Get Even More Visitors To Your Blog, Upgrade To A Business Listing >>

ತುಂಬೆ ಡ್ಯಾಂನಲ್ಲಿ ನೀರಿನ ಶೇಖರಣೆ ಇಳಿಮುಖ, ಮಾ. ೨೦ರಿಂದ ೩೬ ಗಂಟೆಗೊಮ್ಮೆ ನೀರು ಪೂರೈಕೆ,  ಮಂಗಳೂರು ಮೇಯರ್ ಕವಿತಾ ಸನಿಲ್ ಹೇಳಿಕೆ

kavita

ಮಂಗಳೂರು ಮಹಾನಗರಕ್ಕೆ ಕುಡಿಯುವ ನೀರಿನ ಪೂರೈಕೆ ಮಾಡುವ ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಶೇಖರಣೆ ಇಳಿಮುಖವಾಗಿದೆ. ಹೀಗಾಗಿ ಮಾ. ೨೦ರಿಂದ ೩೬ ಗಂಟೆಗಳಿಗೊಮ್ಮೆ ನಗರಕ್ಕೆ ಕುಡಿಯುವ ನೀರಿನ ಪೂರೈಕೆ ಮಾಡಲು ನಿರ್ಧರಿಸಲಾಗಿದೆ ಎಂದು ಮಂಗಳೂರು ಮೇಯರ್ ಕವಿತಾ ಸನಿಲ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಜನರಿಗೆ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ಮಾ.೨೦ರಿಂದ ೩೬ ಗಂಟೆಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುವುದು. ಸೋಮವಾರ ಬೆಳಗ್ಗೆ ೬ರಿಂದ ಮಂಗಳವಾರ ಸಂಜೆ ೬ ಗಂಟೆಯವರೆಗೆ ಮತ್ತು ಗುರುವಾರ ಸಂಜೆ ೬ ಗಂಟೆಯಿಂದ ಶನಿವಾರ ಬೆಳಗ್ಗೆ ೬ ಗಂಟೆಯವರೆಗೆ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ. ಉಳಿದ ಅವಧಿಯಲ್ಲಿ ಎಲ್ಲಾ ವಾರ್ಡ್‌ಗಳಿಗೆ ನೀರು ಪೂರೈಕೆ ಮಾಡಲಾಗುವುದು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಉಪಮೇಯರ್ ರಜನೀಶ್, ಮಾಜಿ ಮೇಯರ್ ಹರಿನಾಥ್ ಎಂ., ಪಾಲಿಕೆ ಆಯುಕ್ತ ಮಹಮ್ಮದ್ ನಝೀರ್ ಮತ್ತಿತರರು ಉಪಸ್ಥಿತರಿದ್ದರು.



This post first appeared on V4news, please read the originial post: here

Share the post

ತುಂಬೆ ಡ್ಯಾಂನಲ್ಲಿ ನೀರಿನ ಶೇಖರಣೆ ಇಳಿಮುಖ, ಮಾ. ೨೦ರಿಂದ ೩೬ ಗಂಟೆಗೊಮ್ಮೆ ನೀರು ಪೂರೈಕೆ,  ಮಂಗಳೂರು ಮೇಯರ್ ಕವಿತಾ ಸನಿಲ್ ಹೇಳಿಕೆ

×

Subscribe to V4news

Get updates delivered right to your inbox!

Thank you for your subscription

×