Get Even More Visitors To Your Blog, Upgrade To A Business Listing >>

ಮಕ್ಕಳನ್ನು ಮದ್ರಸದಿಂದ ಹೊರಹಾಕಿದ್ದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ:ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲು

Tags: agravesup

ಮಕ್ಕಳನ್ನು ಮದ್ರಸಾದಿಂದ ಹೊರಹಾಕಿದ್ದಲ್ಲದೆ, ಪ್ರಶ್ನಿಸಲು ಬಂದಾಗ ವ್ಯಕ್ತಿಯೋರ್ವರನ್ನು ಹಲ್ಲೆಗೈದ ಘಟನೆ ಇಲ್ಲಿನ ಕುಪ್ಪೆಪದವು ಎಂಬಲ್ಲಿ ನಡೆದಿದೆ.ಕುಪ್ಪೆಪದವು ನಿವಾಸಿ ಶೇಖ್ ಅಬ್ದುಲ್ಲಾ(51) ಹಲ್ಲೆಗೊಳಗಾದ ವ್ಯಕ್ತಿ.ಕುಪ್ಪೆಪದವು ಬದ್ರಿಯಾ ಜುಮಾ ಮಸೀದಿಯಲ್ಲಿ ಕಳೆದ ಎರಡು ತಿಂಗಳಿನಿಂದ ಶೇಖ್ ಅಬ್ದುಲ್ಲಾ ಅವರ ಮಕ್ಕಳು ಸೇರಿದಂತೆ ಕೆಲವು ವಿದ್ಯಾರ್ಥಿಗಳನ್ನು ಹೊರ ಹಾಕಲಾಗುತ್ತಿತ್ತು.ಈ ಮಸೀದಿಯಲ್ಲಿ ಮೊದಲು ಕೆಲವು ನಿಯಮಗಳಿದ್ದು, ಅದನ್ನು ಬದಲಾಯಿಸಲಾಯಿತು. ಹಳೆಯ ನಿಯಮಗಳನ್ನು ಬದಲಾಯಿಸಬಾರದೆಂದು ಶೇಖ್ ಅಬ್ದುಲ್ಲಾ ಅದರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ನಿಂದ ಆರ್ಡರ್ ಪಡೆದು ತಂದಿದ್ದರು.

ಈ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿನಿಂದ ಶೇಖ್ ಅಬ್ದುಲ್ಲಾರಿಗೆ ಕೋಟಿ ರಝಾಕ್ ಮತ್ತು ತಂಡದಿಂದ ಬೆದರಿಕೆ ಕರೆಗಳು ಬರುತ್ತಿದ್ದವು. ನಿನ್ನೆ ಬೆಳಗ್ಗೆಯೂ ಶೇಖ್ ಅಬ್ದುಲ್ಲಾ ರ ಮಕ್ಕಳನ್ನು ಮಸೀದಿಯಿಂದ ಹೊರಹಾಕಿದ ಪ್ರಸಂಗ ನಡೆದಿದ್ದು, ಈ ಬಗ್ಗೆ ಪ್ರಶ್ನಿಸಲು ಶೇಖ್ ಅಬ್ದುಲ್ಲಾ ತೆರಳಿದ್ದು, ಈ ಸಂದರ್ಭ ಗುರುಗಳಾದ ಮುಹಮ್ಮದ್ ಹನೀಫ್ ಖಾಸಿಮಿ, ಕೋಟಿ ರಝಾಕ್ ಮತ್ತು ತಂಡ ಅವರಿಗೆ ಹಲ್ಲೆ ನಡೆಸಿದ್ದಾರೆ ಎಂದು ಶೇಖ್ ಅಬ್ದುಲ್ಲಾ ಅವರ ಕುಟುಂಬದವರು ತಿಳಿಸಿದ್ದಾರೆ. ಈ ಬಗ್ಗೆ ಮಂಗಳೂರಿನ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



This post first appeared on V4news, please read the originial post: here

Share the post

ಮಕ್ಕಳನ್ನು ಮದ್ರಸದಿಂದ ಹೊರಹಾಕಿದ್ದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ:ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲು

×

Subscribe to V4news

Get updates delivered right to your inbox!

Thank you for your subscription

×