Get Even More Visitors To Your Blog, Upgrade To A Business Listing >>

ಟಿಪ್ಪರ್ ಲಾರಿ ಆಂಬುಲೆನ್ಸ್ ನಡುವೆ ಅಪಘಾತ : ಮಹಿಳೆ ಸಾವು, ರೋಗಿ ಸಹಿತ ನಾಲ್ವರಿಗೆ ಗಾಯ

ವಿಟ್ಲ: ಟಿಪ್ಪರ್ ಲಾರಿ ಹಾಗೂ ಆಂಬುಲೆನ್ಸ್ ನಡುವೆ ಅಪಘಾತ ಸಂಭವಿಸಿ ಮಹಿಳೆ ಮೃತಪಟ್ಟು ರೋಗಿ ಸಹಿತ ನಾಲ್ವರು ಗಂಭೀರ ಗಾಯಗೊಂಡ ಘಟನೆ ವಿಟ್ಲ ಸಮೀಪದ ಮಾಣಿಯ ಪರ್ಲೋಟ್ಟು ಎಂಬಲ್ಲಿ ನಡೆದಿದೆ.

ಆಂಬುಲೆನ್ಸ್‌ನಲ್ಲಿದ್ದವರು ಇಡ್ಕಿದು ಗ್ರಾಮದ ಸೂರ್ಯ ನಿವಾಸಿಗಳು ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಪುತ್ತೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಾಗಿದೆ. ರೋಗಿಯೊಬ್ಬರ ಡಯಾಲಿಸಿಸ್ ಮಾಡಲು ಪುತ್ತೂರಿನ ಆಸ್ಪತ್ರೆಯಿಂದ ಮಂಗಳೂರು ಆಸ್ಪತ್ರೆ ಕೊಂಡೊಯ್ಯುತ್ತಿದ್ದ ವೇಳೆ ಪುತ್ತೂರಿನ ಕಡೆಗೆ ಹೋಗುತ್ತಿದ್ದ ಲಾರಿಯು ನೇರಳಕಟ್ಟೆ ಸಮೀಪದ ಪರ್ಲೊಟ್ಟು ಎಂಬಲ್ಲಿ ಅಪಘಾತ ಸಂಭವಿಸಿದೆ. ಘಟನೆಯಿಂದ ಓರ್ವ ಮಹಿಳೆ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆಂದು ಹೇಳಲಾಗುತ್ತಿದೆ. ಆಂಬುಲೆನ್ಸ್ ನಲ್ಲಿದ್ದ ರೋಗಿ ಸಹಿತ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಪುತ್ತೂರಿನ ಮಹಾವೀರ ಆಸ್ಪತ್ರೆಗೆ ಸೇರಿದ ಆಂಬ್ಯುಲೆನ್ಸ್ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



This post first appeared on V4news, please read the originial post: here

Share the post

ಟಿಪ್ಪರ್ ಲಾರಿ ಆಂಬುಲೆನ್ಸ್ ನಡುವೆ ಅಪಘಾತ : ಮಹಿಳೆ ಸಾವು, ರೋಗಿ ಸಹಿತ ನಾಲ್ವರಿಗೆ ಗಾಯ

×

Subscribe to V4news

Get updates delivered right to your inbox!

Thank you for your subscription

×