Get Even More Visitors To Your Blog, Upgrade To A Business Listing >>

ಮೋದಿ ಯಾವಾಗಲೂ ಫ್ರೆಷ್ ಆಗಿರ್ತಾರೆ ಯಾಕೆ ಗೊತ್ತಾ?




ನಮ್ಮ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬ್ಯುಜಿ ಶೆಡ್ಯುಲ್ ನಲ್ಲೂ ಉತ್ಸಾಹ, ಉಲ್ಲಾಸದಿಂದ ಇರುತ್ತಾರೆ. ಎಷ್ಟೇ ದೂರ ಪ್ರಯಾಣ ಮಾಡಿ ಬಂದರೂ ಅವರು ಲವಲವಿಕೆಯಿಂದ ಇರುತ್ತಾರೆ,  ಭಾಷಣ ಮಾಡುವಾಗ ದನಿ ಇಳಿಕೆ ಮುಖವಾಗಲ್ಲ. ಇದಕ್ಕೆ ಕಾರಣ ಅವರ ಪಾಲಿಸುತ್ತಿರುವ ಆರೋಗ್ಯದ ಸೂತ್ರಗಳು.ಇವುಗಳನ್ನು ನೀವು ನಮ್ಮ ನಿಮ್ಮ ನಿತ್ಯ ಜೀವನದಲ್ಲಿ ಪಾಲಿಸಿ ಆರೋಗ್ಯಕರ ಜೀವನ ನಡೆಸಬಹುದು.
ನಮ್ಮ ಪ್ರಧಾನಿ ಅವರು ಬ್ಯುಜಿ ಶೆಡ್ಯುಲ್ ನಲ್ಲೂ ಹೇಗೆ ಆರೋಗ್ಯ ಕಾಪಾಡಿಕೊಳ್ಳುತ್ತಾರೆ ಎಂಬುದರ ಬಗ್ಗೆ ಎಲ್ಲರಿಗೂ ಕುತೂಹಲ ಇದ್ದೇ ಇರುತ್ತೆ. ಇದನ್ನು ತಿಳಿದುಕೊಳ್ಳೊಣ ಬನ್ನಿ.


Read Also: ಕುಂಬಳಕಾಯಿ ಮಹಿಮೆ ಬಲ್ಲಿರೇನು ?

1. ಲವಲವಿಕೆಗೆ ಬೇಕು ಈ ಧ್ಯಾನ (Meditation)





ನರೀಂದ್ರ ಮೋದಿ ಅವರು ಸ್ವಾಮಿ ವಿವೇಕಾನಂದ ಅವರ ಆರಾಧಕರು. ಧ್ಯಾನ ಮಾಡುವುದರಿಂದ ಒಬ್ಬ ಮನುಷ್ಯ ಎಂಥ ಕಠಿಣ, ದೊಡ್ಡ ಜವಾಬ್ದಾರಿ ಹೊರಬಲ್ಲ ಶಕ್ತಿ ಹೊಂದಿರುತ್ತಾನೆ ಎಂಬುದು ಅವರ ನಂಬಿಕೆ. ಧ್ಯಾನವು ಸ್ವಾಭಾವಿಕವಾಗಿ ನಮಗೆ ಒಳಿತು ಮಾಡುವಂಥದ್ದು ಮನಸನ್ನು ಪ್ರಫುಲ್ಲಗೊಳಿಸುತ್ತದೆ. ಉದಾತ್ತ ಆಲೋಚನೆಗಳತ್ತ ಕೊಂಡೊಯ್ಯುತ್ತದೆ. ನಮ್ಮ ಬೌದ್ಧಿಕ ಮಟ್ಟವನ್ನು ಗಟ್ಟಿಗೊಳಿಸುತ್ತದೆ.
ನಮ್ಮ ದೇಹಕ್ಕೆ ಬೇಕಾಗುವ ಪಾಸಿಟಿವ್ ಎನರ್ಜಿಯನ್ನು ಪೂರೈಸುವ ವಾಹಕಶಕ್ತಿ. ಇದು ನಮ್ಮನ್ನು ಆಂತರಿಕ ಮತ್ತ ಬಾಹ್ಯ ವಾಗಿ ಸುಂದರಗೊಳಿಸುತ್ತದೆ. ಕಾಂತೀಯ ಶಕ್ತಿಯನ್ನು ತಂದುಕೊಡುತ್ತದೆ. ಮುಖ್ಯವಾಗಿ ನಿಮ್ಮನ್ನು ಒತ್ತಡ ಮುಕ್ತಗೊಳಿಸುತ್ತದೆ.  ಹೇಳುತ್ತಾ ಹೋದರೆ ಇದರ ಪ್ರಯೋಜನೆಗಳು ಸಾಕಷ್ಟಿವೆ.
ಹೀಗಾಗಿಯೇ ಪ್ರಧಾನಿ ಮೋದಿಯವರು ಪ್ರತಿನಿತ್ಯವೂ ಎಂಥ ಬ್ಯುಜಿ ಶೆಡ್ಯುಲ್ ಇದ್ದರೂ ಧ್ಯಾನ ಮಾಡಿಯೇ ದಿನವನ್ನು ಆರಂಭಿಸುತ್ತಾರೆ. ಇದಕ್ಕಾಗಿ ಅವರು ದಿನವೂ ಹತ್ತು ನಿಮಿಷ ಮಿಸಲಿಟ್ಟಿದ್ದಾರೆ. ನೀವೂ ಧ್ಯಾನ ಮಾಡಿ ಅದರ ಉಪಯೋಗ ಅರಿತುಕೊಳ್ಳಿ.

ಸಲಹೆ: 


ಧ್ಯಾನ ಮಾಡುವ ಆರಂಭಿಕ ಹಂತದಲ್ಲಿ ಮನಸ್ಸನ್ನು ಕೇಂದ್ರಿಕೃತ ಗೊಳಿಸುವುದು ಕಷ್ಟ ಎಸಿಸಬಹುದು. ಆ ಶಬ್ದ, ಗಲಾಟೆ ಹಾಗೂ ಮನಸಿನ ಕೆಟ್ಟ ಆಲೋಚನೆ ಗಳು ಕಾಡಬಹುದು. ಇವುಗಳನ್ನು ದೂರ ಮಾಡಿ ಪ್ರಶಾಂತ ಮನಸ್ಸಿನಿಂದ ಧ್ಯಾನ ಮಾಡಲು ಓಂಕಾರದ ಸಂಗೀತ ಬಳಸಬಹುದು.


2. ಯೋಗ (YOGA)




ದಿನವೂ ಯೋಗ ಮಾಡಬೇಕೆಂದು ಪ್ರಧಾನಿ ಮೋದಿ ಅವರು ಗಂಭೀರವಾಗಿ ಪರಿಗಣಿಸಿದ್ದಾರೆ. ಮೋದಿ ಅವರು ದಿನಕ್ಕೆ 4-5 ಗಂಟೆ ಮಾತ್ರ ನಿದ್ರೆ ಮಾಡುತ್ತಾರೆ. ಇದನ್ನು ಸರಿದೊಗಿಸಲು ಅವರು ಯೋಗ ಮತ್ತು ಪ್ರಾಣಾಯಾಮ ಮಾಡುತ್ತಾರೆ. ಆದ್ದರಿಂದ ಅವರಿಗೆ ನಿದ್ರಾಹೀನತೆ ಕಾಡಿಲ್ಲ ಎಂಬುದು ತಜ್ಞರ ಅಭಿಪ್ರಾಯ. ಹಾಗಾಗಿ ಪ್ರತಿದಿನವೂ ಅರ್ಧ ಗಂಟೆ ಯೋಗ ಮಾಡಲು ಮೀಸಲಿಡಬೇಕು. ಪ್ರಾಣಾಯಾಮ, (ತಜ್ಞರು ಸೂಚಿತ) ಆಸನಗಳಿಂದ ಆರಂಭಿಸಿದರೆ ಒಳಿತಾಗಲಿದೆ. ಕಠಿಣ ಸಂದರ್ಭವನ್ನು ನಿಭಾಯಿಸಲು ಶಕ್ತರಾಗುತ್ತಿರಿ.


