Get Even More Visitors To Your Blog, Upgrade To A Business Listing >>

ಕೊಲ್ಲೂರು ದೇವಳದ ಕಳ್ಳತನ ಪ್ರಕರಣ : ಅವ್ಯವಹಾರದಲ್ಲಿ ಆಡಳಿತ ಮಂಡಳಿ, ಪ್ರಭಾವಿಗಳು ಭಾಗಿ : ಸಂಶಯ ವ್ಯಕ್ತಪಡಿಸಿದ ಮಾ

ಕೊಲ್ಲೂರು ದೇವಳದ ಚಿನ್ನಾಭರಣ ಕಳವು ಪ್ರಕರಣ ಇದೀಗ ಮತ್ತೆ ಸುದ್ದಿಯಲ್ಲಿದೆ. ಕೊಲ್ಲೂರು ದೇವಳದ ಚಿನ್ನಾಭರಣ ಕಳವು ಪ್ರಕರಣದ ತನಿಖೆಯನ್ನು ಹಾದಿ ತಪ್ಪಿಸಲಾಗುತ್ತಿದೆ ಮತ್ತು ಅವ್ಯವಹಾರಗಳ ಬಗ್ಗೆ ಸರಕಾರ ಸೂಕ್ತ ತನಿಖೆ ಮಾಡುತ್ತಿಲ್ಲ ಎಂದು ಭಕ್ತ ಸಮೂಹ ಆರೋಪಿಸಿದೆ. ಇತ್ತ ಮುಖ್ಯಮಂತ್ರಿಗಳ ಮೇಲೆ ಪ್ರಭಾವ ಬೀರಲಾಗಿದೆ ಮತ್ತು ವಿವಿಧ ಪಕ್ಷಗಳೂ ಶಾಮೀಲಾಗಿದೆ ಎಂದು ಕೊಲ್ಲೂರು ದೇವಳದ ಮಾಜಿ ಆಡಳಿತ ಮೊಕ್ತೇಸರ ಅಪ್ಪಣ್ಣ ಹೆಗ್ಡೆ ಆರೋಪಿಸಿದ್ದು ಹೊಸ ಸಂಚಲನಕ್ಕೆ ಕಾರಣವಾಗಿದೆ.ದಕ್ಷಿಣ ಭಾರತದ ಪ್ರಸಿದ್ದ ಧಾರ್ಮಿಕ ಕ್ಷೇತ್ರಗಳಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನವೂ ಒಂದು . ಲಕ್ಷಾಂತರ ಭಕ್ತ ಸಮೂಹ ಸೇರುವ , ಕೋಟ್ಯಾಂತರ ರೂ ಕಾಣಿಕೆ ಸಂಗ್ರಹವಾಗುವ ದೇವಸ್ಥಾನಕ್ಕೆ ಇತ್ತೀಚಿಗೆ ಕಪ್ಪು ಚುಕ್ಕೆಯಾಗಿ ನಡೆದ ಘಟನೆ ದೇವಸ್ಥಾನದ ಚಿನ್ನಾಭರಣ ಕಳವು ಪ್ರಕರಣ…
ಭಕ್ತರ ಇಷ್ಟಾರ್ಥ ವನ್ನು ಪೂರೈಸುವ ಮೂಕಾಂಬಿಕೆಯ ಸನ್ನಿದಿಯಲ್ಲೇ ದೇವರ ಚಿನ್ನಾಭರಣ ಲಪಟಾಯಿಸಿರುವ ಪ್ರಕರಣ ರಾಜ್ಯದಾದ್ಯಂತ ಸುದ್ದಿಯಾಗಿತ್ತು. ಈ ಬಗ್ಗೆ ತನಿಖೆಯನ್ನು ನಡೆಸಿದ್ದ ಎಸ್ಪಿ ಅಣ್ಣಾ ಮಲೈ ಅವರ ತಂಡ ದೇವಸ್ಥಾನದ ಗುಮಾಸ್ತ ಸೇರಿ 5 ಮಂದಿಯನ್ನು ಬಂಧಿಸಿತ್ತು. ಆದರೆ ಇದೀಗ ಈ ಪ್ರಕರಣ ಹೊಸ ಆಯಾಮಗಳಿಗೆ ಕಾರಣವಾಗಿದ್ದು ತನಿಖೆಯ ಹಾದಿ ತಪ್ಪಿಸುವ ಹಾಗೂ ದೇವಸ್ಥಾನದಲ್ಲಿ 8 ವರ್ಷಗಳಿಂದ ಆಡಿಟಿಂಗ್ ಕಾರ್ಯವೇ ನಡೆದಿಲ್ಲ ಎಂಬುದನ್ನು ಕೊಲ್ಲೂರು ದೇವಳದ ಮಾಜಿ ಆಡಳಿತ ಮೊಕ್ತೇಸರ ಅಪ್ಪಣ್ಣ ಹೆಗ್ಡೆ ಬಹಿರಂಗಗೊಳಿಸಿರುವುದು ಈ ಪ್ರಕರಣದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಭಾಗಿಯಾಗಿದೆ ಎಂಬ ಗುಮಾನಿ ಭಕ್ತ ಸಮೂಹದಲ್ಲಿ ಉಂಟಾಗಿದೆ.
ದೇವಳದ ಚಿನ್ನಾಭರಣ ಕಳವು ಪ್ರಕರಣ ನಡೆದು ಒಂದುವರೆ ತಿಂಗಳು ನಡೆದರೂ ಇದುವರೆಗೆ ಸರಕಾರದ ಕಡೆಯಿಂದ ಯಾವುದೇ ರೀತಿಯ ಸಮಗ್ರ ತನಿಖೆ ನಡೆಯದಿರುವುದು ಭಕ್ತ ಸಮೂಹಕ್ಕೆ ಬೇಸರ ಉಂಟುಮಾಡಿದೆ. ಈವರೆಗೆ ದಕ್ಷವಾಗಿ ಪ್ರಕರಣದ ತನಿಖೆಯನ್ನು ನಡೆಸಿದ್ದ ಎಸ್ಪಿ ಅಣ್ಣಾಮಲೈ ಅವರ ಮೇಲೆ ಪ್ರಭಾವ ಬೀರಲಾಗುತ್ತಿದ್ದೆ ಎಂದು ಹೇಳಲಾಗುತ್ತಿದೆ. ಚಿನ್ನಾಭರಣ ಕಳವು ನಡೆದ ನಂತರ ಜಿಲ್ಲಾಧಿಕಾರಿಗಳು ದೇವಳದ ಅವ್ಯವಾಹರದ ಬಗ್ಗೆ ತನಿಖೆಗಾಗಿ ಸಮಿತಿಯನ್ನು ರಚಿಸಿದ್ದು ಈ ಸಮಿತಿಯಲ್ಲಿ ಉಡುಪಿ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಪ್ರಸನ್ನ ಕುಮಾರ್ ಅವರು ಅವ್ಯವಹಾರ ಸಂದರ್ಬದಲ್ಲಿ ದೇವಳದ ಕಾರ್ಯ ನಿರ್ವಹಣಾಧಿಕಾರಿಯಾಗಿದ್ದು ಅವರನ್ನು ಸಮಿತಿಗೆ ಸೇರ್ಪಡಿಸಿದ ಬಗ್ಗೆ ಕೊಲ್ಲೂರು ದೇವಳದ ಮಾಜಿ ಆಡಳಿತ ಮೊಕ್ತೇಸರ ಅಪ್ಪಣ್ಣ ಹೆಗ್ಡೆ ಅನುಮಾನ ವ್ಯಕ್ತಪಡಿಸಿದ್ದಾರೆ. ಚಿನ್ನಾಭರಣ ಕಳವು ಸಂದರ್ಬದಲ್ಲಿ ದೇವಳದ ಕಾರ್ಯ ನಿರ್ವಹಣಾಧಿಕಾರಿಯಾಗಿದ್ದವರನ್ನು ಮತ್ತೆ ತನಿಖಾ ಸಮಿತಿಗೆ ಹಾಕಿಕೊಂಡಿರುವುದು ಅನೇಕ ಸಂಶಯಕ್ಕೆ ಕಾರಣವಾಗಿದ್ದು ತನಿಖೆಯನ್ನು ಹಾದಿ ತಪ್ಪಿಸುವ ಕ್ರಮ ಎಂದು ಅಪ್ಪಣ್ಣ ಹೆಗ್ಡೆ ಆಪಾದಿಸಿದ್ದಾರೆ. ಅಲ್ಲದೇ ಕಳೆದ ೮ ವರ್ಷಗಳಿಂದ ದೇವಸ್ಥಾನದ ಯಾವುದೇ ಆಡಿಟ್( ಲೆಕ್ಕ ಪರಿಶೋಧನಾ ಕಾರ್ಯ) ನಡೆಯದಿರುವುದು ಅನೇಕ ಗುಮಾನಿಗೆ ಕಾರಣವಾಗಿದ್ದು ಈ ಅವ್ಯವಹಾರಗಳಲ್ಲಿ ದೇವಸ್ಥಾನದ ಆಡಳಿತ ಸಮಿತಿಯು ಕೂಡಿಕೊಂಡಿದೆ ಎಂದು ಗಂಭೀರ ಆರೋಪವನ್ನು ಅಪ್ಪಣ್ಣ ಹೆಗ್ಡೆ ಮಾಡಿದ್ದು ಈ ಬಗ್ಗೆ ಸಮಗ್ರ ತನಿಖೆಗೆ ಎಸ್ಪಿ ಅಣ್ಣಾ ಮಲೈ ನೇತೃತ್ವದಲ್ಲಿ ವಿವಿಧ ಇಲಾಖಾ ಅಧಿಕಾರಿಗಳ ತಂಡವನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿದ್ದಲ್ಲದೇ ಒಂದು ವೇಳೆ ಸಮಗ್ರ ತನಿಖೆ ನಡೆಯದಿದ್ದಲ್ಲಿ ಭಕ್ತ ಸಮೂಹ ಸೇರಿಕೊಂಡ ಪ್ರತಿಭಟಿಸುವ ಎಚ್ಚರಿಕೆಯನ್ನು ನೀಡಿದ್ದಾರೆ.ದೇವಸ್ಥಾನಕ್ಕೆ ಸಾವಿರಾರು ಭಕ್ತರು ಬಂದು ಕಾಣಿಕೆಗ:ಳನ್ನು ಸಮರ್ಪಿಸುತ್ತಿದ್ದು ಅಂತಹ ಕಾಣಿಕೆಗಳು ಎಲ್ಲೆ ಹೋಗಿದೆ ಎಂಬ ಬಗ್ಗೆ ವಿವರಣೆ ನೀಡಬೇಕು ಎಂಬ ಆಗ್ರಹ ಕೂಡಾ ಭಕ್ತ ಸಮುದಾಯದಿಂದ ಕೇಳಿಬರುತ್ತಿದೆ. ನಕಲಿ ಚಿನ್ನವನ್ನು ಇಟ್ಟು ಅಸಲಿ ಚಿನ್ನವನ್ನು ಎಗರಿಸಿರುವುದು ಹಾಗೂ ಅನೇಕ ಅವ್ಯವಾಹರಕ್ಕೆ ಕಾರಣವಾಗಿರುವ ಕೇವಲ 5 ಮಂದಿಯನ್ನು ಬಂಧಿಸಿದರೆ ಸಾಲದು … ಇದರ ಹಿಂದಿರುವ ಎಲ್ಲಾ ಪ್ರಭಾವಿಗಳನ್ನು ವಿಚಾರಣೆಗೆ ಒಳಪಡಿಸಬೇಕು. ಹಾಗೂ ಈಪ್ರಕರಣದಲ್ಲಿ ಕೆಲ ಪಕ್ಷಗಳ ಮುಖಂಡರು ಶಾಮೀಲಾಗಿದ್ದಾರೆ ಎಂಬ ಆರೋಪ ಅಪ್ಪಣ್ಣ ಹೆಗ್ಡೆ ಅವರು ಮಾಡಿದ್ದಾರೆ. ಒಟ್ಟಿನಲ್ಲಿ ಕೊಲ್ಲೂರು ಮೂಕಾಂಬಿಕಾ ದೇವರ ಚಿನ್ನ ಕಳವು ಮಾಡಿದ ಪ್ರಕರಣ ಮತ್ತಷ್ಟು ಗಂಭೀರತೆಯನ್ನು ಪಡೆದುಕೊಂಡಿದೆ. ಉಪ್ಪು ತಿಂದವ ನೀರು ಕುಡಿಯಲೇ ಬೇಕಂತೆ. ಅದರೆ ಇಲ್ಲಿ ತಪ್ಪು ಮಾಡಿದ ಎಲ್ಲರಿಗೂ ಶಿಕ್ಷೆ ಸಿಗುತ್ತಾ ಎಂಬುದನ್ನ ಮಾತ್ರ ಕಾದು ನೋಡಬೇಕಗಿದೆ.

