Get Even More Visitors To Your Blog, Upgrade To A Business Listing >>

ಉಡುಪಿ: ರಾಜ್ಯದ ಆಡಳಿತ ವರ್ಗ ಬ್ರಷ್ಟಾಚಾರದಲ್ಲಿ ತೊಡಗಿದೆ: ಸಿ‌ಎಂಗೆ ನೈತಿಕತೆ ಇದ್ದರೆ ಸಚಿವ ಮೇಟಿ ರಾಜೀನಾಮೆ ಪಡೆಯಲಿ: ಉಡುಪಿಯಲ್ಲಿ ಸಂಸದೆ ಶೋಭಾ ಆಗ್ರಹ

images

ಬಿಜೆಪಿ ಶಾಸಕರು ಸದನದಲ್ಲಿ ಅಶ್ಲೀಲ ಚಿತ್ರ ನೋಡಿದ್ದಾಗ ಬೊಬ್ಬೆಹಾಕಿದ್ದ ಕಾಂಗ್ರೆಸ್ ಈಗ ಯಾಕೆ ತಮ್ಮ ಸಚಿವರ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು ಅಂದು ಬಿಜೆಪಿ ಶಾಸಕರು ರಾಜೀನಾಮೆ ನೀಡಿದ್ದರು. ಈಗ ಯಾಕೆ ಸಿ‌ಎಂ ಇವರ ರಕ್ಷಣೆಗೆ ನಿಂತಿದ್ದಾರೆ ಎಂದು ಪ್ರಶ್ನಿಸಿದರು.
ಅಬಕಾರಿ ಸಚಿವ ಮೇಟಿ ಯವರ ರಾಸಲೀಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರೀಯಿಸಿದ ಶೋಭಾ ಕರಂದ್ಲಾಜೆ ಈ ಅಶ್ಲೀಲ ಸಿಡಿಯನ್ನು ರಾಜ್ಯದ ಜನತೆ ವೀಕ್ಷಿಸಬಾರದು. ಮಾಧ್ಯಮಗಳು ಇದನ್ನು ಪ್ರಸರ ಮಾಡಬಾರದು. ಟಿವಿಯನ್ನು ಮಕ್ಕಳೂ ನೋಡುತ್ತಾರೆ. ತುಂಬಾ ಕೆಟ್ಟಡಾದಿ ಮೇಟಿಯವರ ನಡವಳಿಕೆ ಇದೆ. ಆದ್ದರಿಂದ ಸಿ‌ಎಂ ಗೆ ನೈತಿಕತೆ ಇದ್ದರೆ ಮೇಟಿ ಮತ್ತು ತನ್ವೀರ್ ಸೇಠ್ ಅವರಿಂದ ರಾಜೀನಾಮೆ ಪಡೆಯಲಿ ಎಂದು ಆಗ್ರಹಿಸಿದರು.
ಇನ್ನು ರಾಜ್ಯದಲ್ಲಿ ಸಿ‌ಎಂ ಆಪ್ತರೇ ಅಕ್ರಮ ಸಂಪತ್ತಿನಲ್ಲಿ ಸಿಕ್ಕಿ ಹಾಕಿಕೊಂಡಿರುವ ಬಗ್ಗೆ ಮಾತನಾಡಿದ ಶೋಭಾ ಕಪ್ಪು ಹಣದ ಬಗ್ಗೆ ಮಾತನಾಡುವ ಕೇಂದ್ರದ ಕಾಂಗ್ರೆಸ್ ಮುಖಂಡರು ಕರ್ನಾಟಕದ ಬ್ರಷ್ಟಾಚಾರದ ಬಗ್ಗೆ ಮಾತನಾಡಲಿ . ಸಿ‌ಎಂ ಆಪ್ತರೇ ಹೊಸ ನೋಟಿನೊಂದಿಗೆ ಸಿಕ್ಕಿ ಹಾಕಿಕೊಂಡಿದ್ದಾರೆ. ಬ್ರಷ್ಟಾಚಾರದಲ್ಲಿ ಇಡೀ ಆಡಳಿತ ಯಂತ್ರ ಶಾಮೀಲಾಗಿದೆ. ಸಿ‌ಎಂ ಹಾಗೂ ಮಂತ್ರಿ ಮಂಡಲ ಇದ ಬೆನ್ನಿಗಿದೆ. ತನಗೆ ಬೇಕಾಗಿರುವ ಅಧಿಕಾರಿಗಳನ್ನು ಇಟ್ಟುಕೊಂಡು ಸಿ‌ಎಂ ಸಿದ್ದರಾಮಯ್ಯ ಭ್ರಹ್ಮಾಂಡ ಬ್ರಷ್ಟಾಚಾರದಲ್ಲಿ ತೊಡಗಿದ್ದಾರೆ . ಇದರ ಪರಿಣಾಮವನ್ನು ರಾಜ್ಯದ ಬಡ ಜನತೆ ಎದುರಿಸುತ್ತಿದ್ದಾರೆ ಎಂದರು.
ರಿಪೋರ್ಟರ್: ಸಂತೋಷ್ ಸರಳೇಬೆಟ್ಟು



This post first appeared on V4news, please read the originial post: here

Share the post

ಉಡುಪಿ: ರಾಜ್ಯದ ಆಡಳಿತ ವರ್ಗ ಬ್ರಷ್ಟಾಚಾರದಲ್ಲಿ ತೊಡಗಿದೆ: ಸಿ‌ಎಂಗೆ ನೈತಿಕತೆ ಇದ್ದರೆ ಸಚಿವ ಮೇಟಿ ರಾಜೀನಾಮೆ ಪಡೆಯಲಿ: ಉಡುಪಿಯಲ್ಲಿ ಸಂಸದೆ ಶೋಭಾ ಆಗ್ರಹ

×

Subscribe to V4news

Get updates delivered right to your inbox!

Thank you for your subscription

×