Get Even More Visitors To Your Blog, Upgrade To A Business Listing >>

ಕಳವುಗೈಯುವ ಮಧ್ಯೆ ಮನೆಯವರಿಗೆ ಎಚ್ಚರ: ಪರಾರಿಯಾಗಲೆತ್ನಿಸಿದ ಕಳ್ಳ ಬಿದ್ದದ್ದು ಬಾವಿಗೆ

ಮಂಜೇಶ್ವರ: ಕಳವುಗೈಯುವ ತಯಾರಿ ಮಧ್ಯೆ ಮನೆಯವರು ಎಚ್ಚರಗೊಂಡ ಹಿನ್ನೆಲೆಯಲ್ಲಿ ಪರಾರಿಯಾಗಲು ಯತ್ನಿಸಿದ ಇಬ್ಬರಲ್ಲಿ ಒಬ್ಬ ಕಳ್ಳ ಮನೆಯ ಬಾವಿಗೆ ಬಿದ್ದು ಇದೀಗ ಪೊಲೀಸರ ಅತಿಥಿಯಾದ ಘಟನೆ ಕುಂಬಳೆ ಅಂತೂಸ್ ಕಾಲನಿ ಪರಿಸರದಲ್ಲಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ.

ಬಾವಿಗೆ ಬಿದ್ದ ಕಳ್ಳನನ್ನು ಕೊನೆಗೆ ಅಗ್ನಿಶಾಮಕ ದಳದವರ ಸಹಾಯದಿಂದ ಮೇಲಕ್ಕೆತ್ತಿ ಬಳಿಕ ಊರವರು ಕುಂಬಳೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.  ಅಂತೂಸ್ ಕಾಲನಿ ಇಬ್ರಾಹಿಂ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಮನೆಯ ಮುಂಬಾಗದ ಬಾಗಿಲನ್ನು ಮುರಿದು ಒಳನುಗ್ಗುವ ಮಧ್ಯೆ ಶಭ್ದ ಕೇಳಿ ಮನೆಯವರು ಎಚ್ಚರಗೊಂಡಿದ್ದಾರೆ. ಈ ಸಂದರ್ಭ ಇಬ್ಬರು ಹೊರಗಿನಿಂದ ಓಡುವುದನ್ನು ಮನೆಯವರು ಗಮನಿಸಿದ್ದಾರೆ. ಇದನ್ನು ಕಂಡ ಇಬ್ರಾಹಿಂ ನ ತಮ್ಮ ಮೊಯ್ದೀನ್ ಹಾಗೂ ನೆರೆಮನೆಯಾತ ಸೇರಿ ಸುಮಾರು ಎರಡು ತಾಸುಗಳ ತನಕ ಹುಡುಕಾಡಿ ಯಾರನ್ನೂ ಸಿಗದೆ ಮನೆಯ ಕಡೆ ಹಿಂತಿರುಗುವಾಗ ಮನೆ ಸಮೀಪದ ಬಾವಿಯಲ್ಲಿ ಬೊಬ್ಬೆ ಕೇಳಿ ಬಂದಿದೆ. ಬಳಿಕ ಅಗ್ನಿಶಾಮಕದಳವನ್ನು ಕರೆಸಿ ಬಾವಿಗೆ ಬಿದ್ದ ಕರ್ನಾಟಕ ಶಿವಮೊಗ್ಗ ನಿವಾಸಿಯಾದ ಕಳ್ಳನನ್ನು ಕುಂಬಳೆ ಪೊಲೀಸರಿಗೆ ಊರವರು ಹಸ್ತಾಂತರಿಸಿದ್ದಾರೆ. ಕರ್ನಾಟಕದ ಶಿವಮೊಗ್ಗದಿಂದ ಕೂಲಿ ಕೆಲಸಕಾಗಿ ಆಗಮಿಸಿದ ಇವರು ಬೆಳಿಗ್ಗೆ ಕೂಲಿ ಕೆಲಸ ಹಾಗೂ ರಾತ್ರಿ ವೇಳೆಗಳಲ್ಲಿ ಕಳ್ಳತನ ನಡೆಸುತ್ತಿರುವುದು ಇವರ ಚಾಳಿಯಾಗಿರಬಹುದಾಗಿ ಪೊಲೀಸರು ಶಂಕೆ ವ್ಯಕ್ತ ಪಡಿಸಿದ್ದಾರೆ.

ವರದಿ: ರೆಹಮಾನ್ ಉದ್ಯಾವರ

The post ಕಳವುಗೈಯುವ ಮಧ್ಯೆ ಮನೆಯವರಿಗೆ ಎಚ್ಚರ: ಪರಾರಿಯಾಗಲೆತ್ನಿಸಿದ ಕಳ್ಳ ಬಿದ್ದದ್ದು ಬಾವಿಗೆ appeared first on V4News.



This post first appeared on V4news, please read the originial post: here

Share the post

ಕಳವುಗೈಯುವ ಮಧ್ಯೆ ಮನೆಯವರಿಗೆ ಎಚ್ಚರ: ಪರಾರಿಯಾಗಲೆತ್ನಿಸಿದ ಕಳ್ಳ ಬಿದ್ದದ್ದು ಬಾವಿಗೆ

×

Subscribe to V4news

Get updates delivered right to your inbox!

Thank you for your subscription

×