Get Even More Visitors To Your Blog, Upgrade To A Business Listing >>

ಜಿಲ್ಲೆಯಲ್ಲಿ ಕಾಂಗ್ರೆಸ್‌ನವರಿಂದ ವಿನೂತನ ನಾಟಕ ಆರಂಭವಾಗಿದೆ,ಬೇರೆ ಬೇರೆ ವೇಷ ಹಾಕಿ ಮತ ಸೆಳೆಯುವ ಕೆಲಸ ಮಾಡುತ್ತಿದ್ದಾರೆ:ಸಂಜೀವ ಮಠಂದೂರು

ಪುತ್ತೂರು: ಜಿಲ್ಲೆಯಲ್ಲಿ ಕಾಂಗ್ರಸ್‌ನವರ ವಿನೂತನ ನಾಟಕ ಲೋಕಸಭಾ ಚುನಾವಣೆ ಹತ್ತಿರ ಬರುವಾಗ ಆರಂಭವಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಅವರು ಹೇಳಿದ್ದಾರೆ. ಪುತ್ತೂರಿನ ಮಿನಿ ವಿಧಾನ ಸೌಧದಲ್ಲಿ ಅವರು ಪತ್ರಕರ್ತರೊಂದಿಗೆ ಮಾತನಾಡಿದರು. ಮಂಗಳೂರಿನಿಂದ ಹಿಡಿದು ಶಿರಾಡಿ ನಾಟಕ ರಾಜಕೀಯ ನಾಟಕ ಮಾಡಿದ ಕಾಂಗ್ರೆಸ್ ಬೇರೆ ಬೇರೆ ವೇಷ ಹಾಕಿ ಜನರ ಮುಂದೆ ಮತ ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಕಂಬಳಿ ಹೊದ್ದು ಮಲಗಿದ ಕಾಂಗ್ರೆಸ್‌ನವರು ಇವತ್ತು ಏಕಾ ಏಕಿ ಎಚ್ಚರ ಆಗಬೇಕಾದರೆ ಚುನಾವಣೆ ಕಾರಣ ಆಗಿದೆ. ಕೇಂದ್ರದಲ್ಲಿ ನಾಲ್ಕುವರೆ ವರ್ಷದಲ್ಲಿ ಮೋದಿ ಆಡಳಿತ ಇತ್ತು. ಅದಕ್ಕೆ ಮೊದಲು ಕಾಂಗ್ರೆಸ್ ಆಡಳಿತ ಇತ್ತು. ಆಗಲೂ ಕರ್ನಾಟಕದವರು ತುಂಬಾ ಮಂದಿ ರೈಲ್ವೆ ಸಚಿವರಾಗಿದ್ದರು. ಆಗ ಅವರಿಗೆ ಕೆಲಸ ಮಾಡಿಸುವ ಮುತುವರ್ಜಿ ಇಲ್ಲದವರಿಗೆ ಈಗ ನಾಲ್ಕುವರೆ ವರ್ಷದಲ್ಲಿ ಯಾಕೆ ಬಂತು ಎಂದು ಗೊತ್ತಾಗುವುದಿಲ್ಲ ಎಂದರು.

ಮುಂದಿನ ದಿನಗಳಲ್ಲಿ ಹೆಚ್ಚುವರಿ ರೈಲು, ವಿವೇಕಾನಂದ ಕಾಲೇಜಿಗೆ ಹೋಗುವ ಸೇತುವೆ ಅಗಲಿಕರಣ ಎಲ್ಲಾ ಪ್ರಸ್ತಾವನೆ ಕಳುಹಿಸಲಾಗಿದೆ. ಹಂತ ಹಂತವಾಗಿ ಎಲ್ಲಾ ಕಾಮಗಾರಿ ನಡೆಯಲಿದೆ ಎಂದು ಅವರು ತಿಳಿಸಿದರು.



This post first appeared on V4news, please read the originial post: here

Share the post

ಜಿಲ್ಲೆಯಲ್ಲಿ ಕಾಂಗ್ರೆಸ್‌ನವರಿಂದ ವಿನೂತನ ನಾಟಕ ಆರಂಭವಾಗಿದೆ,ಬೇರೆ ಬೇರೆ ವೇಷ ಹಾಕಿ ಮತ ಸೆಳೆಯುವ ಕೆಲಸ ಮಾಡುತ್ತಿದ್ದಾರೆ:ಸಂಜೀವ ಮಠಂದೂರು

×

Subscribe to V4news

Get updates delivered right to your inbox!

Thank you for your subscription

×