Get Even More Visitors To Your Blog, Upgrade To A Business Listing >>

ಕಳೆದ 18 ತಿಂಗಳಿನಿಂದ ಬಾರದ ಅಂಗವಿಕಲ ಮಾಶಾಸನ:ಕಾರಣ ತಿಳಿಸಲು ಕಂದಾಯ ಅಧಿಕಾರಿಗಳು ವಿಫಲ.

ಜೀವನಾಧಾರಕ್ಕಾಗಿ ಸರಕಾರದಿಂದ ಬರುತ್ತಿದ್ದ ಅಂಗವಿಕಲ ಮಾಶಾಸನ ಕಳೆದ 18 ತಿಂಗಳಿನಿಂದ ಬಾರದ ಹಿನ್ನಲೆಯಲ್ಲಿ ಮಾಹಿತಿ ಹಕ್ಕಿನ ಮೂಲಕ ಸಂಗ್ರಹಿಸಿದ ಮಾಹಿತಿಯಲ್ಲಿ ಹಣ ಸಂದಾಯವಾಗದಿರಲು ಕಾರವೇನು ಎನ್ನುವುದನ್ನು ತಿಳಿಸಲು ಕಂದಾಯ ಅಧಿಕಾರಿಗಳು ವಿಫಲರಾಗಿದ್ದಾರೆ.

ದಕ್ಷಿಣಕನ್ನಡಣ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಾಯರ್ತಡ್ಕ ನಿವಾಸಿ ಧರ್ಣಪ್ಪ ಗೌಡ ಬಡತನದಿಂದ ಜೀವನ ಸಾಗಿಸುತ್ತಿದ್ದು, ಈ ನಡುವೆ ಇವರಿಗೆ ಸರಕಾರದಿಂದ ಬರುತ್ತಿದ್ದ ಮಾಶಾಸನವೂ ಏಕಾಏಕಿ ನಿಂತಿದೆ. ಈ ಹಿನ್ನಲೆಯಲ್ಲಿ ಎಂಡೋಸಲ್ಫಾನ್ ವಿರೋಧಿ ಹೋರಾಟಗಾರರಾದ ಶ್ರೀಧರ್ ಗೌಡ ಮಾಶಾಸನ ನಿಲ್ಲಿಸಿರುವುದರ ಬಗ್ಗೆ ಮಾಹಿತಿ ಸಂಗ್ರಹಿಸಲು ಮಾಹಿತಿ ಹಕ್ಕಿನ ಮೊರೆ ಹೋಗಿದ್ದರು. ಮಾಹಿತಿ ಹಕ್ಕಿನಲ್ಲಿ ದೊರೆತ ಮಾಹಿತಿಯ ಪ್ರಕಾರ ಧರ್ಣಪ್ಪ ಗೌಡರ ಮಾಶಾಸನವನ್ನು ತಾತ್ಕಾಲಿಕ ಅಮಾನತ್ತಿನಲ್ಲಿ ಇಡಲಾಗಿದೆ ಎನ್ನುವ ವಿಚಾರ ತಿಳಿದು ಬಂದಿದೆ. ಆದರೆ ಅಮಾನತಿನಲ್ಲಿ ಇಡಲು ಕಾರಣ ಏನು ಎನ್ನುವುದರ ಬಗ್ಗೆ ಯಾವುದೇ ಮಾಹಿತಿಯನ್ನು ಕಂದಾಯ ಇಲಾಖಾ ಅಧಿಕಾರಿಗಳು ನೀಡಲು ಹಿಂದೇಟು ಹಾಕುತ್ತಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.ಈ ಕುರಿತು ಹಿರಿಯ ಅಧಿಕಾರಿಗಳಿಗೂ ಮಾಹಿತಿ ಹಕ್ಕಿನಡಿಯಲ್ಲಿ ಮೇಲ್ಮನವಿ ಸಲ್ಲಿಸಿದರೂ, ತಪ್ಪು ಮಾಹಿತಿಗಳನ್ನು ನೀಡಿ ದಾರಿ ತಪ್ಪಿಸುವ ಪ್ರಯತ್ನವೂ ನಡೆಯುತ್ತಿದೆ ಎನ್ನುವ ಆರೋಪವೂ ಕೇಳಿ ಬರಲಾರಂಭಿಸಿದೆ. ತಿಂಗಳಿಗೆ ೩ ಸಾವಿರದಂತೆ 18 ತಿಂಗಳ ಮಾಶಾಸನವನ್ನು ತಡೆಹಿಡಿದಿರುವುದರ ಹಿಂದೆ ಅಧಿಕಾರಿಗಳ ಕೈವಾಡವಿದ್ದು, ಹಿರಿಯ ಅಧಿಕಾರಿಗಳೂ ಈ ಕುರಿತು ಸ್ಪಂದನೆ ನೀಡುತ್ತಿಲ್ಲ ಎನ್ನುವ ಆರೋಪವೂ ಇದೆ.



This post first appeared on V4news, please read the originial post: here

Share the post

ಕಳೆದ 18 ತಿಂಗಳಿನಿಂದ ಬಾರದ ಅಂಗವಿಕಲ ಮಾಶಾಸನ:ಕಾರಣ ತಿಳಿಸಲು ಕಂದಾಯ ಅಧಿಕಾರಿಗಳು ವಿಫಲ.

×

Subscribe to V4news

Get updates delivered right to your inbox!

Thank you for your subscription

×