Get Even More Visitors To Your Blog, Upgrade To A Business Listing >>

ಮೂಡಬಿದಿರೆ :’ಯಕ್ಷಗಾನದಲ್ಲಿ ಹಾಸ್ಯ’ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟನೆ.

‘ಯಕ್ಷಗಾನದಲ್ಲಿ ಹಾಸ್ಯ’ ಎಂಬ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವು ಪ್ರಚಾರೋಪನ್ಯಾಸ ಮಾಲಿಕೆಯಡಿ ಮಂಗಳೂರು ವಿಶ್ವವಿದ್ಯಾಲಯದ ಡಾ. ಪಿ ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಮೂಡಬಿದಿರೆ ಶ್ರೀ ಧವಳಾ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಎ.ಎಂ ಖಾನ್ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಪ್ರಾದೇಶಿಕ ಕಲೆ, ಸಂಸ್ಕೃತಿಯ ಮಹತ್ವ, ವಿದ್ಯಾರ್ಥಿಗಳಲ್ಲಿ ಅದರ ಬಗ್ಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಕೊಡಗು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕಲೆಗಳ ಬಗ್ಗೆ ವಿವಿಧ ವಿಭಾಗಗಳ ಮೂಲಕ ಮಂಗಳೂರು ವಿಶ್ವವಿದ್ಯಾಲಯ ಕರ್ತವ್ಯ ನಿರ್ವಹಿಸುತ್ತದೆ ಎಂದರು.ಮಂಗಳೂರು ವಿಶ್ವವಿದ್ಯಾಲಯ ಯಕ್ಷಗಾನ ಅಧ್ಯಯನ ಕೇಂದ್ರ ಸಂಯೋಜಕ ಡಾ.ಧನಂಜಯ ಕುಂಬ್ಳೆ ಆಶಯ ಭಾಷಣದಲ್ಲಿ ಯಕ್ಷಗಾನ ಹಾಸ್ಯದಲ್ಲಿ ಜಾತಿ ವಿಷಯ ಬಂದಾಗ ಅದರಲ್ಲಿ ಯಾವುದೇ ಜಾತಿಯನ್ನು ಲೇವಡಿ ಮಾಡುವುದಲ್ಲ, ಆ ಸಮುದಾಯದ ಸಂಕಟಗಳನ್ನು ಬಡತನವನ್ನು ಸಮಾಜಕ್ಕೆ ಮನಮುಟ್ಟುವಂತೆ ತಿಳಿಸುವುದಾಗಿದೆ ಎಂದರು. 

ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಧವಳಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ ರವೀಶ್ ಕುಮಾರ್ ವಹಿಸಿದರು. ಶ್ರೀ ದಿಗಂಬರ ಜೈನ ವಿದ್ಯಾವರ್ಧಕ ಸಂಘದ ಸಂಚಾಲಕ ಕೆ.ಹೇಮರಾಜ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಚಾರ ಸಂಕಿರಣದ ಸಹಸಂಯೋಜಕಿ ಮಲ್ಲಿಕಾ, ಸುಧೇಶ್, ಉಪನ್ಯಾಸಕಿ ಅಂಕಿತಾ ಜೈನ್ ಉಪಸ್ಥಿತರಿದ್ದರು.This post first appeared on V4news, please read the originial post: here

Share the post

ಮೂಡಬಿದಿರೆ :’ಯಕ್ಷಗಾನದಲ್ಲಿ ಹಾಸ್ಯ’ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟನೆ.

×

Subscribe to V4news

Get updates delivered right to your inbox!

Thank you for your subscription

×