3. ಸಕಾರಾತ್ಮಕ ಚಿಂತನೆಯಿಂದ ಜನಪ್ರಿಯತೆ ಖಚಿತ (Positive Thinking)




ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾವು ಸಾಧನೆ ಮಾಡಲು ಸಕಾರಾತ್ಮಕ ಆಲೋಚನೆಗಳು ಮುಖ್ಯ. ಸಕಾರಾತ್ಮಕ ಚಿಂತನೆ, ಮನೋಭಾವ ರೂಢಿಸಿಕೊಂಡರೆ ನಿಮ್ಮ ಸಹೋದ್ಯೋಗಿಗಳಲ್ಲಿ ಅತಿ ಹೆಚ್ಚು ಜನಪ್ರಿಯರಾಗಬಹುದು. ವಿಮರ್ಶೆ ಮಾಡಲು, ಸ್ವೀಕರಿಸಲು ಮುಕ್ತರಾಗಿರಬೇಕು. ತೆಗೆದುಕೊಳ್ಳುವ ನಿರ್ಧಾರಗಳು ದೃಢವಾಗಿರಬೇಕು. ಆದ್ದರಿಂದ ಜನನಾಯಕರಾಗಲು ಸಾಧ್ಯ ಎಂಬುದು ಮೋದಿ ಅವರ ಅಭಿಪ್ರಾಯ.

4. ಜಂಕ್ ಫುಡ್ ಬೇಡ, ಮನೆ ಅಡುಗೆಗಿರಲಿ ಆದ್ಯತೆ (Home Cooked Food)





ಮೋದಿ ಅವರು ಎಳೆವಯಸ್ಸಿನಿಂದ ಇಂದಿನವರೆಗೆ ಅವರು ಜಂಕ್ ಫುಡ್ ಸೇವಿಸಿಲ್ಲ. ಅವರು ಮನೆ ಅಡುಗೆಗೆ ಆದ್ಯತೆ ನೀಡಿದ್ದಾರೆ. ದಾಲ್, ರೋಟಿ, ಮೊಸರು ಹಾಗೂ ತರಕಾರಿ ಅವರು ಅಚ್ಚುಮೆಚ್ಚು ಊಟ.
ಪೋಷಕಾಂಶಗಳಿಲ್ಲದ ಜಂಕ್‌ಗಳು ಡಯೆಟ್‌ಗೆ ಒಳ್ಳೆಯದಲ್ಲ. ಇಂದಿನ ಜೀವನ ಶೈಲಿಗೆ ನಮಗೆ ಈಗ ಬೇಕಾಗಿರುವುದು ಸಶಕ್ತಗೊಳಿಸುವ, ರೋಗಗಳಿಂದ ದೂರವಿಡಬಲ್ಲ ಆಹಾರ. ಬಹುಕಾಲ ಹಸಿವಿನ ನೋವು ದೂರ ಮಾಡುವ, ನಮ್ಮ ದೇಹಕ್ಕೆ ಬೇಕಾದ ಪೋಷಕಾಂಶ ಪೂರೈಸುವ, ಪ್ರಾದೇಶಿಕ ಅಡುಗೆ, ರೈತರ ಊಟ ಅಗತ್ಯವಿದೆ.

5. ಸಮೃದ್ಧಿಗೆ ಬೇಕು ಸಸ್ಯಾಹಾರ (Vegiterian)


