Get Even More Visitors To Your Blog, Upgrade To A Business Listing >>

ಮುಲ್ಕಿ: ಅನೈತಿಕ ಸಂಬಂಧ ಹಿನ್ನೆಲೆ : ಯುವಕನೋರ್ವನ ಕೊಲೆ

Tags: agravesup

26-bajape-kole-copy

ಮದ್ಯವಯಸ್ಕ ವ್ಯಕ್ತಿಯೊಬ್ಬರನ್ನು ಮಹಿಳೆ ಹಾಗೂ ಇಬ್ಬರು ಯುವಕರು ಸೇರಿಕೊಂಡು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಬಡಗ ಎಕ್ಕಾರು ಗ್ರಾಮದ ನೀರುಡೆ ಎಂಬಲ್ಲಿ ಭಾನುವಾರ ತಡ ರಾತ್ರಿ ನಡೆದಿದೆ. ಕೊಲೆಯಾದವರನ್ನು ನೀರುಡೆ ನಿವಾಸಿ ರಾಜು ಪೂಜಾರಿ(40) ಎಂದು ಗುರುತಿಸಲಾಗಿದೆ. ಈ ಸಂಬಂಧ ಸುಲೋಚನಾ(38), ದಿನೇಶ(28), ಸುಧಾಕರ(30) ಮೂರು ಮಂದಿ ಆರೋಪಿಗಳನ್ನು ಬಜ್ಪೆ ಪೋಲಿಸರು ವಶಕ್ಕೆ ಪಡೆದಿದ್ದಾರೆ.
ನೀರುಡೆ ನಿವಾಸಿ ಸುಲೋಚನಾಳ ಪತಿ ರಾಜು ಪೂಜಾರಿ ನಾಲ್ಕು ವರ್ಷಗಳ ಹಿಂದೆ ಮೃತಪಟ್ಟಿದ್ದು, ಪತಿಯ ನಿಧನದ ನಂತರ ಈಕೆಗೆ ಪರಿಚಯದ ರಾಜು ಪೂಜಾರಿಯ ಜೊತೆ ಪ್ರೇಮಾಂಕುರವಾಗಿದ್ದು, ಆತ ಹೆಚ್ಚಾಗಿ ಮನೆಯಲ್ಲೇ ಇರುತ್ತಿದ್ದ ಎನ್ನಲಾಗಿದೆ. ರಾಜು ಪೂಜಾರಿ ಕುಡಿತದ ಅಭ್ಯಾಸ ಹೊಂದಿದ್ದು, ಪ್ರತಿನಿತ್ಯ ಮದ್ಯ ಸೇವಿಸಿ ಬಂದು ಸುಲೋಚನಾ ಮತ್ತು ಆಕೆಯ ಮಕ್ಕಳಿಗೆ ಹಲ್ಲೆ ಮಾಡುತ್ತಿದ್ದ. ಇದರಿಂದ ಸುಲೋಚನಾ ಬೇಸತ್ತಿದ್ದು ರಾಜು ಪೂಜಾರಿಯ ಬಗ್ಗೆ ತನ್ನ ಮನೆಯಲ್ಲಿ ತಿಳಿಸಿದ್ದಳು.
ಭಾನುವಾರ ರಾತ್ರಿ 10 ಗಂಟೆಯ ಸುಮಾರಿಗೆ ಮನೆಗೆ ಬಂದಿದ್ದ ರಾಜು ಪೂಜಾರಿ ವಿಪರೀತ ಮದ್ಯ ಸೇವಿಸಿ ಮತ್ತೆ ಜಗಳಕ್ಕೆ ಇಳಿದಿದ್ದು, ಸುಲೋಚನಾ ಹಾಗೂ ಮಕ್ಕಳ ಮೇಲೆ ಹಲ್ಲೆಗೆ ಮುಂದಾಗಿದ್ದ ಎನ್ನಲಾಗಿದೆ. ಇದನ್ನು ಸುಲೋಚನಾ ತನ್ನ ಅಕ್ಕನ ಮಕ್ಕಳಾದ ದಿನೇಶ ಮತ್ತು ಸುಧಾಕರರಲ್ಲಿ ತಿಳಿಸಿದ್ದು, ಅವರು ಕೂಡಲೇ ಸುಲೋಚನ ಮನೆಗೆ ಬಂದಿದ್ದರು, ದಿನೇಶ ಹಾಗೂ ಸುಧಾಕರನ ಜೊತೆ ರಾಜು ಪೂಜಾರಿ ಜಗಳವಾಡಿದ್ದು ಈ ವೇಳೆ ಕೋಪದ ಭರದಲ್ಲಿ ಅವರು ರಾಜು ಪೂಜಾರಿಗೆ ದೊಣ್ಣೆಯಿಂದ ಹಲ್ಲೆ ಮಾಡಿದ್ದರು. ನಂತರ ದಿನೇಶ ಹಾಗೂ ಸುಧಾಕರ ಸ್ಥಳದಿಂದ ಪರಾರಿಯಾಗಿದ್ದು, ತಲೆ, ಎದೆ ಹಾಗೂ ದೇಹದ ವಿವಿಧ ಭಾಗಕ್ಕೆ ಗಂಭೀರ ಗಾಯಗೊಂಡಿದ್ದ ರಾಜು ಪೂಜಾರಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಸುಲೋಚನಾಳ ಮನೆಯಲ್ಲಿ ಗಲಾಟೆ ನಡೆದು ರಾಜು ಪೂಜಾರಿಗೆ ಹಲ್ಲೆ ನಡೆಯುತ್ತಿರುವುದು ಗಮನಕ್ಕೆ ಬಂದು ಪಕ್ಕದ ಮನೆಯವರು ಬಜ್ಪೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಘಟನಾಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ರಕ್ತದ ಮಡುವಿನಲ್ಲಿ ರಾಜು ಪೂಜಾರಿ ಮೃತದೇಹ ಪತ್ತೆಯಾಗಿದೆ. ಬಜ್ಪೆ ಸರ್ಕಲ್ ಇನ್‌ಸ್ಪೆಕ್ಟರ್ ಟಿ.ಡಿ.ನಾಗರಾಜ್ ನೇತೃತ್ವದಲ್ಲಿ ಪೊಲೀಸರು ರಾತ್ರಿಯೇ ಕಾರ್ಯಾಚರಣೆ ನಡೆಸಿ ಆರೋಪಿಗಳಾದ ಸುಲೋಚನಾ, ದಿನೇಶ ಹಾಗೂ ಸುಧಾಕರನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಜ್ಪೆ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ವರದಿ: ನಿಶಾಂತ್ ಮುಲ್ಕಿThis post first appeared on V4news, please read the originial post: here

Share the post

ಮುಲ್ಕಿ: ಅನೈತಿಕ ಸಂಬಂಧ ಹಿನ್ನೆಲೆ : ಯುವಕನೋರ್ವನ ಕೊಲೆ

×

Subscribe to V4news

Get updates delivered right to your inbox!

Thank you for your subscription

×