Get Even More Visitors To Your Blog, Upgrade To A Business Listing >>

ಕುಂಬಳಕಾಯಿ ಮಹಿಮೆ ಬಲ್ಲಿರೇನು ?

ಹಿಂದೆ ಕೃಷಿಕರು ಜಮೀನುಗಳ ಬದುಗಳಲ್ಲಿ ಅಥವಾ ಮನೆ ಹಿತ್ತಲಿನಲ್ಲಿ ಬೆಳೆಯುತ್ತಿದ್ದ ಮುಖ್ಯ ಬೆಳೆ ಈ ಕುಂಬಳಕಾಯಿ. ಮನೆಗೆ ಅತಿಥಿಗಳು ಬಂದರೆ ಕುಂಬಳಕಾಯಿ ಸಿಹಿ ಖಾದ್ಯ ಮಾಡಿ ಬಡಿಸುವ ಸಂಪ್ರದಾಯವಿತ್ತು. ಹಿತ್ತಲಿನಲ್ಲಿ ಬೆಳೆದ ಕೊಂಬಳ ಕಾಯಿಯನ್ನು ಬೀಗರ ಮನೆಗೆ ತೆಗೆದುಕೊಂಡು ಹೋಗುತ್ತಿದ್ದು ಆ ದಿನಗಳಲ್ಲಿ ವಿಷೇಶವಾಗಿತ್ತು. ಆದರೆ ಈಗ ಅದು ಕಡಿಮೆಯಾಗಿದೆ. (health benefits pumpkin kannada)
ಕುಂಬಳಕಾಯಿ ಯಲ್ಲಿ ಪ್ರಮುಖವಾಗಿ ಎರಡು ವಿಧ. ಒಂದು ಬೂದುಗುಂಬಳ ಕಾಯಿ, ಇನ್ನೊಂದು ಸಿಹಿ ಕುಂಬಳಕಾಯಿ.


1. ಬೂದಗುಂಬಳಕಾಯಿ (pumpkin)



ಬೂದಗುಂಬಳಕಾಯಿ ಒಂದು ಉತ್ತಮ ತರಕಾರಿ. ವೈವಿದ್ಯಮಯ ಹಾಗೂ ರುಚಿಕರ ಅಡುಗೆಗೆ ಬೂದಗುಂಬಳ ಕಾಯಿ ಯದ್ದು ಮೊದಲ ಹೆಸರು.

ನಿಯಮಿತವಾಗಿ ಬೂದಗುಂಬಳ ಕಾಯಿ ಸೇವಿಸಿದರೆ ಶರೀರದಲ್ಲಿನ ಹೆಚ್ಚಿನ ಉಷ್ಣ ಹೋಗುತ್ತದೆ. ಅಂಗೈ, ಅಂಗಾಲು ಉರಿ, ಕಣ್ಣುರಿ ಹಾಗೂ ಮೂತ್ರದ ಉರಿ ಸಮಸ್ಯೆ ನಿವಾರಣೆ ಆಗುತ್ತದೆ.

ನಿಶಕ್ತಿ ದೂರ ಮಾಡುವುದಕ್ಕೆ ಬೂದಗುಂಬಳ ಕಾಯಿ  ಉತ್ತಮ ಮನೆ ಮದ್ದು. ಕ್ಷಯ ರೋಗಿಗಳು ಬೂದಗುಂಬಳ ಕಾಯಿ ಸೇವಿಸುವುದು ಉತ್ತಮ ಎನ್ನುತ್ತಾರೆ ಹಿರಿಯರು.
ಬೂದಗುಂಬಳ ಕಾಯಿಯ ರಸವನ್ನು ಬೆಟ್ಟದ ನೆಲ್ಲಿಕಾಯಿ ರಸದೊಂದಿಗೆ ಮಹಿಳೆಯರು ಪ್ರತಿದಿನ ಸೇವಿಸಿದರೆ ಮುಟ್ಟಿನ ಸಮಯದಲ್ಲಿ ಉಂಟಾಗುವ ಸಮಸ್ಯೆ ನಿವಾರಿಸುತ್ತದೆ ಎಂಬುದು ಹಿರಿಯರ ಅಭಿಪ್ರಾಯ.

ಬೂದಗುಂಬಳ ಕಾಯಿ ರಸವನ್ನು ಜೇನಿನ ಹನಿಗಳೊಂದಿಗೆ ಸೇವಿಸಿದರೆ ಮೂತ್ರ ವಿಸರ್ಜನೆ ಸರಿಯಾಗುತ್ತದೆ. ಬೂದಗುಂಬಳ ಕಾಯಿ ಪೇಸ್ಟ್ ತಯಾರಿಸಿ ಕೂದಲಿಗೆ ಹಚ್ಚಿದರೆ ಕೂದಲು ಆರೋಗ್ಯಕರವಾಗಿ ಬೆಳೆಯುತ್ತವೆ.

ಇದನ್ನು ಓದಿ: ಮೋದಿ ಯಾವಾಗಲೂ ಫ್ರೆಷ್ ಆಗಿರ್ತಾರೆ ಯಾಕೆ ಗೊತ್ತಾ?

