Get Even More Visitors To Your Blog, Upgrade To A Business Listing >>

ಸುಲಭದಲ್ಲಿ ಉಪ್ಪುನೀರಾಗುತ್ತದೆ ಸಿಹಿ ನೀರು, ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಯ ಸಾಧನೆ

chaitanya-karamchedu

ಭೂಖಂಡದಲ್ಲಿ ಮೂರುಭಾಗ ನೀರಿದೆ. ಕೇವಲ ಒಂದು ಭಾಗ ಮಾತ್ರ ನೆಲವಿದೆ. ಆದರೂ ಕುಡಿಯುವ ನೀರಿಗೆ ಮಾತ್ರ ಹಲವು ರಾಷ್ಡ್ರಗಳಲ್ಲಿ ತೊಂದರೆ ಇದೆ. ಭೂಮಿಯನ್ನು ಆವರಿಸಿರುವ ಸಮುದ್ರದ ನೀರು ಕುಡಿಯಲು ಯೋಗ್ಯವಾಗುವಂತೆ ಮಾಡಿದರೆ ಸಮಸ್ಯೆಯೇ ಇರದು.
ಭಾರತ ಮೂಲದ ಅಮೆರಿಕದ ವಿದ್ಯಾರ್ಥಿಯೊಬ್ಬ ಸಮುದ್ರದ ಉಪ್ಪು ನೀರನ್ನು ಕಡಿಮೆ ವೆಚ್ಚದಲ್ಲಿ ಸಿಹಿ ನೀರಾಗಿ ಪರಿವರ್ತಿಸುವ ಮಾರ್ಗವನ್ನು ಕಂಡುಹಿಡಿದಿದ್ದಾನೆ. ಒರೆಗಾನ್ನ ಪೋರ್ಟ್ಲ್ಯಾಂಡ್ನ ಚೈತನ್ಯ ಕರಮ್ಚೆಡು ಈ ಸಾಧನೆ ಮಾಡಿ ಯಶಸ್ವಿಯಾಗಿರುವ ವಿದ್ಯಾರ್ಥಿ. ಪ್ರೌಢ ಶಾಲೆಯಲ್ಲೇ ಆರಂಭವಾದ ಈತನ ಪ್ರಯೋಗ ಈಗ ಒಂದು ಹಂತಕ್ಕೆ ಬಂದು ನಿಂತಿದೆ. ಎಂಟು ಜನರಲ್ಲಿ ಒಬ್ಬರು ಸ್ವಚ್ಛ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಇದೊಂದು ಜಾಗತಿಕ ಸಮಸ್ಯೆ. ಆದ್ದರಿಂದಲೇ ಈ ರೀತಿಯ ಪ್ರಯೋಗಕ್ಕೆ ಮುಂದಾದೆ ಎನ್ನುತ್ತಾನೆ ಚೈತನ್ಯ. ಜೇಸೂಟ್ ಹೈಸ್ಕೂಲ್ ವಿದ್ಯಾರ್ಥಿಯಾಗಿರುವ ಕರಮ್ ಚೆಡುವಿಗೆ ಶಾಲೆ ಎಲ್ಲ ರೀತಿಯಲ್ಲೂ ನೆರವು ನೀಡಿದೆ. ಈತನ ಪ್ರಯೋಗ ವಿಶ್ವದಲ್ಲೇ ಗುರುತಿಸುವಂತಾಗಬೇಕು ಎಂದು ಶಾಲೆ ಬಯಸಿದೆ.
ಕಳೆದ ಹಲವು ವರ್ಷಗಳಿಂದ ವಿಜ್ಞಾನಿಗಳು ಈ ಬಗ್ಗೆಯೇ ತಲೆ ಕೆಡಿಸಿಕೊಂಡಿದ್ದಾರೆ. ಆದರೆ ಅದು ಅಂದುಕೊಂಡಷ್ಟು ಸರಳವಲ್ಲ ಎಂಬುದೂ ಸಹ ಅವರಿಗೆ ಮನವರಿಕೆಯಾಗಿದೆ. ಚೆಡು ಮಾಡಿರುವುದು ಅತ್ಯಂತ ಸರಳ ಪ್ರಯೋಗ. ಹೆಚ್ಚು ಹೀರಿಕೊಳ್ಳುವ ಪಾಲಿಮರ್ ಅನ್ನು ಇದಕ್ಕಾಗಿ ಬಳಸಿಕೊಳ್ಳಲಾಗಿದೆ. ಇದು ಸಮುದ್ರದ ನೀರಿನಲ್ಲಿನ ಉಪ್ಪು ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸುತ್ತದೆ. ಈ ನೀರಿಗೆ ವಿಶ್ವ ಆರೋಗ್ಯ ಸಂಘಟನೆ ಕುಡಿಯುವ ನೀರಿನ ಮಾನ್ಯತೆ ನೀಡಿದೆ.
ತಮಿಳುನಾಡಿನ ಕಲ್ಪಾಕಂ ಅಣು ಸ್ಥಾವರದಲ್ಲಿ ಸಮುದ್ರ ನೀರನ್ನು ಸಿಹಿ ನೀರಾಗಿ ಪರಿವರ್ತಿಸುವ ಪ್ರಾಯೋಗಿಕ ಸ್ಥಾವರವೊಂದನ್ನು ಭಾಭಾ ಅಣು ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿದ್ದಾರೆ. ಅಣು ಸ್ಥಾವರದಿಂದ ವ್ಯರ್ಥವಾಗಿ ಬರುವ ಹಬೆಯನ್ನು ಬಳಸಿಕೊಂಡು ಸಮುದ್ರದ ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸಲಾಗುತ್ತಿದೆ. ಇದು ಕುಡಿಯುವ ನೀರಿನ ರುಚಿಯನ್ನೇ ಹೊಂದಿದೆ. ನಿತ್ಯ ೬೩ ಲಕ್ಷ ಲೀಟರ್ ಸಮುದ್ರ ನೀರನ್ನು ಕುಡಿಯುವ ನೀರಾಗಿ ರೂಪಾಂತರ ಮಾಡುತ್ತಿದ್ದಾರೆ.This post first appeared on V4news, please read the originial post: here

Share the post

ಸುಲಭದಲ್ಲಿ ಉಪ್ಪುನೀರಾಗುತ್ತದೆ ಸಿಹಿ ನೀರು, ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಯ ಸಾಧನೆ

×

Subscribe to V4news

Get updates delivered right to your inbox!

Thank you for your subscription

×