ನಮ್ಮ ಪ್ರಧಾನಿ ಅವರು ಅಚಲ ಸಸ್ಯಾಹಾರಿಗಳು. ಇದಕ್ಕೆ 65ನೇ ವಯಸ್ಸಿನಲ್ಲೂ ದೃಢಕಾಯರಾಗಿರಲು ಮುಖ್ಯ ಕಾರಣ.
ಸಸ್ಯಾಹಾರ ಸೇವನೆಯಿಂದ ನಮ್ಮ ದೇಹದ ರೋಗನಿರೋಧಕ ಶಕ್ತಿ ಉತ್ತಮಗೊಳ್ಳುತ್ತದೆ, ಹೃದಯದ ಆರೋಗ್ಯ ಸುಸ್ಥಿತಿಯಲ್ಲಿರುತ್ತದೆ. ಇದಕ್ಕೂ ಹೆಚ್ಚಿನ ಉಪಯೋಗಗಳು ಸಸ್ಯಾಹಾರಗಳಿಂದ ಆಗುತ್ತವೆ ಎಂಬುದು ಬಹುತೇಕರ ನಂಬಿಕೆ.
ಗಿಡಮೂಲಿಕೆ, ಹಣ್ಣು- ಹಂಪಲುಗಳು, ಹಾಲು ಸೇವಿಸಲು ಮುಂದಾಹಬೇಕು. ಸಸ್ಯಾಹಾರಿಗಳಾಗಿ, ಅತಿ ಹೆಚ್ಚಾಗಿ ಬೇಡವಾದ ಕೊಬ್ಬಿನಾಂಶ ತುಂಬಿಕೊಂಡಿರುವ ಆಹಾರ ಪದ್ಧತಿಯಿಂದ ದೂರವಿರಿ.

6. ನಿಂಬು ಪಾನಿ (Limbu Pani)




ದೀರ್ಘ ಪ್ರಯಾಣದಲ್ಲಿ ಮೋದಿ ಅವರ ಆಯ್ಕೆ ನಿಂಬು ಪಾನಿ. ಪ್ರಧಾನಿ ಅವರದು ತುಂಬಾ ಬ್ಯುಜಿ ಶೆಡ್ಯುಲ್, ಚುನಾವಣಾ ಪ್ರಚಾರ, ಸಾರ್ವಜನಿಕ ಕಾರ್ಯಕ್ರಮದಂತಹವುಗಳಿಗೆ ಹೋಗುತ್ತಾರೆ. ಈ ಅವರಿಗೆ ಹೆಚ್ಚಿನ ಶಕ್ತಿ ಅಗತ್ಯವಿದ್ದು, ಇದಕ್ಕಾಗಿ ಅವರು ನಿಂಬು ಪಾನಿ ಸೇವಿಸುವುದನ್ನು ಮರೆಯುವುದಿಲ್ಲ.
ನೀವೂ ಕೂಡ ಎಲ್ಲಿಗಾದರೂ ಪ್ರಯಾಣ ಹೊರಟಾಗ ಒಂದು ಬಾಟಲಿನಲ್ಲಿ ನಿಂಬು ಪಾನಿ ತಯಾರಿಸಿಟ್ಟುಕೊಳ್ಳುವುದು ಒಳಿತು. ಕೆಮಿಕಲ್ ಮಿಕ್ಸ್ ಮಾಡಿದ ಪಾನೀಯಗಳನ್ನು ಕೊಂಡುಕೊಳ್ಳುದಕ್ಕಿಂತ ಬಹುಪಕಾರಿಯಾಗಿದೆ.
ನಿಂಬು ಪಾನೀಯದಿಂದ ಸಾಕಷ್ಟು ಪ್ರಯೋಜನಗಳಿವೆ. ಇದು ನಿಮಗೆ ಚೈತನ್ಯ ಹೆಚ್ಚಿಸಿ ಹೊಸ ಕಾಂತಿ ತಂದುಕೊಡುತ್ತದೆ. ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ. ಅತಿಯಾದ ತೂಕ ಇಳಿಸಿಕೊಳ್ಳಲು ಅತಿ ಪರಿಣಾಮಕಾರಿಯಾದ ಪಾನೀಯವಾಗಿದೆ.

7. ಉಪವಾಸ (Fasting)




