Get Even More Visitors To Your Blog, Upgrade To A Business Listing >>

ದ.ಕ ಜಿಲ್ಲೆಯ ಶಾಸಕರು ಮಂತ್ರಿ ಪದವಿ ಆಕಾಂಕ್ಷಿತರಲ್ಲ : ಸಂಜೀವ ಮಠಂದೂರು ಹೇಳಿಕೆ

ಪುತ್ತೂರು: ಕಳೆದ 14 ತಿಂಗಳ ಕಾಲ ರಾಜ್ಯದಲ್ಲಿದ್ದ ಅಪವಿತ್ರ ಮೈತ್ರಿಯ ಜನವಿರೋಧಿ ಸರ್ಕಾರಕ್ಕೆ ಆಡಳಿತ ಪಕ್ಷದ ಶಾಸಕರು ಅಂತ್ಯ ಹಾಡಿದ್ದಾರೆ. ಮುಂದಿನ ದಿನಗಳಲ್ಲಿ ಯಡಿಯೂರಪ್ಪ ನೇತೃತ್ವದ ಸುಭದ್ರ ಸರ್ಕಾರ ರಾಜ್ಯದಲ್ಲಿ ಆಡಳಿತ ನಡೆಸಲಿದೆ. ಜಿಲ್ಲೆಯಲ್ಲಿ 7 ಮಂದಿ ಬಿಜೆಪಿ ಶಾಸಕರಿದ್ದು, ನಾವು ಯಾರೂ ಕೂಡಾ ಮಂತ್ರಿ ಪದವಿ ಆಕಾಂಕ್ಷಿತರಲ್ಲ. ಯಾರಿಗೇ ಅವಕಾಶ ನೀಡಿದರೂ ಒಂದಾಗಿ ಜಿಲ್ಲೆಯ ಅಭಿವೃದ್ಧಿಗೆ ಕೆಲಸ ಮಾಡುತ್ತೇವೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ, ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.ಪುತ್ತೂರಿನಲ್ಲಿ ಮಾದ್ಯಮದೊಂದಿಗೆ ಅವರು ಮಾತನಾಡಿ, ವಿಧಾನಸಭಾ ಕ್ಷೇತ್ರದಲ್ಲಿ ಭ್ರಷ್ಟಾಚಾರ ಮುಕ್ತ ಮತ್ತು ಪಾರದರ್ಶಕ ಆಡಳಿತ ವ್ಯವಸ್ಥೆ ಜಾರಿಗೆ ಆದ್ಯತೆ ನೀಡಲಾಗುವುದು. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಪರ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ರಸ್ತೆಗಳ ಅಭಿವೃದ್ಧಿ ಸಂಬಂಧಿಸಿದಂತೆ ಕೇಂದ್ರ ಸರಕಾರದ ಸಡಕ್ ಯೋಜನೆ, ಸಿಆರ್‍ಎಫ್ ಅನುದಾನಗಳನ್ನು ಮಂಜೂರು ಮಾಡಿಸಲು ಶ್ರಮಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭ ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರ ಮಂಡಲ ಬಿಜೆಪಿ ಅಧ್ಯಕ್ಷ ಕೆ. ಜೀವಂಧರ ಜೈನ್, ತಾಲೂಕು ಪಂಚಾಯತ್ ಅಧ್ಯಕ್ಷ ಕೆ. ರಾಧಾಕೃಷ್ಣ ಬೋರ್ಕರ್, ತಾಲೂಕು ಪಂಚಾಯತ್ ಸದಸ್ಯ ಸಾಜಾ ರಾಧಾಕೃಷ್ಣ ಆಳ್ವ, ಬಿಜೆಪಿ ಮಾಧ್ಯಮ ಪ್ರಮುಖ್ ಆರ್.ಸಿ. ನಾರಾಯಣ ಉಪಸ್ಥಿತರಿದ್ದರು.



This post first appeared on V4news, please read the originial post: here

Share the post

ದ.ಕ ಜಿಲ್ಲೆಯ ಶಾಸಕರು ಮಂತ್ರಿ ಪದವಿ ಆಕಾಂಕ್ಷಿತರಲ್ಲ : ಸಂಜೀವ ಮಠಂದೂರು ಹೇಳಿಕೆ

×

Subscribe to V4news

Get updates delivered right to your inbox!

Thank you for your subscription

×