Get Even More Visitors To Your Blog, Upgrade To A Business Listing >>

ಮಂಜೇಶ್ವರ: ತಾರಕ್ಕೇರಿದ  ತೂಮಿನಾಡು ನೀರಿನ ಸಮಸ್ಯೆ : ಕಾಲನಿವಾಸಿಗಳೊಂದಿಗೆ ಚೆಲ್ಲಾಟವಾಡುತ್ತಿರುವ ಅಧಿಕೃತರು :

ಮಂಜೇಶ್ವರ ಗ್ರಾ. ಪಂ. ನ 2 ನೇ ವಾರ್ಡಿನಲ್ಲಿ ನೀರಿನ ಸಮಸ್ಯೆ ಮತ್ತೆ ತಾರಕ್ಕೇರಿದೆ. ಇಲ್ಲಿಯ ಕಾಲನಿ ವಾಸಿಗಳು ನೀರಿಲ್ಲದೆ ಪರದಾಡುತಿದ್ದರೂ ಯಾವುದಾದರೊಂದು ನೆಪ ಹೇಳಿ ದುರಸ್ಥಿಗೆ ಕೊಂಡೊಯ್ಯಲಾದ ಮೋಟಾರುಗಳನ್ನು ಕೆ ಡಬ್ಲ್ಯು ಎ ಅಧಿಕೃತರು ಮರಳಿ ತರೂದಿಲ್ಲವೆಂಬುದಾಗಿ ಸ್ಥಳೀಯರು ಆರೋಪಿಸುತಿದ್ದಾರೆ.

ಇಲ್ಲಿ ಇದೀಗ ಎರಡು ಕೊಳವೆ ಬಾವಿಗಳಿದೆ. ಅವುಗಳ ಮೋಟಾರುಗಳು ಹಾಳಾದ ಹಿನ್ನೆಲೆಯಲ್ಲಿ ಅದನ್ನು ದುರಸ್ಥಿ ಕೊಂಡೊಯ್ದು ತಿಂಗಳುಗಳ ಬಳಿಕ ಮರಳಿ ತಂದಾಗ ಅದಕ್ಕೆ ಅಳವಡಿಸಬೇಕಾಗಿ ಮೀಸಲಿರಿಸಿದ ಪೈಪ್ ಗಳನ್ನು ಯಾರೋ ಕದ್ದೊಯ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕೃತರು ಅದನ್ನು ಅಳವಡಿಸದೆ ಅಲ್ಲಿಂದ ಕಾಲ್ಗಿತ್ತಿದ್ದಾರೆ. ಇದೀಗ ಕಾಲನಿವಾಸಿಗಳಿಗೆ ನಾಲ್ಕು ದಿವಸಗಳಿಗೆ ಒಮ್ಮೆ ಕೇವಲ ಒಂದು ಅಥವಾ ಒಂದೂವರೆ ತಾಸು ಮಾತ್ರ ನೀರನ್ನು ಸರಬರಾಜು ಮಾಡಲಾಗುತ್ತದೆ. ಇದು ಸಾಕಾಗದ ಹಿನ್ನೆಲೆಯಲ್ಲಿ ಕಾಲನಿ ವಾಸಿಗಳು ನೀರಿಗಾಗಿ ಪರದಾಡ ಬೇಕಾದ ಪರಿಸ್ಥಿತಿ ಬಂದೊದಗಿದೆ. ಸಂಬಂಧಪಟ್ಟವರು ಇತ್ತ ಕಡೆ ಗಮನ ಹರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ವರದಿ: ರೆಹಮಾನ್ ಉದ್ಯಾವರ, ಮಂಜೇಶ್ವರ

The post ಮಂಜೇಶ್ವರ: ತಾರಕ್ಕೇರಿದ  ತೂಮಿನಾಡು ನೀರಿನ ಸಮಸ್ಯೆ : ಕಾಲನಿವಾಸಿಗಳೊಂದಿಗೆ ಚೆಲ್ಲಾಟವಾಡುತ್ತಿರುವ ಅಧಿಕೃತರು : ಕೆಡುಬ್ಲ್ಯುಎ ಅಧಿಕಾರಿಗಳ ಅಟ್ಟಹಾಸಕ್ಕೆ ಸ್ಥಳೀಯರ ಆಕ್ರೋಶ appeared first on V4News.



This post first appeared on V4news, please read the originial post: here

Share the post

ಮಂಜೇಶ್ವರ: ತಾರಕ್ಕೇರಿದ  ತೂಮಿನಾಡು ನೀರಿನ ಸಮಸ್ಯೆ : ಕಾಲನಿವಾಸಿಗಳೊಂದಿಗೆ ಚೆಲ್ಲಾಟವಾಡುತ್ತಿರುವ ಅಧಿಕೃತರು :

×

Subscribe to V4news

Get updates delivered right to your inbox!

Thank you for your subscription

×