Get Even More Visitors To Your Blog, Upgrade To A Business Listing >>

ಉಡುಪಿಗೆ ಆಗಮಿಸಿದ ಎಬಿ ವಾಜಪೇಯಿ ಚಿತಾಭಸ್ಮ. ಉಡುಪಿಗೆ ಬಂದ ರಥಯಾತ್ರೆಗೆ ಗಣ್ಯರಿಂದ ಸ್ವಾಗತ.

Tags: agravesup

ಕುಂದಾಪುರದಲ್ಲಿ ಹೂವಿನಿಂದ ಅಲಂಕೃತ ರಥಯಾತ್ರೆಯಲ್ಲಿ ಉಡುಪಿಗೆ ಬಂದ ರಥಯಾತ್ರೆಯನ್ನು ರಾಜಕೀಯ ಮುಖಂಡರು, ಗಣ್ಯರು ಉಡುಪಿ ನಗರದ ಚಿತ್ತರಂಜನ್ ವೃತ್ತದ ಬಳಿ ಸ್ವಾಗತಿಸಿದ್ರು. ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಸುನಿಲ್ ಕುಮಾರ್, ರಘುಪತಿ ಭಟ್,ಎಂಎಲ್ ಸಿ ಕೋಟಾ ಶ್ರೀನಿವಾಸ ಪೂಜಾರಿ ವಾಜಪೇಯಿ ಆಪ್ತರಾದ ಬಿಜೆಪಿ ಹಿರಿಯ ಮುಖಂಡ ಸೋಮಶೇಖರ ಭಟ್ ಸಹಿತ ಹಲವು ಗಣ್ಯರು ಹಾಗೂ ಸಾರ್ವಜನಿಕರು ಚಿತಾಭಸ್ಮಕ್ಕೆ ಪುಷ್ಪನಮನ ಸಲ್ಲಿಸಿದ್ರು.

ಈ ವೇಳೆ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿಯವರ ಚಿತಾಭಸ್ಮವನ್ನು ಉಡುಪಿಯಲ್ಲಿ ಸ್ವಾಗತಿಸಿ ನಮನ ಸಲ್ಲಿಸಿದ್ದೇವೆ ಎಂದರು.ಈ ಚಿತಾಭಸ್ಮವನ್ನು ೮ಕಡೆಗಳಲ್ಲಿ ಪವಿತ್ರ ನದಿಗಳಲ್ಲಿ ವಿಸರ್ಜನೆ ಮಾಡಲಾಗುತ್ತಿದೆ, ಉಡುಪಿಯಲ್ಲಿ ಸ್ವಾಗತಿಸಿದ ಚಿತಾಭಸ್ಮವನ್ನು ಮಂಗಳೂರು ಮೂಲಕ ದಕ್ಷಿಣದ ಗಯಾ ಎಂದೇ ಕರೆಯಲ್ಪಡುವ ಉಪ್ಪಿನಂಗಡಿಯಲ್ಲಿ ವಿಸರ್ಜನೆ ಮಾಡುತ್ತಿದ್ದೇವೆ, ಉಪ್ಪಿನಂಗಡಿಯ ಗಯಾ ಪ್ರದೇಶ ಕುಮಾರಧಾರ ಹಾಗೂ ನೇತ್ರಾವತಿಯ ಸಂಗಮ ಸ್ಥಾನವಾಗಿರುವುದರಿಂದ ಅಲ್ಲಿ ವಿಸರ್ಜನೆ ನಡೆಯುವ ಮೂಲಕ ವಾಜಪೇಯಿವರಿಗೆ ಮೋಕ್ಷ ಪ್ರಾಪ್ತಿಯಾಗಲಿ ಎಂದು ಪ್ರಾರ್ಥಿಸಲಾಗುವುದು. ಇನ್ನು ಈ ಚಿತಾಭಸ್ಮ ವಿಸರ್ಜನೆಯಲ್ಲೂ ರಾಜಕೀಯ ನೋಡಬಾರದು, ಇಲ್ಲೂ ರಾಜಕಾರಣ ಮಾಡಿದರೆ ಅದು ಅವರದ್ದು ಸಣ್ಣತನ ಹಾಗೂ ಕ್ಷುಲ್ಲಕತನವಾಗಿದೆ ಎಂದ್ರು.



This post first appeared on V4news, please read the originial post: here

Share the post

ಉಡುಪಿಗೆ ಆಗಮಿಸಿದ ಎಬಿ ವಾಜಪೇಯಿ ಚಿತಾಭಸ್ಮ. ಉಡುಪಿಗೆ ಬಂದ ರಥಯಾತ್ರೆಗೆ ಗಣ್ಯರಿಂದ ಸ್ವಾಗತ.

×

Subscribe to V4news

Get updates delivered right to your inbox!

Thank you for your subscription

×