Get Even More Visitors To Your Blog, Upgrade To A Business Listing >>

ಮರದ ದಿಮ್ಮಿಗಳ ಅಕ್ರಮ ಸಾಗಾಟ:ಅರಣ್ಯಾಧಿಕಾರಿಗಳಿಂದ ಕಾರ್ಯಾಚರಣೆ

ಆಕ್ರಮ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ವಾಹನ ಸಮೇತ ಮರದ ದಿಮ್ಮಿಗಳನ್ನು ಮೂಡಬಿದ್ರೆ ವಲಯ ಅರಣ್ಯಾಧಿಕಾರಿಗಳು ಕಿನ್ನಿಗೋಳಿ ಸಮೀಪದ ಪುನರೂರಿನಲ್ಲಿ ವಶಪಡಿಸಿಕೊಂಡಿದ್ದಾರೆ, ವಶಪಡಿಸಿಕೊಂಡ ದಿಮ್ಮಿಗಳ ಮೌಲ್ಯ ಸುಮಾರು 1ಲಕ್ಷ ರೂಪಾಯಿಗಳು ಎಂದು ಅಂದಾಜಿಸಲಾಗಿದೆ, ಸೋಮವಾರ ರಾತ್ರಿ ಅರಣ್ಯ ಸಿಬಂಧಿಗಳು ಪುನರೂರು ಸಮೀಪ ರಾತ್ರಿ ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ, ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದು, ವಾಹನವನ್ನು ನಿಲ್ಲಿಸಿ ತಪಾಸಣೆಗೊಳಪಡಿಸಿದಾಗ ಈ ಘಟನೆ ಬಯಲಾಗಿದೆ, ಆರೋಪಿಗಳು ಕೋಡಲೇ ಪರಾರಿಯಾಗಿದ್ದಾರೆ. ಮೂಡಬಿದ್ರೆ ವಲಯ ಅರಣ್ಯಾಧಿಕಾರಿ ಪ್ರಕಾಶ್ ಪೂಜಾರಿಯವರ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಕೆ.ಸಿ.ಮ್ಯಾಥ್ಯೂ, ಅಶ್ವಿತ್ ಗಟ್ಟಿ, ಮಂಜುನಾಥ ಗಾಣಿಗ, ಅರಣ್ಯ ರಕ್ಷಕರಾದ ಸಂತೋಶ್, ಶಂಕರ್, ಸಂದೀಪ್, ವಾಹನ ಚಾಲಕ ಮಿಥುನ್ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು. ಮೂಡಬಿದ್ರೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎನ್. ಅಚ್ಚಪ್ಪ ಮುಂದಿನ ತನಿಖೆ ನಡೆಸುತ್ತಿದ್ದಾರೆ.



This post first appeared on V4news, please read the originial post: here

Share the post

ಮರದ ದಿಮ್ಮಿಗಳ ಅಕ್ರಮ ಸಾಗಾಟ:ಅರಣ್ಯಾಧಿಕಾರಿಗಳಿಂದ ಕಾರ್ಯಾಚರಣೆ

×

Subscribe to V4news

Get updates delivered right to your inbox!

Thank you for your subscription

×