Get Even More Visitors To Your Blog, Upgrade To A Business Listing >>

ಮಂಗಳೂರಿನಲ್ಲಿ ನಂದಿನಿ ಕಿರಿಯ ಚಿತ್ರ ಕಲಾವಿದರ ಸ್ಪರ್ಧೆ, ದ. ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಆಯೋಜನೆ

artchil

artchild
ದ. ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ನಂದಿನಿ ಕಿರಿಯ ಚಿತ್ರ ಕಲಾವಿದರ ಸ್ಪರ್ಧೆ ಮಂಗಳೂರಿನಲ್ಲಿ ನಡೆಯಿತು.
ನಗರದ ಮಿಲಾಗ್ರಿಸ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿನ ಪ್ರತಿಭೆಗಳನ್ನು ಅನಾವರಣಗೊಳಿಸುವ ಉದ್ದೇಶ ಮತ್ತು ನಂದಿನಿ ಉತ್ಪನ್ನಗಳ ಕುರಿತು ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ದ. ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ. ಬಿ. ವಿ. ಸತ್ಯನಾರಾಯಣ, ನಿರ್ದೇಶಕರಾದ ಕಾಪು ದಿವಾಕರ್ ಶೆಟ್ಟಿ, ಕೆ. ಸೀತಾರಾಮ್ ರೈ, ಜಾನಕಿ ಹಂದೆ ಮತ್ತಿತರರು ಉಪಸ್ಥಿತರಿದ್ದರು.This post first appeared on V4news, please read the originial post: here

Share the post

ಮಂಗಳೂರಿನಲ್ಲಿ ನಂದಿನಿ ಕಿರಿಯ ಚಿತ್ರ ಕಲಾವಿದರ ಸ್ಪರ್ಧೆ, ದ. ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಆಯೋಜನೆ

×

Subscribe to V4news

Get updates delivered right to your inbox!

Thank you for your subscription

×