ಪ್ರತಿ 100 ಗ್ರಾಮ್ ಬೂದಗುಂಬಳ ಕಾಯಿಯಲ್ಲಿ ದೊರೆಯುವ ಪೋಷಕಾಂಶದ ಪ್ರಮಾಣ 


ತೇವಾಂಶ 96.5 ಗ್ರಾಂ 
ಸಸಾರಜನಕ 0.4 ಗ್ರಾಂ 
ಮೇದಸ್ಸು 0.1 ಗ್ರಾಂ 
ಖನಿಜಾಂಶ 0.3 ಗ್ರಾಂ 
ನಾರಿನಾಂಶ 0.8 ಗ್ರಾಂ 
ಕಾರ್ಬೋಹೈಡ್ರೇಟ್ಸ್ 1.9 ಗ್ರಾಂ 
ಕ್ಯಾಲ್ಸಿಯಂ 3.0 ಮಿಲಿ ಗ್ರಾಂ 
ನಿಕೋಟಿನ್ ಆಮ್ಲ 0.4 ಮಿಲಿ ಗ್ರಾಂ 
ಫಾಸ್ಟರಸ್ 20 ಮಿಲಿ ಗ್ರಾಂ 
ಥಿಯಾಮಿನ್ 0.6 ಗ್ರಾಂ
ರಿಬೋಪ್ಲಮಿನ್ 0.1 ಮಿಲಿ ಗ್ರಾಂ 
ಸೋಡಿಯಂ 2.0 ಮಿಲಿಗ್ರಾಂ 
ಪೊಟಾಸಿಯಂ 211 ಮಿಲಿಗ್ರಾಂ 
ನಿಯಾಸಿನ್ 0.4 ಮಿಲಿಗ್ರಾಂ 
ಬಿ2 ಜೀವಸತ್ವ 63 ಎಂಸಿಜಿ
ಕಬ್ಬಿಣ 1.4 ಮಿಲಿಗ್ರಾಂ 
ಸಿ-ಜೀವಸತ್ವ  40.0 ಮಿಲಿಗ್ರಾಂ




2. ಸಿಹಿಗುಂಬಳ ಕಾಯಿ  (pumpkin)



ಸಿಹಿಗುಂಬಳ ಕಾಯಿ ಬಹು ಉಪಯೋಗಿ ತರಕಾರಿ. ಇದರಲ್ಲಿ ಹಲವು ಬಗೆಯ ಅಡುಗೆ ಮಾಡಬಹುದು. ಪಲ್ಯ ಹುಳಿ, ಪಾಯಸ, ಬರ್ಫಿ ಸೇರಿದಂತೆ ಹಲವು ಬಗೆಯ ಖಾದ್ಯ ತಯಾರಿಸಬಹುದು.

ಸಿಹಿಗುಂಬಳ ಕಾಯಿ ನಿಯಮಿತ ಸೇವೆನಿಂದ ಮೂಲವ್ಯಾಧಿಯಿಂದ ಬೀಳುವ ರಕ್ತ ನಿಲ್ಲುತ್ತದೆ. ಸಿಹಿಗುಂಬಳ ಕಾಯಿಯ ತಿರುಳಿನಿಂದ ತೆಗೆದ ರಸಕ್ಕೆ ಜೇನುತುಪ್ಪ ಮತ್ತು ನಿಂಬೆ ಹಣ್ಣಿನ ರಸ ಸೇರಿಸಿ ಸೇವಿಸಿದರೆ ಉತ್ತಮ ಆರೋಗ್ಯ ಲಭಿಸುತ್ತದೆ. ಕುಂಬಳಕಾಯಿ ಬೀಜ ಮತ್ತು ಬಾದಾಮಿ ಬೀಜವನ್ನು ಅರೆದು ಹಸುವಿನ ಹಾಲು ಹಾಗೂ ಜೇನು ತುಪ್ಪದೊಂದಿಗೆ ಸೇರಿಸಿ ಕುಡಿದರೆ ದೇಹದ ತೂಕ ಹೆಚ್ಚುತ್ತದೆ.
ಸುಟ್ಟ ಗಾಯಕ್ಕೆ ಸಿಹಿಗುಂಬಳ ಕಾಯಿ ಎಲೆಯ ರಸ ಹಚ್ಚಿದರೆ ಉರಿ ಶಮನವಾಗುತ್ತದೆ. ಕುರುವಿ ಬಾಧೆ ಇದ್ದರೆ ಸಿಹಿಗುಂಬಳ ಕಾಯಿ ಎಲೆಗಳನ್ನು ಬಿಸಿ ಮಾಡಿ ಶಾಖ ತೆಗೆದುಕೊಂಡರೆ ನೋವು ಕಡಿಮೆಯಾಗುತ್ತದೆ.

ಇದನ್ನು ಓದಿ: ಆರೋಗ್ಯಕರ ಆಹಾರಗಳು





This post first appeared on Kannada Tips, please read the originial post: here

Share the post

ಕುಂಬಳಕಾಯಿ ಮಹಿಮೆ ಬಲ್ಲಿರೇನು ?

×

Subscribe to Kannada Tips

Get updates delivered right to your inbox!

Thank you for your subscription

×