Get Even More Visitors To Your Blog, Upgrade To A Business Listing >>

ಭಟ್ಕಳ ಯಲ್ವಡಿಕವೂರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜನ-ಮನ ಸ್ಪಂಧನ ಕಾರ್ಯಕ್ರಮ

capture_fotor

ಶಾಸಕರ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನ-ಮನ ಸ್ಪಂಧನ ಕಾರ್ಯಕ್ರಮವು ಶಾಸಕ ಮಂಕಾಳ ವೈದ್ಯ ಅಧ್ಯಕ್ಷತೆಯಲ್ಲಿ ಇಲ್ಲಿನ ಯಲ್ವಡಿಕವೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜರುಗಿತು.
20161022_122018_fotor

capture_fotor
ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಸಕರು ಜನ-ಮನ ಸ್ಪಂಧನದ ಮೂಲಕ ಕಳೆದ ಮೂರು ವರ್ಷಗಳಲ್ಲಿ ಮಾಡಿದ ಕೆಲಸಗಳ ಅವಲೋಕನ ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಯಾವ ಕೊರತೆ ಇದೆ ಎಂದು ತಿಳಿಯುವುದಕ್ಕೆ ಸಹಕಾರಿಯಾಗಿದೆ. ಯಾವುದೇ ಬಡ ಜನತೆ ಸರಕಾರದ ಸೌಲಭ್ಯದಿಂದ ವಂಚಿತರಾಗಬಾರದು ಎನ್ನುವುದಕ್ಕಾಗಿ ಜನತೆಯ ಬಳಿಯೇ ಹೆ ಗಿ ಅವರ ಅಹವಾಲನ್ನು ಕೇಳುತ್ತಿದ್ದೇನೆ. ಈ ಮೂಲಕ ಗ್ರಾಮ ಮಟ್ಟದಲ್ಲಿ ಬಡ ಜನತೆಯ ಕಷ್ಟಕ್ಕೆ ಸ್ಪಂಧಿಸುವ ಹಾಗೂ ಸೂಕ್ತ ಪರಿಹಾರವನ್ನು ವದಗಿಸುವುದಕ್ಕೆ ಮಾರ್ಗವನ್ನು ಕಂಡು ಕೊಂಡಿದ್ದೇನೆ.
ಯಾವುದೇ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಡವರು ವಿದ್ಯುತ್ ಸಂಪರ್ಕವಿಲ್ಲದೇ ಇರಬಾರದು ಎನ್ನುವ ಸಂಕಲ್ಪ ಮಾಡಿದ್ದೇನೆ. ಮನೆ, ವಿದ್ಯುತ್ ಸಂಪರ್ಕ, ನೀರು ಹಾಗೂ ಶೌಚಾಲಯಗಳನ್ನು ಆದ್ಯತೆಯ ಮೇಲೆ ನೀಡಲು ಕ್ರಮ ಕೈಗೊಂಡಿದ್ದು ಯಲ್ವಡಿಕವೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ವಿದ್ಯುತ್ ಇಲ್ಲದ ಮನೆಗಳಿಗೆ ಮುಂದಿನ ಒಂದು ತಿಂಗಳೊಳಗಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲು ಚಿಂತನೆ ನಡೆಸಿದ್ದೇನೆ ನನ್ನ ಕ್ಷೇತ್ರಕ್ಕೆ ವಿವಿಧ ವಸತಿ ಯೋಜನೆಯಡಿಯಲ್ಲಿ 1000 ಮನೆಗಳನ್ನು ಮಂಜೂರಿ ಮಾಡಿಸಿಕೊಂಡು ಬಂದಿದ್ದ ೧೫ ಕೋಟಿ ಹಣ ಬಂದಿದೆ. ಫಲಾನುಭವಿಗಳ ಆಯ್ಕೆಯಲ್ಲಿ ಯಾವುದೇ ವ್ಯತ್ಯಾಸವಾಗಿದ್ದರೆ ಗ್ರಾಮ ಪಂಚಾಯತ್ ಮಟ್ಟದಲ್ಲಿಯೇ ಕ್ರಮ ಕೈಗೊಳ್ಳಲೂ ಸೂಚಿಸಿದ್ದೇನೆ. ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಒಟ್ಟೂ 100 ಬಾವಿಯನ್ನು ಮಂಜೂರಿ ಮಾಡಿಸಿದ್ದು ಒಂದು ಬಾವಿಗೆ ೨ ಲಕ್ಷ ರೂಪಾಯಿ ಸರಕಾರ ನೀಡುತ್ತದೆ. ಯಲ್ವಡಿಕವೂರು ಗ್ರಾಮ ವ್ಯಾಪ್ತಿಯಲ್ಲಿಯೇ 13 ಬಾವಿಗಳನ್ನು ಮಂಜೂರು ಮಾಡಿಸಲಾಗಿದೆ ಎಂದ ಅವರು ನಮ್ಮಲ್ಲಿ ಯಾವುದೇ ಜನಪ್ರತಿನಿದಿಗಳಾಗಲೀ ಅಧಿಕಾರಿಗಳಾಗಲೀ ಹಣ ಕೇಳುವುದಿಲ್ಲ, ಹಣ ಕೊಡಲೂ ಬೇಡಿ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗೇರ, ತಾಲೂಕಾ ಪಂಚಾಯತ್ ಅಧ್ಯಕ್ಷ ಈಶ್ವರ ನಾಯ್ಕ, ಗ್ರಾ. ಪಂ. ಅಧ್ಯಕ್ಷೆ ಸುಶೀಲಾ ನಾಯ್ಕ, ಜಿ.ಪಂ.ಸದ್ಯ ಆಲ್ಬರ್ಟ ಡಿಕೋಸ್ತ, ಹೆಸ್ಕಾಂ ನಿರ್ದೇಶಕ ಮಂಜುನಾಥ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಠಲ ನಾಯ್ಕ, ತಾ.ಪಂ. ಸದಸ್ಯ ಹನುಮಂತ ನಾಯ್ಕ, ಗ್ರಾ. ಪಂ. ಸದಸ್ಯರಾದ ರಮೇಶ ನಾಯ್ಕ, ಲಕ್ಷ್ಮೀನಾರಾಯಣ ನಾಯ್ಕ ಸೇರಿದಂತೆ ತಾಲೂಕಿನ ಹಿರಿಯ, ಕಿರಿಯ ಅಧಿಕಾರಿ ವರ್ಗದವರೂ ಕೂಡಾ ಉಪಸ್ಥಿತರಿದ್ದು ತಮ್ಮ ತಮ್ಮ ಇಲಾಖೆಗೆ ಸಂಬಂಧ ಪಟ್ಟಂತೆ ತಕ್ಷಣ ಸ್ಪಂಧಿಸುವ ಭರವಸೆ ನೀಡಿದರು.
ರಾಘವೇಂದ್ರ ಮಲ್ಯ ಭಟ್ಕಳThis post first appeared on V4news, please read the originial post: here

Share the post

ಭಟ್ಕಳ ಯಲ್ವಡಿಕವೂರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜನ-ಮನ ಸ್ಪಂಧನ ಕಾರ್ಯಕ್ರಮ

×

Subscribe to V4news

Get updates delivered right to your inbox!

Thank you for your subscription

×