Get Even More Visitors To Your Blog, Upgrade To A Business Listing >>

ಸಿಯಾರ ಲಿಯೋನ್‌ನಲ್ಲಿ ಭಾರೀ ವಜ್ರ ಪತ್ತೆ, ದೇಶದ ಒಳಿತಿಗಾಗಿ ಹರಾಜು ಹಾಕಲು ನಿರ್ಧಾರ

external

ಪಶ್ಚಿಮ ಆಫ್ರಿಕಾದ ಸಿಯಾರ ಲಿಯೋನ್ ದೇಶದ ಗಣಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕ್ರೈಸ್ತ ಧರ್ಮಗುರುವೊಬ್ಬರು ೭೦೬ ಕ್ಯಾರೆಟ್ನ ವಜ್ರವನ್ನು ಪತ್ತೆ ಹಚ್ಚಿದ್ದಾರೆ.
ಧರ್ಮಗುರು ಇಮ್ಯಾನುವೆಲ್ ಮೊಮೊ ಅವರು ಕೋನೊ ಪ್ರದೇಶದ ಗಣಿಯಲ್ಲಿ ಈ ವಜ್ರವನ್ನು ಪತ್ತೆ ಹಚ್ಚಿದ್ದಾರೆ. ಇದುವರೆಗೆ ಲಭಿಸಿದ ವಜ್ರಗಳ ಗಾತ್ರಕ್ಕೆ ಹೋಲಿಸಿದರೆ ಇದು ಹತ್ತನೇ?ಸ್ಥಾನದಲ್ಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ದೇಶದ ಅಭಿವೃದ್ಧಿಗಾಗಿ ವಜ್ರವನ್ನು ಹರಾಜು ಪ್ರಕ್ರಿಯೆಯ ಮೂಲಕ ಮಾರಾಟ ಮಾಡಲಾಗುವುದು ಎಂದು ಸರ್ಕಾರದ ಮೂಲಗಳು ಹೇಳಿವೆ.
ವಜ್ರವನ್ನು ಸಿಯಾರ ಲಿಯೋನ್ ಅಧ್ಯಕ್ಷ ಡಾ. ಎರ್ನೆಸ್ಟ್ ಬೈ ಕೊರೊಮ ಅವರಿಗೆ ನೀಡಲಾಗಿದೆ. ಇದನ್ನು ಬೇರೆ ದೇಶಗಳಿಗೆ ಕಳ್ಳಸಾಗಣೆ ಮಾಡದಿರುವುದಕ್ಕೆ ಅವರು ಅಭಿನಂದನೆ ಸಲ್ಲಿಸಿದ್ದಾರೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ. ಸಣ್ಣ ಗಣಿಗಳಲ್ಲಿ ಇಂತಹ ವಜ್ರಗಳು ಸಿಗುವುದು ಅಪರೂಪ ಎಂದು ವಜ್ರಗಳ ತಜ್ಞ ಪೌಲ್ ಜಿಮ್ನಿಸ್ಕಿ ಹೇಳಿದ್ದಾರೆ. ೨೦೧೫ರಲ್ಲಿ ಬೋಟ್ಸ್ವಾನದ ಗಣಿ ಯೊಂದರಲ್ಲಿ ೧,೧೧೧ ಕ್ಯಾರೆಟ್ ವಜ್ರ ಪತ್ತೆಯಾಗಿತ್ತು.



This post first appeared on V4news, please read the originial post: here

Share the post

ಸಿಯಾರ ಲಿಯೋನ್‌ನಲ್ಲಿ ಭಾರೀ ವಜ್ರ ಪತ್ತೆ, ದೇಶದ ಒಳಿತಿಗಾಗಿ ಹರಾಜು ಹಾಕಲು ನಿರ್ಧಾರ

×

Subscribe to V4news

Get updates delivered right to your inbox!

Thank you for your subscription

×