Get Even More Visitors To Your Blog, Upgrade To A Business Listing >>

ಅತ್ತೂರು ಸಂತ ಲಾರೆನ್ಸ್ ಬಸಿಲಿಕಾ, ಐದು ದಿನಗಳ ಜಾತ್ರೆಯ ಪರಮ ಪ್ರಸಾದ

attur-22-1

ಕಾರ್ಕಳದ ಅತ್ತೂರು ಸಂತ ಲಾರೆನ್ಸ್ ಬಸಿಲಿಕಾ ಮಹೋತ್ಸವ ಸಂಭ್ರಮದ ಒಟ್ಟು ಐದು ದಿನಗಳ ಪರ್ಯಂತ ನಡೆಯಲಿರುವ ಬಸಿಲಿಕಾ ಜಾತ್ರೆಯ ಪ್ರಾರಂಭೋತ್ಸವದ ಅಂಗವಾಗಿ ಕ್ಷೇತ್ರದಿಂದ ಪರಮ ಪ್ರಸಾದದ ಮೆರವಣಿಗೆ ನಡೆಯಿತು.
ಇದಕ್ಕೆ ಪೂರ್ವಭಾವಿಯಾಗಿ ದಿವ್ಯ ಬಲಿಪೂಜೆಯೊಂದಿಗೆ ’ಭ್ರಾತೃತ್ವದ ಭಾನುವಾರ’ವನ್ನು ಆಚರಿಸಲಾಯಿತು. ’ಭ್ರಾತೃತ್ವದ ಭಾನುವಾರ’ ಕಾರ್ಯಕ್ರಮದಲ್ಲಿ ಏಕತೆಯ ಕುರಿತು ಧರ್ಮಗುರುಗಳಾದ ಜಾರ್ಜ್ ಡಿ’ಸೋಜಾ ಸಂದೇಶ ನೀಡಿದರು. ಮೆರವಣಿಗೆ ಹಾಗೂ ಬಲಿಪೂಜೆಯಲ್ಲಿ ನೂರಾರು ಕ್ರೈಸ್ತ ಬಾಂಧವರು ಭಾಗವಹಿಸಿದ್ದರು. ಅಪರಾಹ್ನದ ಬಳಿಕ ಮಕ್ಕಳಿಗಾಗಿ ಕೊಂಕಣಿಯಲ್ಲಿ ವಿಶೇಷ ದಿವ್ಯ ಬಲಿಪೂಜೆ ಹಾಗೂ ವಿಶೇಷ ಬಲಿಪೂಜೆ ನಡೆಯಿತು. ದಿನ ದಿನ ಸಂಜೆಯ ಬಳಿಕ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಆಗಮಿಸಿದ್ದರು.
ಇನ್ನೆರಡು ದಿನ ಕ್ಷೇತ್ರಕ್ಕೆ ಇನ್ನೂ ಅಧಿಕ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಜಾತ್ರೆಯಲ್ಲಿ ೨೦೦ಕ್ಕಿಂತಲೂ ಅಧಿಕ ಮಳಿಗೆಗಳಿದ್ದು ಜನರನ್ನು ಸೆಳೆಯುತ್ತಿವೆ. ಸೋಮವಾರ ಬೆಳಗ್ಗೆ ೧೦ ಗಂಟೆ ಮತ್ತು ಅಪರಾಹ್ನ ೩.೩೦ಕ್ಕೆ ವ್ಯಾಧಿಷ್ಠರಿಗಾಗಿ ಕೊಂಕಣಿಯಲ್ಲಿ ದಿವ್ಯ ಬಲಿಪೂಜೆ ಹಾಗೂ ವಿಶೇಷ ಪಾರ್ಥನೆಗಳು ನಡೆದವು. ಸಾಯಂಕಾಲ ೬ ಗಂಟೆಗೆ ಬಳ್ಳಾರಿಯ ಧರ್ಮಾಧ್ಯಕ್ಷ ರೈ| ರೆ| ಡಾ| ಹೆನ್ರಿ ಡಿ’ಸೋಜಾ ಅವರು ವಿಶೇಷ ಪೂಜೆ ನೆರವೇರಿಸಿದ್ದಾರೆ.



This post first appeared on V4news, please read the originial post: here

Share the post

ಅತ್ತೂರು ಸಂತ ಲಾರೆನ್ಸ್ ಬಸಿಲಿಕಾ, ಐದು ದಿನಗಳ ಜಾತ್ರೆಯ ಪರಮ ಪ್ರಸಾದ

×

Subscribe to V4news

Get updates delivered right to your inbox!

Thank you for your subscription

×