Get Even More Visitors To Your Blog, Upgrade To A Business Listing >>

ಫೆ.23ಮತ್ತು 24ರಂದು ಪುತ್ತೂರಿನಲ್ಲಿ ಮೇಳೈಸಲಿದೆ “ಕೃಷಿ ಯಂತ್ರಮೇಳ”

ಪುತ್ತೂರು: ಕೃಷಿ ಯಂತ್ರ ಮೇಳ ಮತ್ತೆ ಪುತ್ತೂರಿನಲ್ಲಿ ನಡೆಯಲಿದೆ. ಫೆ23 ರಿಂದ 24ರ ವರೆಗೆ ನೆಹರೂ ನಗರದ ವಿವೇಕಾನಂದ ಕ್ಯಾಂಪಸ್‌ನಲ್ಲಿರುವ ಕ್ರೀಡಾಂಗಣದಲ್ಲಿ ನಡೆಯಲಿದೆ. ಈಗಾಗಲೇ 266 ಮಳಿಗೆಗಳಿಗೆ ಬುಕಿಂಗ್ ಆಗಿದ್ದು ಇನ್ನಷ್ಟು ಮಳಿಗೆಗಳು ಬರುವ ನಿರೀಕ್ಷೆ ಇದೆ. ಈ ಬಾರಿಯ ಯಂತ್ರ ಮೇಳದಲ್ಲಿ ಕನಸಿನ ಮನೆ ಎಂಬ ವಿಭಾಗದ ಮೂಲಕ ಮನೆ ನಿರ್ಮಾಣದ ಬಗ್ಗೆ ಮಾಹಿತಿ ನಡೆಯಲಿದೆ.
ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘ ಹಾಗೂ ವಿವೇಕಾನಂದ ಇಂಜಿನಿಯರಿಂಗ್, ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜುಗಳು ಕ್ಯಾಂಪ್ಕೋ ಹಾಗೂ ಕೆ.ಎಂ.ಎಫ್ ಸಂಸ್ಥೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿವೆ. ಈ ಬಾರಿಯ ಕೃಷಿ ಯಂತ್ರ ಮೇಳದಲ್ಲಿ ’ಕನಸಿನ ಮನೆ’ ಹಾಗೂ ಹೈನುಗಾರಿಕೆಯ ಮಾದರಿಗಳು.ಇದರೊಂದಿಗೆ ಕೃಷಿಯಲ್ಲಿ ಖುಷಿಯನ್ನು ನೀಡುವ ವಿಚಾರಗೋಷ್ಠಿಗಳೂ ಇವೆ. ದಕ್ಷಿಣಕನ್ನಡ, ಉತ್ತರಕನ್ನಡ, ಕಾಸರಗೋಡು, ಶಿವಮೊಗ್ಗ ಉಡುಪಿ ಸೇರಿದಂತೆ ವಿವಿಧ ಜಿಲ್ಲೆಗಳ ಸುಮಾರ ಎರಡು ಲಕ್ಷಕ್ಕೂ ಅಧಿಕ ಜನ ಭಾಗವಹಿಸುವ ನಿರೀಕ್ಷೆಯಿದೆ.
ಕೃಷಿ ಯಂತ್ರ ಮೇಳದಲ್ಲಿ ನಾಲ್ಕು ಗೋಷ್ಠಿಗಳು ಹಾಗೂ ಕನಸಿನ ಮನೆ ಬಗ್ಗೆ ಎರಡು ಗೋಷ್ಠಿಗಳು ನಡೆಯಲಿವೆ. ಫೆ.23 ರಂದು ’ಕೃಷಿಗೆ ಮರಳಿ ಬಂದವರು ಏನಂತಾರೆ?’ ಗೋಷ್ಠಿಯ ಮೂಲಕ ಚಿಂತನ ಮಂಥನ ನಡೆಯಲಿದೆ. ಫೆ.24 ರಂದು ನಡೆಯುವ ’ಕೃಷಿಕರಿಗೆ ಮಾಹಿತಿ ತಂತ್ರಜ್ಞಾನದಿಂದ ಏನು ಪ್ರಯೋಜನ?’ಎಂಬ ಗೋಷ್ಠಿಯ ಮೂಲಕ ಕೃಷಿ ಮಾಹಿತಿ, ಮಾರುಕಟ್ಟೆ, ಲೆಕ್ಕಪತ್ರ ನಿರ್ವಹಣೆಯ ಕುರಿತಾಗಿ ಮಾಹಿತಿ ವಿನಿಮಯವಾಗಲಿದೆ.ಫೆ.24 ರಂದು ’ನಮ್ಮಊಟಕ್ಕೆ ನಮ್ಮದೇ ತರಕಾರಿ’ ಗೋಷ್ಠಿ ಮೂಲಕ ಸಾಧಕರಿಂದ ಮಾಹಿತಿದೊರೆಯಲಿದೆ.ಈ ಬಾರಿಯ ಯಂತ್ರಮೇಳದಲ್ಲಿ ತಮ್ಮ ತಂತ್ರಜ್ಞಾನಗಳ ಮಾಹಿತಿ ನೀಡುವುದಕ್ಕೆ ಅನೇಕ ಸಂಸ್ಥೆಗಳು, ಸಂಘಟನೆಗಳು ಮಾತ್ರವಲ್ಲದೆ ವೈಯಕ್ತಿಕ ನೆಲೆಯಿಂದಲೂ ಮಳಿಗೆಗಳು ಅದಾಗಲೇ ಕಾಯ್ದಿರಿಸಲ್ಪಟ್ಟವೆ. ಅಂತಹ ಮಳಿಗೆಗಳಲ್ಲಿ ಕೃಷಿ ಬದುಕಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಉಪಕಾರವಾಗಬಲ್ಲ ಮಾಹಿತಿ ಮಾತ್ರವಲ್ಲದೆ ಪ್ರಾತ್ಯಕ್ಷಿಕೆಗಳು ಕೂಡ ಜಾರಿಗೊಳ್ಳಲಿವೆ. ವಿಧವಿಧದ ಯಂತ್ರಗಳು ತಮ್ಮ ಕಾರ್ಯಸಾಮರ್ಥ್ಯವನ್ನು ಜನರ ಮುಂದೆ ಪ್ರದರ್ಶಿಸಲಿವೆ. ಸ್ವತಃ ಕೃಷಿಕರೇ ಕಂಡು ಹಿಡಿದ ಅನುಭವ ಜನ್ಯ ಯಂತ್ರೋಪಕರಣಗಳೂ ಈ ಯಂತ್ರೋತ್ಸವದ ಕಳೆ ಹೆಚ್ಚಿಸಲಿವೆ. ಕೇವಲ ಪ್ರದರ್ಶನ ಮಾತ್ರವಲ್ಲದೆ ಮಾರಾಟವೂ ಸ್ಥಳದಲ್ಲೇ ನಡೆಯಲಿದೆ.



This post first appeared on V4news, please read the originial post: here

Share the post

ಫೆ.23ಮತ್ತು 24ರಂದು ಪುತ್ತೂರಿನಲ್ಲಿ ಮೇಳೈಸಲಿದೆ “ಕೃಷಿ ಯಂತ್ರಮೇಳ”

×

Subscribe to V4news

Get updates delivered right to your inbox!

Thank you for your subscription

×