Get Even More Visitors To Your Blog, Upgrade To A Business Listing >>

ಪುತ್ತೂರಿನಲ್ಲಿರುವ ಜೋಸ್ ಆಲುಕ್ಕಾಸ್ ಚಿನ್ನಾಭರಣ ಮಳಿಗೆ. ಇದೀಗ ಬೆಳ್ಳಿಯ ಆಭರಣಗಳ ಕೌಂಟರ್ ಉದ್ಘಾಟನೆ.

ರಾಕೇಶ್ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಹೆಸರಾಂತ ಸ್ವರ್ಣಾಭರಣ ಸಂಸ್ಥೆಯಾದ ಜೋಸ್ ಆಲುಕ್ಕಾಸ್ ಜ್ಯುವೆಲ್ಲರಿಯ ಪುತ್ತೂರಿನ ಮಳಿಗೆಯಲ್ಲಿ ಬೆಳ್ಳಿಯ ಆಭರಣಗಳ ನೂತನ ಕೌಂಟರನ್ನು ಶನಿವಾರ ತುಳು ಚಲನಚಿತ್ರ ನಟಿ ಅಂಕಿತಾ ಪಟ್ಲ ಉದ್ಘಾಟಿಸಿದರು. ದೀಪ ಬೆಳಗಿಸಿ ಉದ್ಘಾಟನೆ ನೆರವೇರಿಸಿದ ನಟಿ ಅಂಕಿತಾ ಪಟ್ಲ ಮಾತನಾಡಿ, ಪುತ್ತೂರಿನಂತಹ ನಗರದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಜೋಸ್ ಆಲುಕ್ಕಾಸ್ ಸಂಸ್ಥೆಯು ಮಳಿಗೆಯನ್ನು ತೆರೆದು ಇಲ್ಲಿನ ಗ್ರಾಹಕರಿಗೆ ಚಿನ್ನದ ಖರೀದಿಯಲ್ಲಿನ ಆಯ್ಕೆ, ಅವಕಾಶಗಳನ್ನು ಹೆಚ್ಚಿಸಿದೆ. ಚಿನ್ನದ ಎಲ್ಲಾ ವೆರೈಟಿಗಳು ಒಂದೇ ಸೂರಿನಡಿ ಲಭಿಸುವ ಅವಕಾಶವನ್ನು ಇಲ್ಲಿನವರು ಬಳಸಿಕೊಳ್ಳಬೇಕು ಎಂದು ಶುಭಹಾರೈಸಿದರು. ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಐತಪ್ಪ ನಾಯ್ಕ, ಮಳಿಗೆಯ ಮ್ಯಾನೇಜರ್, ರತೀಶ್ ಸಿ.ಪಿ., ಸಹಾಯಕ ಮ್ಯಾನೇಜರ್ ಪ್ರವೀಣ್ ಬಿ.ಪಿ., ಕಟ್ಟಡದ ಮಾಲಕ ಮಹಮ್ಮದ್ ಸಮೀರ್, ಗ್ರಾಹಕರು, ಸಿಬಂದಿ ವರ್ಗದವರು ಉಪಸ್ಥಿತರಿದ್ದರು.


ವಿಶಾಲ ಸಂಗ್ರಹಮಳಿಗೆಯಲ್ಲಿ ನವನವೀನ ವಿನ್ಯಾಸದ ಬೆಳ್ಳಿಯ ಆಭರಣಗಳ ವಿಶಾಲ ಸಂಗ್ರಹ ಮಾಡಲಾಗಿದೆ. ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಚಿನ್ನದ ಆಭರಣದ ಖರೀದಿಗೆ ವಿಶೇಷ ರಿಯಾಯಿತಿಯ ಜತೆಗೆ ಬೆಳ್ಳಿಯನ್ನು ಉಚಿತವಾಗಿ ಪಡೆಯುವ ಅವಕಾಶವನ್ನು ಗ್ರಾಹಕರಿಗೆ ಕಲ್ಪಿಸಲಾಗಿದೆ. ಮಳಿಗೆಯಲ್ಲಿ ಚಿನ್ನದ ಎಕ್ಸ್‌ಚೇಂಜ್ ಆಫರ್, ವಜ್ರದ ಬೆಲೆಯ ಮೇಲೆ ೨೦ ಶೇ. ರಿಯಾಯಿತಿ, ವಿಶೇಷ ಆಫರ್‌ಗಳನ್ನು ಹಮ್ಮಿಕೊಳ್ಳಲಾಗಿದೆ. ವಿಶಾಲವಾದ ಕಾರ್ ಪಾರ್ಕಿಂಗ್ ಸೌಲಭ್ಯವೂ ಇದ್ದು, ರವಿವಾರವೂ ಮಳಿಗೆ ತೆರೆದಿರುತ್ತದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.This post first appeared on V4news, please read the originial post: here

Share the post

ಪುತ್ತೂರಿನಲ್ಲಿರುವ ಜೋಸ್ ಆಲುಕ್ಕಾಸ್ ಚಿನ್ನಾಭರಣ ಮಳಿಗೆ. ಇದೀಗ ಬೆಳ್ಳಿಯ ಆಭರಣಗಳ ಕೌಂಟರ್ ಉದ್ಘಾಟನೆ.

×

Subscribe to V4news

Get updates delivered right to your inbox!

Thank you for your subscription

×