಶಾಲೆಯಲ್ಲಿ ಪಾಠಗಳನ್ನು ಕೇಳುವಾಗ ಆಟೋಟಗಳಲ್ಲಿ ಭಾಗವಹಿಸುವಾಗ ಎಲ್ಲಿಯೂ ಕೂಡ ಜಾತಿಭೇಧಗಳಿರಲಿಲ್ಲ. ಈ ಪರಿವರ್ತನೆಗಳಿಂದ ನಮಗೆ ಆತ್ಮಗೌರವ ಹೆಚ್ಚಾಗಿದೆ. ಇದರಿಂದ ಸಣ್ಣ ಸಣ್ಣ ಹಳ್ಳಿಗಳಲ್ಲಿಯೂ ಕೂಡ ದೇವಾಲಯಗಳು ಎದ್ದು ನಿಲ್ಲುತ್ತಿವೆ. ಉಳ್ಳವರಂತು ಕೊಟ್ಟೇ ಕೊಡುತ್ತಿದ್ದಾರೆ. ಇದರಲ್ಲಿ ಶ್ರೀ ಸಾಮಾನ್ಯನೂ ಕೂಡ ತನ್ನ ಕೊಡುಗೆ ನೀಡುತ್ತಿದ್ದಾನೆ ಎನ್ನುವುದು ಹೆಮ್ಮೆ.
ಬಸವಣ್ಣನವರ ಉಳ್ಳವರು ಶಿವಾಲಯ ಮಾಡುವರು ವಚನವನ್ನು ಉಲ್ಲೇಖಿಸಿ ಮಾತನಾಡಿದ ವೀರೇಂದ್ರ ಹೆಗ್ಗಡೆಯವರು, ನಮ್ಮ ದೇಹ ಕೂಡ ಒಂದು ದೇವಾಲಯವಿದ್ದಂತೆ. ಇದನ್ನು ಯಾವಾಗಲೂ ಶುಚಿಯಾಗಿಟ್ಟುಕೊಳ್ಳಬೇಕು. ಏಕೆಂದರೆ ನಮ್ಮ ದೇಹದಲ್ಲಿ ಶಿವನ ವಾಸಸ್ಥಾನವಿರುತ್ತದೆ. ಶಿವನಿಲ್ಲದ ದೇಹ ಶವವಾಗುತ್ತದೆ. ಅದಕ್ಕಾಗಿ ದೇಹದಲ್ಲಿ ಶಿವನಿರುವವರೆಗೆ ಮಾತ್ರ ಮರ್ಯಾದೆ. ದೇವಾಲಯವನ್ನು ಸ್ವಚ್ಚವಾಗಿಟ್ಟುಕೊಂಡಂತೆ ದೇಹವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು ಇಲ್ಲವಾದಲ್ಲಿ ದೇಹವು ಪಾಳುಬಿದ್ದ ದೇವಾಲಯದಂತಾಗುತ್ತದೆ. ಅಂದರೆ ಆರೋಗ್ಯ ಹಾಳಾಗುತ್ತದೆ ಎಂದು ಸಭಿಕರಿಗೆ ಸ್ವಚ್ಚತೆಯ ಮಹತ್ವವನ್ನು ವಿವರಿಸಿದರು.
ಈ ಸಂದರ್ಭ ದೇವಳದ ವತಿಯಿಂದ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಗೆ ಸನ್ಮಾನಿಸಿಲಾಯಿತು. ಹೆಗ್ಗಡೆಯವರು ಈ ಕುಂದಾಪುರದ ಹಲವು ದೇಗುಲಗಳ ಅಭಿವೃದ್ಧಿಯ ಹರಿಕಾರ ಬಿ. ಅಪ್ಪಣ್ಣ ಹೆಗ್ಗಡೆಯವರಿಗೆ ಸನ್ಮಾನಿಸಿದರು.
ವೇದಿಕೆಯಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಮಾಜಿ ಧರ್ಮದರ್ಶಿ ಬಿ.ಸುಕುಮಾರ್ ಶೆಟ್ಟಿ, ಉದ್ಯಮಿ ಪ್ರಕಾಶ್ ಶೆಟ್ಟಿ, ಮಣಿಪಾಲದ ಪ್ರಸನ್ನ ಗಣಪತಿ ದೇವಳದ ಹರಿಪ್ರಸಾದ್ ರೈ ಬೆಳ್ಳಿಪ್ಪಾಡಿ, ಆಡಳಿತ ಸಮಿತಿ ಸದಸ್ಯರಾದ ಸುರೇಂದ್ರ ಹೆಗಡೆ ಉಪಸ್ಥಿತರಿದ್ದರು.



This post first appeared on V4news, please read the originial post: here

Share the post

ಕುಂದಾಪುರ: ಉಳ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ನೂತನ ಒಳಸುತ್ತು ಪೌಳಿ ಶಿಲನ್ಯಾಸ

×

Subscribe to V4news

Get updates delivered right to your inbox!

Thank you for your subscription

×