Get Even More Visitors To Your Blog, Upgrade To A Business Listing >>

ಸುಳ್ಯ ನ.ಪಂ ಬರುವ ಅನುದಾನಕ್ಕೆ ಕಾಂಗ್ರೆಸ್ ನಾಯಕರಿಂದ ತಡೆ:ಅಭಿವೃದ್ದಿ ಸಹಿಸದ ಕಾಂಗ್ರೆಸ್ಸಿನ ಪ್ರತಿಭಟನೆ ಹತಾಶೆಯಿಂದ ಕೂಡಿದ್ದು: ನಗರ ಬಿಜೆಪಿ ಅಧ್ಯಕ್ಷ ವಿನಯ ಕಂದಡ್ಕ ಆರೋಪ

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸುಳ್ಯ ನಗರ ಪಂಚಾಯಿತಿಗೆ ಯಾವುದೇ ವಿಶೇಷ ಅನುದಾನ ಬರುತ್ತಿಲ್ಲ.  ಇಲ್ಲಿ ಬಿಜೆಪಿ ಆಡಳಿತ ಇರುವ ಕಾರಣ ಇಲ್ಲಿನ ಕಾಂಗ್ರೆಸ್ ನಾಯಕರು ತಮ್ಮ ಪ್ರಭಾವವನ್ನು ಬಳಸಿ ನಗರ ಪಂಚಾಯಿತಿಗೆ ಬರುವ ವಿಶೇಷ ಅನುದಾನವನ್ನು ತಡೆ ಹಿಡಿಯುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಬಿಜೆಪಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ  ಬಿಜೆಪಿ ಸರ್ಕಾರ ಇದ್ದ ಸಂದರ್ಭದಲ್ಲಿ ನಗರ ಪಂಚಾಯಿತಿಗೆ ಐದು ಕೋಟಿ ರೂಗಳ ವಿಶೇಷ ಅನುದಾನ ಬರುತ್ತಿತ್ತು. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ವಿಶೇಷ ಅನುದಾನ ಬಂದಿಲ್ಲ ಮಾತ್ರವಲ್ಲದೆ ಇಲ್ಲಿಗೆ ಅತ್ಯಂತ ಕಡಿಮೆ ಅನುದಾನ ಬರುತಿದೆ. ಇದಕ್ಕೆ ಕಾಂಗ್ರೆಸ್ ಮುಖಂಡರ ಕೈವಾಡವೇ ಕಾರಣ ಎಂದು ದೂರಿದರು. ಈ ಸರ್ಕಾರ ಬಂದ ಮೇಲೆ ಸುಳ್ಯ ನಗರದ ಅಭಿವೃದ್ಧಿಗೆ ಎಷ್ಟು ಅನುದಾನವನ್ನು ನೀಡಿದ್ದಾರೆ ಎಂಬುದನ್ನು ಕಾಂಗ್ರೆಸ್ ಮುಖಂಡರು ಆತ್ಮಾವಲೋಕನ ನಡೆಸಬೇಕು. ಇದೀಗ ನಗರದಲ್ಲಿ ಆಗುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಸಹಿಸಲಾಗದೆ ಹತಾಶೆಯಿಂದ ಕಾಂಗ್ರೆಸ್ಸಿಗರು ನಗರ ಪಂಚಾಯಿತಿ ವಿರುದ್ಧ ಪ್ರತಿಭಟನೆ ನಡೆಸಿ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಹಲವು ಬಾರಿ ನಗರ ಪಂಚಾಯಿತಿಯ ಸದಸ್ಯರಾಗಿ ಆಡಳಿತ ನಡೆಸಿದದವರೇ ನಗರ ಪಂಚಾಯಿತಿಯ ಸಾಮಾನ್ಯ ನಿಯಮಗಳನ್ನೂ ಗೊತ್ತಿಲ್ಲದವರಂತೆ ಬಾಲಿಶವಾದ ಆರೋಪಗಳನ್ನು ಮಾಡಿರುವುದು ಖಂಡನೀಯ. ಟೆಂಡರ್ ಆಗದೆ, ಹಿರಿಯ ಅಧಿಕಾರಿಗಳ ಅನುಮತಿ ಇಲ್ಲದೆ ಯಾವುದೇ ಕಾಮಗಾರಿ ನಡೆಸಲು ಮತ್ತು ಬಿಲ್ ಪಾವತಿ ಮಾಡಲು ಸಾಧ್ಯವಿಲ್ಲ. ಬಿಜೆಪಿ ಆಡಳಿತದ ಅವಧಿಯಲ್ಲಿ ಅತ್ಯಂತ ಪಾರದರ್ಶಕವಾದ ರೀತಿಯಲ್ಲಿ ನಗರದಲ್ಲಿ ಉತ್ತಮ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಸುಳ್ಯದಲ್ಲಿ ಎದುರಾದ ನೀರಿನ ಸಮಸ್ಯೆಯನ್ನು ಅತ್ಯಂತ ಯಶಸ್ವಯಾಗಿ ನಿರ್ವಹಣೆ ಮಾಡಿದ್ದಾರೆ ಎಂದು ಅವರು ಹೇಳಿದರು. ಅತ್ಯುತ್ತಮ ಕಾರ್ಯಕ್ರಮಗಳ ಮೂಲಕ ತೆರಿಗೆ ಸಂಗ್ರಹ ಮಾಡಿ ನಗರ ಪಂಚಾಯಿತಿಯ ಆದಾಯವನ್ನು ಹೆಚ್ಚಿಸಿದ್ದಾರೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷ ಚನಿಯ ಕಲ್ತಡ್ಕ, ನಗರ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ಹೆಗ್ಡೆ, ಸದಸ್ಯ ಕಿರಣ್ ಕುರುಂಜಿ, ಬಿಜೆಪಿ ಮುಖಂಡರಾದ ಪಿ.ಕೆ.ಉಮೇಶ್, ಹರೀಶ್ ಬೂಡುಪನ್ನೆ, ಸೀತಾರಾಮ ಕೊಲ್ಲರಮೂಲೆ ಉಪಸ್ಥಿತರಿದ್ದರು.

The post ಸುಳ್ಯ ನ.ಪಂ ಬರುವ ಅನುದಾನಕ್ಕೆ ಕಾಂಗ್ರೆಸ್ ನಾಯಕರಿಂದ ತಡೆ:ಅಭಿವೃದ್ದಿ ಸಹಿಸದ ಕಾಂಗ್ರೆಸ್ಸಿನ ಪ್ರತಿಭಟನೆ ಹತಾಶೆಯಿಂದ ಕೂಡಿದ್ದು: ನಗರ ಬಿಜೆಪಿ ಅಧ್ಯಕ್ಷ ವಿನಯ ಕಂದಡ್ಕ ಆರೋಪ appeared first on V4News.This post first appeared on V4news, please read the originial post: here

Share the post

ಸುಳ್ಯ ನ.ಪಂ ಬರುವ ಅನುದಾನಕ್ಕೆ ಕಾಂಗ್ರೆಸ್ ನಾಯಕರಿಂದ ತಡೆ:ಅಭಿವೃದ್ದಿ ಸಹಿಸದ ಕಾಂಗ್ರೆಸ್ಸಿನ ಪ್ರತಿಭಟನೆ ಹತಾಶೆಯಿಂದ ಕೂಡಿದ್ದು: ನಗರ ಬಿಜೆಪಿ ಅಧ್ಯಕ್ಷ ವಿನಯ ಕಂದಡ್ಕ ಆರೋಪ

×

Subscribe to V4news

Get updates delivered right to your inbox!

Thank you for your subscription

×