 

ವರದಿ: ಸಂತೋಷ್ ಸರಳೇಬೆಟ್ಟು, ಉಡುಪಿ

The post ಕೊಲ್ಲೂರು ದೇವಳದ ಕಳ್ಳತನ ಪ್ರಕರಣ : ಅವ್ಯವಹಾರದಲ್ಲಿ ಆಡಳಿತ ಮಂಡಳಿ, ಪ್ರಭಾವಿಗಳು ಭಾಗಿ : ಸಂಶಯ ವ್ಯಕ್ತಪಡಿಸಿದ ಮಾಜಿ ಆಡಳಿತ ಮೊಕ್ತೇಸರ ಅಪ್ಪಣ್ಣ ಹೆಗ್ಡೆ  appeared first on V4News.



This post first appeared on V4news, please read the originial post: here

Share the post

ಕೊಲ್ಲೂರು ದೇವಳದ ಕಳ್ಳತನ ಪ್ರಕರಣ : ಅವ್ಯವಹಾರದಲ್ಲಿ ಆಡಳಿತ ಮಂಡಳಿ, ಪ್ರಭಾವಿಗಳು ಭಾಗಿ : ಸಂಶಯ ವ್ಯಕ್ತಪಡಿಸಿದ ಮಾ

×

Subscribe to V4news

Get updates delivered right to your inbox!

Thank you for your subscription

×