Get Even More Visitors To Your Blog, Upgrade To A Business Listing >>

ಮಾರುಕಟ್ಟೆಗೆ ಲಗ್ಗೆಯಿಟ್ಟ ಅಣಬೆಗಳು ಅಣಬೆ ಪ್ರೀಯರಲ್ಲಿ ದಾಹ ತಗ್ಗಿಸಿದ ಅಣಬೆ ಭಟ್ಕಳ ಮಾರುಕಟ್ಟೆಯಲ್ಲಿ ಅಣಬೆ ವ್ಯಾಪಾರ ಬಲುಜೋರು

Tags: agravesup

BLK veg3

ಭಟ್ಕಳ ತಾಲೂಕಿನಲ್ಲಿ ಗುರುವಾರದಂದು ಅಣಬೆಗಳು ಸಹಸ್ರಾರು ಸಂಖ್ಯೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಅಣಬೆ ಪ್ರಿಯರ ದಾಹವನ್ನು ತಗ್ಗಿಸಿದೆ. ತಾಲೂಕಿನ ಹಾಡುವಳ್ಳಿ, ಕೋಣಾರ, ಮಾರುಕೇರಿ ಹಾಗೂ ಹೊನ್ನಾವರ ತಾಲೂಕಿನ ಮಂಕಿ, ಅನಂತವಾಡಿ, ಗುಣವಂತೆ ಭಾಗದ ಕಾಡುಗಳಿಂದ ಅಣಬೆಗಳನ್ನು ಕಿತ್ತು ಕೃಷಿಕರು ಭಟ್ಕಳದ ಪೇಟೆಯತ್ತ ಮುಖ ಮಾಡಿದ್ದು, ಒಂದು ಕಡೆ ಭಟ್ಕಳದಲ್ಲಿ ಮಾರಿ ಜಾತ್ರೆಯ ಸಂಭ್ರಮ ಇನ್ನೊಂದು ಕಡೆಯಲ್ಲಿ ಅಣಬೆಯ ಹಬ್ಬವಾಗಿದೆ. ಅಷ್ಟಕ್ಕೂ ಅಣಬೆ ವ್ಯಾಪಾರ ಹೇಗಿದೆ ಎನ್ನುವುದರ ಬಗ್ಗೆ ಇಲ್ಲಿದೆ ಒಂದು ವಿಶೇಷ ವರದಿ.

