Get Even More Visitors To Your Blog, Upgrade To A Business Listing >>

ಮಂಜೇಶ್ವರ:ಪಿಂಚಣಿದಾರರಿಂದ ಜಿಲ್ಲಾಧಿಕಾರಿ ಕಚೇರಿ ಮುಂಬಾಗದಲ್ಲಿ ಪ್ರತಿಭಟನಾ ಧರಣಿ

vlcsnap-2017-02-18-19h20m10s122-copy

 ರಾಜ್ಯ ಪಿಂಚಣಿದಾರರ ಜಿಲ್ಲಾ ಸಮಿತಿ ವತಿಯಿಂದ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಹಲವಾರು ಮಂದಿ ಪಾಲ್ಗೊಂಡರು. 2015 ಎಪ್ರಿಲ್ ನಿಂದ ರಾಜ್ಯದಲ್ಲಿ ಜ್ಯಾರಿಗೆ ತಂದಿರುವ ಪಾಲುದಾರಿಕಾ ಪಿಂಚಣಿ ರೀತಿಯನ್ನು ಕೊನೆಗೊಳಿಸಬೇಕು, ಪಿಂಚಣಿ ಹೆಚ್ಚಳಗೊಂಡ ಮೊತ್ತವನ್ನು ಏಕಕಾಲದಲ್ಲಿ ಪಾವತಿಸಬೇಕು. ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆಯನ್ನು ಹಮ್ಮಿ ಕೊಳ್ಳಲಾಗಿತ್ತು. ವಿದ್ಯಾನಗರ ಸರಕಾರಿ ಕಾಲೇಜು ಸಮೀಪದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಲಾಯಿತು. ಬಳಿಕ ಜಿಲ್ಲಾಧಿಕಾರಿ ಕಚೇರಿ ಮುಂಬಾಗದಲ್ಲಿ ನಡೆದ ಧರಣಿಯನ್ನು ಶಾಸಕ ಎನ್ ಎ ನೆಲ್ಲಿಕುನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಪಿಂಚಣಿದಾರರ ನ್ಯಾಯಯುತವಾದ ಬೇಡಿಕೆಯನ್ನು ಈಡೇರಿಸುವಂತೆ ನಾನು ಕೂಡಾ ಸಂಬಂಧಪಟ್ಟವರನ್ನು ಒತ್ತಾಯಿಸುವುದಾಗಿ ಅವರು ಹೇಳಿದರು. ಪಿ ಕೆ ಮಾಧವನ್ ನಾಯರ್ ಅಧ್ಯಕ್ಷತೆ ವಹಿಸಿದರು. ಬಿ ಕೃಷ್ಣ, ಕುಂಞಂಬು ನಾಯರ್ ಮೊದಲಾದವರು ಮಾತನಾಡಿದರು.



This post first appeared on V4news, please read the originial post: here

Share the post

ಮಂಜೇಶ್ವರ:ಪಿಂಚಣಿದಾರರಿಂದ ಜಿಲ್ಲಾಧಿಕಾರಿ ಕಚೇರಿ ಮುಂಬಾಗದಲ್ಲಿ ಪ್ರತಿಭಟನಾ ಧರಣಿ

×

Subscribe to V4news

Get updates delivered right to your inbox!

Thank you for your subscription

×