Get Even More Visitors To Your Blog, Upgrade To A Business Listing >>

ಮಂಗಳೂರು: ನಟಿಗೆ ಸಿಕ್ಕಿತು ಮೊಟ್ಟೆಯ ಸ್ವಾಗತ : ಕೊಟ್ಟ ಹೇಳಿಕೆಗೆ ಕೊಟ್ಟರು ಅಭಿಮಾನದ ಮಹಾಪೂರ

photo copy

ಮಾಜಿ ಸಂಸದೆ ರಮ್ಯಾ ಮಂಗಳೂರು ಭೇಟಿ ಸಂಚಲನಕ್ಕೆ ಕಾರಣವಾಯ್ತು. ತನ್ನ ಹೇಳಿಕೆಯಿಂದಾಗಿ ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ತುತ್ತಾಗಿರುವ ರಮ್ಯಾ ಇವತ್ತು ಮಂಗಳೂರಿನಲ್ಲಿ ತನ್ನ ಪ್ರವಾಸದುದ್ದಕ್ಕೂ ವಿರೋಧ ಎದುರಿಸುವಂತಾಯ್ತು. ಕೆಲವು ಕಡೆ ಮೊಟ್ಟೆ ಎಸೆತ, ಚಪ್ಪಲಿ ಪ್ರದರ್ಶನವೂ ಎದುರಾಯ್ತು. ಈ ಬಗ್ಗೆ ಒಂದು ಸ್ಟೋರಿ ಇಲ್ಲಿದೆ. ಚಿತ್ರನಟಿ ಕಂ ರಾಜಕಾರಣಿ ರಮ್ಯಾ ಮತ್ತೆ ವಿವಾದದ ಕೇಂದ್ರ ಬಿಂದುವಾಗಿದ್ದಾರೆ. ಮಂಗಳೂರು ನರಕ ಎಂದು ಹೇಳಿ ಪೇಚಿಗೆ ಸಿಲುಕಿರುವ ಆಕೆಯೀಗ ಮಂಗಳೂರಿನಲ್ಲೇ ಇರಿಸುಮುರಿಸು ಅನುಭವಿಸಿದ್ದಾರೆ. ಬಜ್ಪೆ ವಿಮಾನ ನಿಲ್ದಾಣ ಕಾಲಿಡುತ್ತಿದ್ದಂತೆ ಧಿಕ್ಕಾರ, ರಮ್ಯಾ ಗೋ ಬ್ಯಾಕ್ ಎನ್ನುವ ಕೂಗು ಕೇಳಿಬಂತು. ಭಾರೀ ಭದ್ರತೆ ಇದ್ದರೂ ಅದನ್ನು ಲೆಕ್ಕಿಸದೆ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರು ರಮ್ಯಾ ವಿರುದ್ಧ ಧಿಕ್ಕಾರ ಕೂಗಿದರು.ಆನಂತ್ರ ನೂಕುನುಗ್ಗಲು ನಡುವೆಯೇ ರಮ್ಯಾಳನ್ನು ಪೊಲೀಸರು ಮತ್ತು ಯುವ ಕಾಂಗ್ರೆಸ್ ಕಾರ್ಯಕರ್ತರು ಕಾರಿನಲ್ಲಿ ಕರೆದೊಯ್ದರು. ಆದರೆ ಏರ್ಪೋರ್ಟಿನಿಂದ ಹೊರಬರುತ್ತಿದ್ದಂತೆ ರಸ್ತೆ ಬದಿಯಲ್ಲಿ ಸೇರಿದ್ದ ಜನರು ರಮ್ಯಾ ಕಾರಿನತ್ತ ಮೊಟ್ಟೆ, ಕೊಳೆತ ಟೊಮೆಟೋ ತೂರಲಾರಂಭಿಸಿದರು. ಪೊಲೀಸರ ಪಡೆಯೇ ಅಲ್ಲಿ ಸೇರಿದ್ದರೂ ಅದರ ನಡುವೆ ಮೊಟ್ಟೆ ತೂರಾಟವಾಗಿದ್ದು ಆಕೆಗೆ ಮಂಗಳಾರತಿ ಮಾಡಿದಂತಾಗಿತ್ತು. ಆನಂತ್ರ ಮಂಗಳೂರಿನಲ್ಲಿ ಮಾತನಾಡಿದ ರಮ್ಯಾ, ತನಗೆ ಮಂಗಳೂರಿನ ಬಗ್ಗೆ ತುಂಬ ಅಭಿಮಾನ ಇದೆ. ಆದರೆ ನನ್ನ ಹೇಳಿಕೆಯನ್ನು ಮಾಧ್ಯಮಗಳು ತಿರುಚಿವೆ. ನಾನೆಂದೂ ಮಂಗಳೂರು ನರಕ ಎಂದಿಲ್ಲ ಅಂತಾ ಸ್ಪಷ್ಟನೆ ನೀಡಿದರು. ವಿಶೇಷ ಅಂದ್ರೆ, ಮಂಗಳೂರಿನ ಕೃಷ್ಣಾಷ್ಟಮಿ ಪ್ರಯುಕ್ತ ಹಮ್ಮಿಕೊಂಡಿದ್ದ ಕದ್ರಿಯ ಮೊಸರು ಕುಡಿಕೆ ಕಾರ್ಯಕ್ರಮಕ್ಕೆ ರಮ್ಯಾ ಆಗಮಿಸುವುದು ತಿಂಗಳ ಮೊದಲೇ ಫಿಕ್ಸ್ ಆಗಿತ್ತು. ಆದರೆ ಈ ನಡುವೆ ಪಾಕಿಸ್ತಾನ ಪರ ಮಾತನಾಡುವ ವೇಳೆ ಮಂಗಳೂರನ್ನು ನರಕ ಎಂದಿದ್ದು ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಆನಂತ್ರ ರಾತ್ರಿ ಮೊಸರು ಕುಡಿಕೆ ಕಾರ್ಯಕ್ರಮಕ್ಕೆ ಭಾರೀ ಭದ್ರತೆಯ ನಡುವೆ ಆಗಮಿಸಿದ ರಮ್ಯಾ ಅವಸರದಿಂದಲೇ ಕಾರ್ಯಕ್ರಮದಿಂದ ನಿರ್ಗಮಿಸಿದರು. ಆದ್ರೂ ಅಲ್ಲಿ ಸೇರಿದ್ದ ಜನಸ್ತೋಮದ ಎಡೆಯಿಂದ ಧಿಕ್ಕಾರ, ಚಪ್ಪಲಿ ಪ್ರದರ್ಶನ, ಮೊಟ್ಟೆ ಎಸೆತವೂ ನಡೆದಿದ್ದು ರಮ್ಯಾಗೆ ಬಿಸಿ ಮುಟ್ಟಿಸಿದ ಸಂಕೇತವಾಗಿತ್ತು. ಈ ನಡುವೆ ವೇದಿಕೆಯಲ್ಲಿ ಮಾತನಾಡಿದ ರಮ್ಯಾ, ತಾನು ಮಂಗಳೂರು ಮಲ್ಲಿಗೆ ಮುಡಿದುಕೊಂಡೇ ಬಂದಿದ್ದೇನೆ ಅಂತಾ ತನ್ನ ಪ್ರೀತಿಯನ್ನು ತೋರ್ಪಡಿಸಿದರು. ಒಟ್ಟಿನಲ್ಲಿ ರಮ್ಯಾಳ ವಿವಾದಿತ ಹೇಳಿಕೆ ಆಕೆಗೆ ತುಂಬಾನೇ ಬಿಸಿ ಮುಟ್ಟಿಸಿತ್ತು. ಜೊತೆಗೆ ರಾಜ್ಯ ಸರಕಾರ ಮತ್ತು ಮಂಗಳೂರಿನ ಪೊಲೀಸ್ ಇಲಾಖೆ ಪಾಲಿಗೆ ಕಪ್ಪು ಚುಕ್ಕೆಯಾಗಿದ್ದು ಸುಳ್ಳಲ್ಲ.



This post first appeared on V4news, please read the originial post: here

Share the post

ಮಂಗಳೂರು: ನಟಿಗೆ ಸಿಕ್ಕಿತು ಮೊಟ್ಟೆಯ ಸ್ವಾಗತ : ಕೊಟ್ಟ ಹೇಳಿಕೆಗೆ ಕೊಟ್ಟರು ಅಭಿಮಾನದ ಮಹಾಪೂರ

×

Subscribe to V4news

Get updates delivered right to your inbox!

Thank you for your subscription

×