Get Even More Visitors To Your Blog, Upgrade To A Business Listing >>

ಹೊಸ ಬಟ್ಟೆ, ತಿಂಡಿ ಖರೀದಿಸಲು ಜನರ ಪರದಾಟ, ಅವೈಜ್ಞಾನಿಕ ನೋಟು ರದ್ದಿನಿಂದ ಹಬ್ಬ ಆಚರಿಸಲು ಸಮಸ್ಯೆ, ಕೇಂದ್ರ ಸರ್ಕಾರದ ವಿರುದ್ಧ ಐವನ್ ಡಿಸೋಜ ವಾಗ್ದಾಳಿ

dsouza

ಕೇಂದ್ರ ಸರ್ಕಾರದ ನೋಟು ಅಮಾನ್ಯ ಕ್ರಮದಿಂದಾಗಿ ಹಬ್ಬವನ್ನು ಆಚರಿಸಲು ಕೂಡಾ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದು ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೋಟು ಅಮಾನ್ಯದಿಂದಾಗಿ ಹಬ್ಬ ಆಚರಿಸಲು ಸಮಸ್ಯೆಯಾಗಿದೆ. ಹೊಸ ಬಟ್ಟೆ, ತಿಂಡಿತಿನಿಸುಗಳನ್ನು ಖರೀದಿಸಲು ನಗದು ಸಮಸ್ಯೆ ಎದುರಾಗಿದೆ. ಕೂಲಿ ಕಾರ್ಮಿಕರಿಗೆ ಸಂಬಳ ಸಿಗುತ್ತಿಲ್ಲ. ಕೇಂದ್ರ ಸರ್ಕಾರ ದಿನಕ್ಕೊಂದು ಕಾನೂನು ಜಾರಿಗೊಳಿಸಿ ಚೆಲ್ಲಾಟವಾಡುತ್ತಿದೆ. ಎಲ್ಲಾ ಕಡೆಗಳಲ್ಲಿ ಕ್ಯಾಶ್‌ಲೆಸ್, ಸ್ವೈಪಿಂಗ್ ಮೆಷಿನ್ ವ್ಯವಸ್ಥೆ ಸಾಧ್ಯವಿಲ್ಲ. ಹೆಚ್ಚಿನವರಲ್ಲಿ ಬ್ಯಾಂಕ್ ಖಾತೆಯೆ ಇಲ್ಲ. ಈ ಬಗ್ಗೆ ಮಾತನಾಡಿದರೆ ದೇಶದ್ರೋಹದ ಪಟ್ಟ ನೀಡಲಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಡಿ. ೨೨ರಂದು ಮಂಗಳೂರಿನ ಕಂಕನಾಡಿ ಮಾರುಕಟ್ಟೆ ಮೈದಾನದಲ್ಲಿ ಸರ್ವಧರ್ಮ ಕ್ರಿಸ್‌ಮಸ್ ಆಚರಣೆ ನಡೆಯಲಿದೆ ಎಂದು ಐವನ್ ಮಾಹಿತಿ ನೀಡಿದರು.



This post first appeared on V4news, please read the originial post: here

Share the post

ಹೊಸ ಬಟ್ಟೆ, ತಿಂಡಿ ಖರೀದಿಸಲು ಜನರ ಪರದಾಟ, ಅವೈಜ್ಞಾನಿಕ ನೋಟು ರದ್ದಿನಿಂದ ಹಬ್ಬ ಆಚರಿಸಲು ಸಮಸ್ಯೆ, ಕೇಂದ್ರ ಸರ್ಕಾರದ ವಿರುದ್ಧ ಐವನ್ ಡಿಸೋಜ ವಾಗ್ದಾಳಿ

×

Subscribe to V4news

Get updates delivered right to your inbox!

Thank you for your subscription

×