Get Even More Visitors To Your Blog, Upgrade To A Business Listing >>

ಭಟ್ಕಳ ತಾಲೂಕಿನಲ್ಲಿ ಈದ್-ಮಿಲಾದ್ ಹಬ್ಬ

Tags: agravesup

ದೇಶಾದ್ಯಂತ ಪ್ರವಾದಿ ಮುಹಮ್ಮದ್(ಸ)ರ ಜನ್ಮ ದಿನಾಚರಣೆಯ ನಿಮಿತ್ತ ಭಟ್ಕಳ ತಾಲೂಕಿನಲ್ಲಿ ಈದ್-ಮಿಲಾದ್ ಹಬ್ಬವನ್ನು ಆಚರಿಸುವುದರ ಜೊತೆಗೆ ಮಿಲಾದುನ್ನಬಿ ಮೆರವಣಿಗೆಯನ್ನು ನಡೆಸಿ ವಿಶ್ವ ಶಾಂತಿಯ ದಿನವನ್ನು ಆಚರಿಸಲಾಯಿತು.
img_0131_fotorimg_0150_fotorimg_0175_fotorimg_0187-1_fotor
ತಾಲೂಕಿನ ಬಝ್ಮೆ ಫೈಝೆ ರಸೂಲ್ ಮದರಸಾ ಕಮಿಟಿ ಹಾಗೂ ಈದೀರಾ ಪೈಸೂಲ್ ರಸೂಲ್ ಮಿಲಾದ್ ಕಮಿಟಿ ವತಿಯಿಂದ ತಾಲೂಕಿನಲ್ಲಿ ಈದ್- ಮಿಲಾದ್ ಹಬ್ಬದ ವಿಶೇಷ ಮೆರವಣಿಗೆಯನ್ನ ಆಯೋಜಿಸಲಾಗಿದ್ದು, ಮೆರವಣಿಗೆಯಲ್ಲಿ ನೂರಾರು ಮುಸ್ಲಿಂ ಬಾಂಧವರು ಭಾಗವಹಿಸಿದ್ದರು. ಮೆರವಣಿಗೆಯು ತಾಲೂಕಿನ ದಿ ನ್ಯೂ ಇಂಗ್ಲೀಷ್ ಸ್ಕೂಲ್ ಪಕ್ಕದ ಈದ್ಗಾ ಮೈದಾನದಿಂದ ಹೊರಟು ಶಂಶುದ್ಧೀನ್ ಸರ್ಕಲ್ ಮೂಲಕ ಸುಲ್ತಾನ್ ಸ್ಟ್ರೀಟ್, ಚೌಕ ಬಜಾರ್ ಮೂಲಕ ಸಾಗಿ ಹಳೇ ಬಸ್ ನಿಲ್ದಾಣದಲ್ಲಿರುವ ದರ್ಗಾ ಸಮೀಪಕ್ಕೆ ಬಂದು ಮುಕ್ತಾಯಗೊಂಡಿತು. ಈ ಸಂಧರ್ಭದಲ್ಲಿ ಭಟ್ಕಳದ ಎಲ್ಲಾ ಮುಸ್ಲಿಂ ಬಾಂದವರು ಮೆರವಣಿಗೆಯಲ್ಲಿ ಭಾಗವಹಿಸಿದ್ದು, ವಿಶೇಷ ಆಕರ್ಷಣೆಗಳೊಂದಿಗೆ ಮುಕ್ತಾಯವಾಯಿತು. ಬಝ್ಮೆ ಫೈಝೆ ರಸೂಲ್ ಮದರಸಾ ಕಮಿಟಿ ಹಾಗೂ ಈದೀರಾ ಪೈಸೂಲ್ ರಸೂಲ್ ಮಿಲಾದ್ ಕಮಿಟಿ ವತಿಯಿಂದ ಈ ದಿನವನ್ನು ವಿಶ್ವಶಾಂತಿಯ ದಿನವನ್ನಾಗಿ ಆಚರಿಸಲಾಗುತ್ತಿದೆ. ವಿಶ್ವಕ್ಕೆ ಕರುಣೆಯ ಪಾಠ ಕಲಿಸಿದ ಪ್ರವಾದಿ ಮುಹಮ್ಮದ್ ಪೈಗಂಬರರ ಬದುಕು ಇಡಿಯ ಜಗತ್ತಿನ ಮಾನವರು ಅನುಸರಿಸಲಿ, ಪ್ರವಾದಿ ಅನುಸರಣೆಯಿಂದ ಎಲ್ಲರೂ ಕೂಡಾ ಸುಖ ಶಾಂತಿಯನ್ನು ಪಡೆಯುವಂತಾಗಲಿ. ಈ ಸಂದರ್ಭದಲ್ಲಿ ವಿಶ್ವಶಾಂತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಬೆಳಿಗ್ಗೆಯಿಂದಲೇ ತಾಲೂಕಿನ ವಿವಿಧ ಮಸೀದಿಗಳಿಗೆ ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು. ನಂತರ ಪರಸ್ಪರ ಹಬ್ಬದ ಶುಭಾಶಯಗಳನ್ನು ಕೋರುವುರದ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಮೆರವಣಿಗೆಯಿಂದ ಕೆಲಕಾಲ ಟ್ರಾಫಿಕ್ ಸಮಸ್ಯೆ ಎದುರಾಗಿದ್ದರು, ಪೋಲೀಸರ ಸಮ್ಮುಖದಲ್ಲಿ ವಾಹನ ಸಂಚಾರಕ್ಕೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳಲಾಯಿತು. ಮೆರವಣಿಗೆಯೂ ಭಟ್ಕಳದ ಪೋಲೀಸ್ ಬಿಗಿ ಬಂದೋ ಬಸ್ತನಲ್ಲಿ ಮುಕ್ತಾಯವಾಯಿತು.

ರಾಘವೇಂದ್ರ ಮಲ್ಯ ಭಟ್ಕಳThis post first appeared on V4news, please read the originial post: here

Share the post

ಭಟ್ಕಳ ತಾಲೂಕಿನಲ್ಲಿ ಈದ್-ಮಿಲಾದ್ ಹಬ್ಬ

×

Subscribe to V4news

Get updates delivered right to your inbox!

Thank you for your subscription

×