Get Even More Visitors To Your Blog, Upgrade To A Business Listing >>

ಬಂಟ್ವಾಳ: ವಿದೇಶಿ ಉದ್ಯೋಗ ಬಿಟ್ಟು ದೇಸೀ ಉದ್ಯೋಗ ಕೈ ಹಿಡಿದ ಯುವಕ : ತೋಟ, ಹೈನುಗಾರಿಕೆ, ಕೋಳಿ ಸಾಕಾಣೆಯಿಂದ ಗೆದ್ದ ಕೃಷಿಕ

vlcsnap-2017-01-24-11h40m45s207-copy

ಕಡಿದಾದ ಇಳಿಜಾರು ಗುಡ್ಡದಲ್ಲಿ ಈಗ ಹಚ್ಚ ಹಸುರಾಗಿ ಬೆಳೆದು ನಿಂತಿರುವ ಅಡಿಕೆ ತೋಟ, ಇದರ ಜೊತೆಗೆ ಹೈನುಗಾರಿಕೆ ಹಾಗೂ ಕೋಳಿ ಸಾಕಾಣಿಕೆ..
4 ವರ್ಷಗಳ ಕಾಲ ವಿದೇಶದಲ್ಲಿ ಉದ್ಯೋಗದಲ್ಲಿದ್ದರೂ ಊರಿಗೆ ಮರಳಿದ ಬಳಿಕ ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿರುವವರು ಕುಪ್ಪೆಪದವಿನ ಮಾಣಿ ಪಲ್ಲದ ಪ್ರಗತಿಪರ ಕೃಷಿಕ ವಿಶ್ವನಾಥ ನಾಯ್ಕ್. ಸರಕಾರದ ಸಾವಯವ ಕೃಷಿ ಭಾಗ್ಯ ಯೋಜನೆಯ ಮೂಲಕ ಕೃಷಿಯಲ್ಲಿಯೇ ಖುಷಿ ಕಂಡುಕೊಂಡ ಇವರು ಇದೀಗ ಕೃಷಿಯಲ್ಲಿಯೇ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. vlcsnap-2017-01-24-11h40m50s4-copy

vlcsnap-2017-01-24-11h41m00s95-copyಉದ್ಯೋಗ ನಿಮಿತ್ತ ವಿದೇಶದಲ್ಲಿದ್ದ ವಿಶ್ವನಾಥ ನಾಯ್ಕ್ ಅವರು ಊರಿಗೆ ಮರಳಿದ ಬಳಿಕ ಬೇರೆ ಕೆಲಸಕ್ಕೆ ಹೋಗುವ ಬದಲು ಕೃಷಿಯತ್ತ ತನ್ನ ಒಲವನ್ನು ಹೆಚ್ಚಿಸಿಕೊಂಡರು. ಮನೆ ಪಕ್ಕ ಇದ್ದ ಸುಮಾರು ಮೂರುವರೆ ಎಕರೆ ವಿಸ್ತೀರ್ಣದ ಕಡಿದಾದ ಇಳಿಜಾರು ಜಮೀನಿನಲ್ಲಿ ಅಡಿಕೆ ತೋಟ ಬೆಳೆಸಿ ಯಶಸ್ವಿಯಾದರು. ನೀರಾವರಿಗಾಗಿ ಬೋರ್‌ವೆಲ್ ಕೊರೆಸಿದರು, ತೋಟಕ್ಕೆ ಗೊಬ್ಬರ ಪಡೆಯಲು ಹೈನುಗಾರಿಕೆಯನ್ನು ಆರಂಭಿಸಿದರು. ಬಯೋ ಡೈಜೆಸ್ಟರ್ ನಿರ್ಮಿಸಿ ಗೋಬರ್ ಗ್ಯಾಸ್ ತಯಾರಿ ಹಾಗೂ ಅದರಲ್ಲಿ ಉಳಿಯುವ ಸ್ಲರಿ ನೀರನ್ನು ತೋಟಕ್ಕೆ ಬಳಸಿ ಸಂಪೂರ್ಣ ಸಾವಯವ ಕೃಷಿ ನಡೆಸಿದರು. ಇದರ ಜೊತೆಗೆ ಮನೆ ಪಕ್ಕ ಕೋಳಿ ಫಾರಂ ನಿರ್ಮಿಸಿದ್ದಾರೆ. ಈಗ ಸುಮಾರು 3 ಸಾವಿರ ಕೋಳಿಗಳನ್ನು ಸಾಕಾಣೆ ಮಾಡುತ್ತಿದ್ದಾರೆ. ಸಮಗ್ರ ಕೃಷಿಯ ಮೂಲಕ ಉತ್ತಮ ಆದಾಯ ಗಳಿಸಲು ಸಾಧ್ಯವಿದೆ ಎಂದು ತೋರಿಸಿಕೊಟ್ಟಿರುವ ೩ವಿಶ್ವನಾಥ ನಾಯ್ಕ್ ಮುಂದೆ ಮೊಲ ಸಾಕಾಣಿಕ ಮಾಡುವ ಚಿಂತನೆಯಲಿದ್ದಾರೆ.



This post first appeared on V4news, please read the originial post: here

Share the post

ಬಂಟ್ವಾಳ: ವಿದೇಶಿ ಉದ್ಯೋಗ ಬಿಟ್ಟು ದೇಸೀ ಉದ್ಯೋಗ ಕೈ ಹಿಡಿದ ಯುವಕ : ತೋಟ, ಹೈನುಗಾರಿಕೆ, ಕೋಳಿ ಸಾಕಾಣೆಯಿಂದ ಗೆದ್ದ ಕೃಷಿಕ

×

Subscribe to V4news

Get updates delivered right to your inbox!

Thank you for your subscription

×