Get Even More Visitors To Your Blog, Upgrade To A Business Listing >>

ಉಡುಪಿಯಲ್ಲಿ ಮಾದಕ ವ್ಯಸನ ವಿರೋಧಿ ಆಚರಣೆಗೆ. ಮಣಿಪಾಲದ ಕೆನಾರಾ ಮಾಲ್‌ನಲ್ಲಿ ನೂಕು ನುಗ್ಗಲು. ವಿದ್ಯಾರ್ಥಿಗಳಿಗೆ ಪೊಲೀಸರ ರಕ್ಷಣೆ!.

Tags: agravesup

 ಉಡುಪಿಯ ಕೆನರಾ ಮಾಲ್‌ನಲ್ಲಿ ವಿದ್ಯಾರ್ಥಿಗಳ ನೂಕು ನುಗ್ಗಲಾಯಿತು. ಯಾವುದೋ ಸಿನೆಮಾಕ್ಕೆ ನಡೆದ ನೂಕು ನುಗ್ಗಲಲ್ಲ…ವಿದ್ಯಾರ್ಥಿಗಳಿಗೆ ಪೊಲೀಸರ ರಕ್ಷಣೆ ಸಿಕ್ಕಿತು. ಅಲ್ಲಿ ನಡೆದದ್ದಾದರೂ ಏನು ಗೊತ್ತಾ? ಇಲ್ಲಿದೆ ವರದಿ ಇದು ಮಣಿಪಾಲದ ಕೆನಾರಾ ಮಾಲ್. ಭಾರತ್ ಸಿನೆಮಾಸ್ ಈ ಮಾಲ್ ನಲ್ಲೇ ಇರೋದು. ಇಂದು ಬೆಳಗ್ಗೆ ಮಾತ್ರ ಏಕಾಏಕಿ ಮೂನ್ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಮಾಲ್ ಗೆ ಬಂದಿದ್ದರು. ಒಂದು ಹಂತದಲ್ಲಿ ನೂಕುನುಗ್ಗಲಾಯಿತು. ಯಾವುದೋ ಸಿನೆಮಾಗೆ ಈ ವಿದ್ಯಾರ್ಥಿಗಳ ದಂಡು ಅಂತ ಅಂದುಕೊಳ್ಳಬೇಡಿ. ಇವರೆಲ್ಲ ಬಂದದ್ದು ಮಾದಕ ವ್ಯಸನ ವಿರೋಧಿ ಆಚರಣೆಗೆ..ಯಸ್ ಉಡುಪಿ ಜಿಲ್ಲಾ ಪೊಲೀಸ್ , ಕಾರ್ಯನಿರತ ಪತ್ರಕರ್ತರ ಸಂಘ, ಮತ್ತು ಪ್ರೆಸ್ ಕ್ಲಬ್ ಆಶ್ರಯದಲ್ಲಿ ಮಾದಕ ವ್ಯಸನ ವಿರೋಧಿ ಮಾಸಾಚರಣೆ ನಡೆಯುತ್ತಿದ್ದು ಅದರ ಭಾಗವಾಗಿ ಇಂದು ಸೆಲ್ಪಿ ವಿದ್ ಸಹಿ ಸಂಗ್ರಹ ಅಭಿಯಾನ ನಡೆಯಿತು.

