Get Even More Visitors To Your Blog, Upgrade To A Business Listing >>

ಬ್ರಹ್ಮಾವರ ಸಹಿತ ೪೩ ತಾಲೂಕು ರಚನೆಗೆ ಆಗ್ರಹ, ಕಂದಾಯ ಸಚಿವ ಕಾಗೋಡು ತಿಮ್ಮಪ್ಪರಿಗೆ ಹೋರಾಟ ಸಮಿತಿಯ ಮನವಿ

brata

brahmata
ಬ್ರಹ್ಮಾವರ ಸಹಿತ ೨೦೧೩ರ ಫೆಬ್ರವರಿ ೮ರಂದು ಘೋಷಣೆಯಾದ ಎಲ್ಲಾ ೪೩ ತಾಲೂಕುಗಳನ್ನ ಒಂದೇ ಹಂತದಲ್ಲಿ ಅನುಮೋದಿಸಬೇಕೆಂದು ಒತ್ತಾಯಿಸಿ ತಾಲೂಕು ರಚನೆಗಾಗಿ ರಚಿತವಾಗಿರುವ ರಾಜ್ಯ ಮಟ್ಟದ ಹೋರಾಟ ಸಮೀತಿ ಕಂದಾಯ ಸಚಿವ ಕಾಗೋಡು ತಮ್ಮಪ್ಪರಿಗೆ ಮನವಿ ಸಲ್ಲಿಸಿದೆ.
ಕೇವಲ ೩೩ ತಾಲೂಕುಗಳನ್ನ ರಚಿಸುವ ವಿಚಾರವನ್ನ ಕೈಬಿಟ್ಟು ಈ ಹಿಂದೆ ಘೋಷಣೆಯಾದ ಎಲ್ಲ ೪೩ ತಾಲೂಕುಗಳನ್ನು ರಚಿಸಬೇಕು ಹೊಸ ತಾಲೂಕುಗಳಿಗೆ ಕನಿಷ್ಟ ಅನುದಾನವನ್ನ ನೀಡಿಯಾದರೂ ಎಲ್ಲ ೪೩ ತಾಲೂಕುಗಳ ರಚನೆಗೆ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ ರಾಜ್ಯ ಸಮಿತಿ, ಕೇವಲ ೩೩ ತಾಲೂಕುಗಳ ರಚನೆಗೆ ವಿರೋಧ ವ್ಯಕ್ತಪಡಿಸಿತು. ಅನುದಾನದ ಸಮಸ್ಯೆ ಮತ್ತು ಬೇರೆಲ್ಲಾ ವಿಚಾರಗಳನ್ನ ವಿಮರ್ಶೆ ಮಾಡಿ ಸರಕಾರ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬ ಅಭಿಪ್ರಾಯವನ್ನು ಈ ಸಂಧರ್ಭದಲ್ಲಿ ಕಂದಾಯ ಸಚಿವರು ರಾಜ್ಯ ಸಮಿತಿಗೆ ನೀಡಿದರು.
ಎಲ್ಲಾ ವಿಚಾರಗಳನ್ನ ಪರಿಶೀಲಿಸುತ್ತೇವೆ ಎನ್ನುವ ಭರವಸೆಯನ್ನೂ ನೀಡಿದರು. ನಿಯೋಗದಲ್ಲಿ ಅಧ್ಯಕ್ಷರಾದ ಬಸವರಾಜ ಪಾಟೀಲ್, ಪ್ರಧಾನ ಕಾರ್ಯದರ್ಶಿಯಾದ ಬಾರ್ಕೂರು ಸತೀಶ್ ಪೂಜಾರಿ, ನಾಗರಾಜ್ ಹೊಂಗಳ್, ದೀಪಕ್‌ಕುಮಾರ್ ಶೆಟ್ಟಿ, ಅಶೋಕ್ ಗುತ್ತೇದಾರ್, ರಾಮಣ್ಣ ಭಜಂತ್ರಿ, ಸಂಗಣ್ಣ ಈರಣ್ಣ, ಜಯಶ್ರೀರಾವ್, ಯಮನಾ ರಾಮಣ್ಣ ಗೌಡ ಮತ್ತಿತರರು ಉಪಸ್ಥಿತರಿದ್ದರು.



This post first appeared on V4news, please read the originial post: here

Share the post

ಬ್ರಹ್ಮಾವರ ಸಹಿತ ೪೩ ತಾಲೂಕು ರಚನೆಗೆ ಆಗ್ರಹ, ಕಂದಾಯ ಸಚಿವ ಕಾಗೋಡು ತಿಮ್ಮಪ್ಪರಿಗೆ ಹೋರಾಟ ಸಮಿತಿಯ ಮನವಿ

×

Subscribe to V4news

Get updates delivered right to your inbox!

Thank you for your subscription

×