Get Even More Visitors To Your Blog, Upgrade To A Business Listing >>

ಉಳ್ಳಾಲ: ಅಂತರ್ ವಾಹನ ಕಳ್ಳತನ ಪ್ರಕರಣ ಪೊಲೀಸರಿಂದ ಆರೋಪಿಗಳ ಬಂಧನ

ಬೃಹತ್ ಅಂತರಾಜ್ಯ ವಾಹನ ಕಳವು ಜಾಲವನ್ನು ಪತ್ತೆಹಚ್ಚಿರುವ ಉಳ್ಳಾಲ ಪೊಲೀಸರು 15 ಪ್ರಕರಣಗಳನ್ನು ಬೇಧಿಸಿ ಮೂವರು ಆರೋಪಿಗಳು ಹಾಗೂ 20 ಲಕ್ಷ ರೂ ಮೌಲ್ಯದ 15 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯುವಲ್ಲಿ ಉಳ್ಳಾಲ ಪೊಲೀಸರು ಯಶಸ್ವಿಯಾಗಿದ್ದಾರೆ.ಮಂಜೇಶ್ವರ ಬಪ್ಪಾಯಿ ತೊಟ್ಟಿ ನಿವಾಸಿ ಶಾಹಿರ್, ಉಪ್ಪಳದ ಮೊಹಮ್ಮದ್ ಆದೀಲ್ ಮತ್ತು ಕಾಸರಗೋಡು ಚೆಂಗಳದ ಅಬ್ದುಲ್ ಮುನಾವರ್ ಯಾನೆ ಮುನ್ನ ಬಂಧಿತರು. ಉಳ್ಳಾಲ ಠಾಣಾ ವ್ಯಾಪ್ತಿಯ 4 ಪ್ರಕರಣಗಳ ಒಟ್ಟು ನಾಲ್ಕು ಬುಲೆಟ್ ಮೋಟಾರ್ ಬೈಕ್, ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ 2 ಪ್ರಕರಣಗಳಲ್ಲಿ ಒಂದು ಬುಲೆಟ್ ಮತ್ತು 1 ಬೈಕ್, ಮಂಗಳೂರು ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ 2 ಪ್ರಕರಣಗಳಲ್ಲಿ ಎರಡು ಬೈಕ್, ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ 1 ಪ್ರಕರಣದಲ್ಲಿ ಒಂದು ಬೈಕ್ ಸೇರಿದಂತೆ ಕಳವು ನಡೆಸಿದ ಒಟ್ಟು 15 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.ಕಾರ್ಯಾಚರಣೆಯಲ್ಲಿ ಠಾಣಾ ಪಿಎಸ್‍ಐಗಳಾದ ವಿನಾಯಕ ತೋರಗಲ್ ಮತ್ತು ಗುರುವಪ್ಪ ಕಾಂತಿ ಹಾಗೂ ಎಎಸ್‍ಐಗಳಾದ ವಿಜಯರಾಜ್, ಮೋಹನ್ ಕೆ.ವಿ, ರಾಧಾಕೃಷ್ಣ ವಳಾಲ್, ವಿಶ್ವನಾಥ ರೈ ಹಾಗೂ ಸಿಬ್ಬಂದಿಗಳಾದ ದಿನೇಸ್, ಸುರೇಶ್, ಜಯಪ್ರಕಾಶ್ , ಪ್ರವೀಣ್ , ಶಾಂತಪ್ಪ, ಪ್ರಶಾಂತ್, ವಾಸುದೇವ, ರಂಜಿತ್, ಲಿಂಗರಾಜ್, ಚಿದಾನಂದ, ಅಕ್ಬರ್, ಸುರೇಶ್ ಭಾಗವಹಿಸಿದ್ದರು.This post first appeared on V4news, please read the originial post: here

Share the post

ಉಳ್ಳಾಲ: ಅಂತರ್ ವಾಹನ ಕಳ್ಳತನ ಪ್ರಕರಣ ಪೊಲೀಸರಿಂದ ಆರೋಪಿಗಳ ಬಂಧನ

×

Subscribe to V4news

Get updates delivered right to your inbox!

Thank you for your subscription

×