ಮೊನ್ನೆಯಷ್ಟೇ ಬಿಗ್ ಬಜಾರ್ ನಲ್ಲಿ ಈ ಕಾರ್ಯಕ್ರಮ ನಡೆದಿದ್ದು ಯಶಸ್ಸಿಗೆ ಕಾರಣವಾಗಿತ್ತು. ಇದರ ಮುಂದುವರೆದ ಭಾಗವಾಗಿ ಇಂದು ಮಣಿಪಾಲದ ಕೆನರಾ ಮಾಲ್ ನಲ್ಲಿ ಕಾರ್ಯಕ್ರಮ ನಡೆಯಿತು. ಅದಮಾರುಮಠದ ಕಿರಿಯ ಯತಿ ಈಶ ಪ್ರಿಯ ತೀರ್ಥ ಸ್ವಾಮೀಜಿ ಉಡುಪಿಯಿಂದ ಮಣಿಪಾಲದ ತನಕ ಪಾದಯಾತ್ರೆ ಮೂಲಕ ಸಾಗಿ ಬಂದು ಅಭಿಯಾನಕ್ಕೆ ಮೆರುಗು ನೀಡಿದರು. ನಂತರ ಸಹಿ ಹಾಕುವ ಮೂಲಕ ಮತ್ತು ಬಿಳಿ ಬಟ್ಟೆಯಲ್ಲಿ ಹಸ್ತ ಮುದ್ರೆ ಒತ್ತುವಮೂಲಕ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದರು.ನಂತ್ರ ಮಾತನಾಡಿದ ಶ್ರೀಗಳು ಮಾದಕ ವ್ಯಸನ ಮಾಸಾಚರಣೆಯ ಮೂಲಕ ಉಡುಪಿ ದೇಶಕ್ಕೇ ರೋಲ್ ಮಾಡಲ್ ಆಗಲಿ ಎಂದು ಆಶಿಸಿದರು. ಸಮಾರಂಭ ಸರ್ವ ಧರ್ಮಗಳ ಗುರುಗಳ ಸಮಾಗಮದೊಂದಿಗೆ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಉಡುಪಿ ಧರ್ಮ ಪ್ರಾಂತ್ಯದ ಧರ್ಮಗುರು ಅತಿ ವಂದನೀಯ ಜೆರಾಲ್ಡ್ ಐಸಾಕ್ ಲೋಬೋ ಹಾಗೂ ಮಲ್ಪೆ ಜಾಮೀಯಾ ಮಸೀದಿ ಯ ಧರ್ಮಗುರು ಮೌಲಾನಾ ಇಮ್ರಾನುಲ್ಲಾ ಖಾನ್ ಮಸ್ಸೂರಿ ತಮ್ಮ ಸಂದೇಶಗಳನ್ನು ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮಣ್ ನಿಂಬರಗಿ ಪ್ರಾಸ್ತಾವಿಕ ಮಾತನಾಡಿದರು.ಸಮಾರಂಭದಲ್ಲಿ ಪ್ರಶಸ್ತಿ ವಿಜೇತ ನಟ ವಿಜಯ್ ಮಯ್ಯ, ಕಾರ್ಯನಿರತ ಪತ್ರಕರ್ತರ ಸಂಘದ ಅದ್ಯಕ್ಷ ಗಣೇಶ್ ಪ್ರಸಾದ್ ಪಾಂಡೇಲು, ಅಕ್ಯುಮೆನ್ ಟ್ರೈನಿಂಗ್ ಇನ್ಸುಟೂಟ್ ಮಂಗಳೂರಿನ ಟ್ರಸ್ಟಿ ಜೋಯಲ್ ಸೋನ್ಸ್ , ಕೆನರಾ ಮಾಲ್ ನ ಮ್ಯಾನೇಜರ್ ಪ್ರಕಾಶ್ ಉಪಸ್ಥಿತರಿದ್ದರು..ಐನರಕ್ಕೂ ಅಧಿಕ ಮಂದಿ ಸಹಿ ಸಂಗ್ರಹ ಅಭಿಯಾನದಲ್ಲಿ ಪಾಲ್ಗೊಂಡರು.This post first appeared on V4news, please read the originial post: here

Share the post

ಉಡುಪಿಯಲ್ಲಿ ಮಾದಕ ವ್ಯಸನ ವಿರೋಧಿ ಆಚರಣೆಗೆ. ಮಣಿಪಾಲದ ಕೆನಾರಾ ಮಾಲ್‌ನಲ್ಲಿ ನೂಕು ನುಗ್ಗಲು. ವಿದ್ಯಾರ್ಥಿಗಳಿಗೆ ಪೊಲೀಸರ ರಕ್ಷಣೆ!.

×

Subscribe to V4news

Get updates delivered right to your inbox!

Thank you for your subscription

×