BLK veg2

BLK veg1

ಯಸ್, ಭಟ್ಕಳ ಎಂದಾಕ್ಷಣಕ್ಕೆ ಊರಿನ ಬಗ್ಗೆ ಕೆಲವು ಘಟನೆಗಳೇ ನೆನಪಾಗುತ್ತವೆ. ಆದರೆ ಅಂತಹ ಘಟನೆಗಳ ಜೊತೆಗೆ ಭಟ್ಕಳ ಇನ್ನು ಹಲವು ವಿಚಾರದಲ್ಲಿ ಸುದ್ದಿಯಲ್ಲಿದೆ. ಅವುಗಳಲ್ಲಿ ಭಟ್ಕಳದ ಮಲ್ಲಿಗೆ ಮೊದಲನೆಯದ್ದು. ಇದರ ಜೊತೆಗೆ ಈಗಂತೂ ಮಳೆಗಾಲದ ಸಂಧರ್ಭ ತಾಲೂಕಿನ ಆಸುಪಾಸಿನ ಸ್ಥಳೀಯ ಪ್ರದೇಶದಲ್ಲಿ ಹೇರಳವಾಗಿ ಸಿಗುವ ಸ್ಥಳಿಯ ಭಾಷೆಯಲ್ಲಿ “ಹೆಗ್ಗಲಿ” ಎಂದು ಕರೆಯಲಾಗುವ ರುಚಿಕಟ್ಟಾದ ಅಣಬೆಗಳಿಗೆ ವಿಶೇಷ ಕಿಮ್ಮತ್ತಿದೆ. ಅದರಲ್ಲು ಭಟ್ಕಳ ತಾಲೂಕಿನ ಅಣಬೆಗಳಿಗೆ ಎಷ್ಟು ಬೇಡಿಕೆ ಎಂದರೆ ಬೇರೆ ತಾಲೂಕುಗಳ ಅಣಬೆಗಳೆಂದು ಗೊತ್ತಾದರೆ ಆ ಅಣಬೆಗಳು ಇಲ್ಲಿ ಬೇಡಿಕೆಯನ್ನು ಕಳೆದುಕೊಳ್ಳುತ್ತವೆ. ಪೌಷ್ಠಿಕಾಂಶದ ಕಾರಣದಿಂದಾಗಿ ಇದರ ಮಹತ್ವ ಇನ್ನಷ್ಟು ಹೆಚ್ಚಿದೆ. ಮಸಾಲಾ, ಫ್ರೈ, ಬಿರ್ಯಾನಿಗೂ ಅಣಬೆ ಸೈ ಎನ್ನಿಸಿಕೊಳ್ಳುತ್ತದೆ. ಒಂದೇ ದಿನದಲ್ಲಿ ಅಂದಾಜು ೧ ಲಕ್ಷ ರುಪಾಯಿ ವಹಿವಾಟು ನಡೆದಿದೆ ಎನ್ನುವುದು ತಿಳಿದುಬಂದಿದೆ. ವಿಶೇಷವಾಗಿ ಭಟ್ಕಳದಲ್ಲಿನ ನವಾಯತ ಸಮುದಾಯದ ಜನರು ಹೆಗ್ಗಲಿಗಾಗಿ ಮುಗಿಬೀಳುತ್ತಿದ್ದಾರೆ. ಅಣಬೆ ಖಾದ್ಯಗಳು ಭಟ್ಕಳದಿಂದ ದೂರದ ಮುಂಬೈ, ದುಬೈಗೂ ರವಾನೆಯಾಗುತ್ತದೆಂದರೆ ಅದು ವಿಶೇಷವೇ ಸರಿ. ಮಾರಿಜಾತ್ರೆಯ ಹಬ್ಬದ ಊಟಕ್ಕೂ ಅಣಬೆಗಳು ಮಾರಾಟವಾಗಿವೆ. ಮೊದಲೆಲ್ಲ ೧೦೦-೨೦೦ ರುಪಾಯಿಗೆ ಸಿಗುತ್ತಿದ್ದ ಅಣಬೆಗಳು ಈಗ ಅದರ ದರ ಆಗಸಕ್ಕೆ ನೆಗೆದಿದೆ. ೧೦೦ ಅಣಬೆಗೆ ರು. ೨೫೦ರಿಂದ ಗಾತ್ರದ ಆಧಾರದ ಮೇಲೆ ೮೦೦ ರುಪಾಯಿಯವರೆಗೂ ಬೇಡಿಕೆ ಇರುವುದು ಕಂಡು ಬಂದಿದೆ. ಮಾರುಕಟ್ಟೆಯಲ್ಲಿ ಅಣಬೆಗಳ ದರ್ಬಾರಿಗೆ ಆಕರ್ಷಿತರಾಗಿ ದಲ್ಲಾಳಿಗಳು ಹುಟ್ಟಿಕೊಂಡಿದ್ದಾರೆ. ಕೆಲವರು ಕೃಷಿಕರಿಂದ ಅಣಬೆಗಳನ್ನು ಸಂಗ್ರಹಿಸಲು ಹಳ್ಳಿಗಳತ್ತ ಪ್ರಯಾಣ ಬೆಳೆಸುತ್ತಿದ್ದಾರೆ. ಇನ್ನು ಕೆಲವರು ಮಾರ್ಗ ಮಧ್ಯೆ ಕಾದು ಅಣಬೆಗಳನ್ನು ಪಡೆದು ಕನಿಷ್ಠ ಎಂದರೂ ಪ್ರತಿ ದಿನ ರು.೫೦೦ ರಿಂದ ೨೦೦೦ ರುಪಾಯಿಯವರೆಗೂ ಲಾಭ ಗಳಿಸುತ್ತಿದ್ದಾರೆ. ಭಟ್ಕಳದ ಜನತೆಗೆ ಅಣಬೆಯ ಹಬ್ಬದೂಟವು ಇನ್ನೂ ೨-೩ ದಿವಸ ಸಿಗಲಿದ್ದು, ಪೇಟೆಯನ್ನು ಮುತ್ತಿಕೊಳ್ಳುವ ನಿರೀಕ್ಷೆ ಇದೆ. ರುಚಿ ಹಾಗೂ ಪೌಷ್ಠಿಕಾಂಶದ ಕಾರಣ ಅಣಬೆಗಳು ನಮಗೆ ಇಷ್ಟವಾಗುತ್ತವೆ. ಮೊದಲೆಲ್ಲ ೧೦೦-೨೦೦ ರುಪಾಯಿಗೆ ಸಿಗುತ್ತಿದ್ದ ಅಣಬೆಗಳು ಇದೀಗ ೫೦೦ ರುಪಾಯಿ ಗಡಿ ದಾಟಲು ದಲ್ಲಾಳಿಗಳೇ ಕಾರಣ. ಆದರೆ ಅಣಬೆಗಳು ಈ ಋತುವಿನಲ್ಲಿಯಷ್ಟೇ ಲಭ್ಯವಾಗುತ್ತವೆ. ವರ್ಷಕ್ಕೆ ಒಮ್ಮೆಯಾದರೂ ತಿನ್ನಬೇಕು ಎಂಬ ಆಸೆಯಿಂದ ಕೊಂಚ ದುಬಾರಿಯಾದರೂ ಗ್ರಾಹಕರು ಅಣಬೆ ಖರೀದಿಯಲ್ಲಿ ಉತ್ಸುಕರಾಗಿರುವ ಚಿತ್ರಣ ಕಂಡು ಬಂತು. ಏನೇ ಆಗಲಿ ಭಟ್ಕಳದ ಅಣಬೆ ಪ್ರಿಯರಿಗೆ ಮಳೆಗಾಲದ ಈ ಸಂಧರ್ಭದಲ್ಲಿ ಮಾರಿ ಜಾತ್ರೆಯ ಜೊತೆ ಜೊತೆಗೆ ಅಣಬೆ ಸಿಕಿರುವುದು ಡಬ್ಬಲ್ ಧಮಾಕಾ ಎನ್ನಬಹುದು.
ರಾಘವೇಂದ್ರ ಮಲ್ಯ ಭಟ್ಕಳ.This post first appeared on V4news, please read the originial post: here

Share the post

ಮಾರುಕಟ್ಟೆಗೆ ಲಗ್ಗೆಯಿಟ್ಟ ಅಣಬೆಗಳು ಅಣಬೆ ಪ್ರೀಯರಲ್ಲಿ ದಾಹ ತಗ್ಗಿಸಿದ ಅಣಬೆ ಭಟ್ಕಳ ಮಾರುಕಟ್ಟೆಯಲ್ಲಿ ಅಣಬೆ ವ್ಯಾಪಾರ ಬಲುಜೋರು

×

Subscribe to V4news

Get updates delivered right to your inbox!

Thank you for your subscription

×