ಮೋದಿ ಅವರು ಈಚೆಗೆ ಅಮೆರಿಕಾ ವೈಟ್ ಹೌಸ್‌ಗೆ ತೆರಳಿದ್ದರು. ಈ ವೇಳೆ ಅವರು ಒಬಾಮಾ ಅವರಿಂದ ನೀರನ್ನು ಮಾತ್ರ ಸ್ವೀಕರಿಸಿದ್ದರು. ಕಾರಣ ಪ್ರಧಾನಿ ಮೋದಿ ಅವರು ಉಪವಾಸದಲ್ಲಿದ್ದರು.
ಉಪವಾಸವು ನಮ್ಮ ದೇಹಕ್ಕೆ ಒಳ್ಳೆಯದು. ಉಪವಾಸ ಮಾಡುವುದರಿಂದ ನಮ್ಮ ದೇಹದಲ್ಲಿನ ವಿಷವನ್ನು ನಾಶ ಮಾಡಿ ಶುದ್ಧಗೊಳಿಸುತ್ತದೆ. ಸಹಜ ಸಮತೋಲನವನ್ನು ಉಳಿಸುತ್ತದೆ. ಆರೋಗ್ಯ ಕಾಪಾಡಿಕೊಳ್ಳಲು ತಿಂಗಳಲ್ಲಿ ಒಂದು ಅಥವಾ ಎರಡು ಉಪವಾಸ ಕೈಗೊಳ್ಳುವುದು ಅನುಕೂಲಕರವಾಗಿದೆ.

8. ದಿನಕ್ಕೆ ಐದು ತಾಸು ನಿದ್ದೆ (Sleeping)


ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಎಂದಿಗೂ 5ತಾಸಿಗಿಂತ ಅಧಿಕ ನಿದ್ದೆ ಮಾಡಿದವರಲ್ಲ. ಆರೋಗ್ಯದ ಬಗ್ಗೆ ಅವರು ನಿಯಮಿತವಾಗಿ ವೈದ್ಯರ ಸಲಹೆ ತೆಗೆದುಕೊಳ್ಳುತ್ತಾರೆ.
ವೈದ್ಯರು ಹೇಳುವಂತೆ ನೀವು 7ಗಂಟೆಗಿಂತ ಹೆಚ್ಚು ನಿದ್ದೆ ಮಾಡಿದರೆ ನಿಮ್ಮ ಮಿದುಳು ಮಂದಗತಿಯಲ್ಲಿ ಕೆಲಸ ಮಾಡಲು ಶುರು ಮಾಡುತ್ತದೆ. ಯಾವುದೇ ಕೆಲಸ ಮಾಡದೇ ಸುಸ್ತಾಗಿ ನಿಮ್ಮನ್ನು ಸೋಮಾರಿಯನ್ನಾಗಿ ಮಾಡುತ್ತದೆ. ನಿಧಾನವಾಗಿ ನಿಮ್ಮಲ್ಲಿ ಜಡತ್ವ ತುಂಬುತ್ತದೆ. ತಲೆನೋವು ಪೀಡಿತರಾಗುತ್ತಿರಿ, ದೇಹದ ಸ್ಟಿಫ್‌ನೆಸ್ ಕಳೆದುಕೊಳ್ಳುತ್ತಿರಿ. ನಿಯಮಿತವಾಗಿ ನಿದ್ದೆ ಮಾಡಿ ಆರೋಗ್ಯವಂತರಾಗಿ ಬಾಳಿ.

9. ಆಧ್ಯಾತ್ಮಿಕತೆ (Spirituality)




ಮೋದಿ ಅವರು ಪ್ರಾಚೀನ ಭಾರತದ ಸಂಪ್ರದಾಯಗಳನ್ನು ಪಾಲಿಸುತ್ತಾರೆ. ಹಾಗಾಗಿಯೇ ಅವರು ಅತಿ ಹೆಚ್ಚಾಗಿ ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ, ಆಶೀರ್ವಾದ ಪಡೆಯುತ್ತಾರೆ. ಕರ್ಮ ನನ್ನದು ಫಲಾಫಲ ದೇವರದು ಎನ್ನುವ ನಂಬಿಕೆ ಅವರದು.

ನೀವು ಯಾವುದರಲ್ಲಿ ನಂಬಿಕೆ ಇಟ್ಟಿರುತ್ತಿರಿ ಅದನ್ನು ಪಾಲಿಸುವುದು ಒಳ್ಳೆಯದು. ಪ್ರತಿದಿನವೂ ಮಲಗುವ ಮೊದಲು ಮತ್ತು ಬೆಳಗ್ಗೆ ಎಳುವಾಗ ನಿಮ್ಮ ಮನದ ದೈವವನ್ನು ಪ್ರಾರ್ಥಿಸಿ. ಇದು ನಿಮಗೆ ನೆಮ್ಮದಿ, ಶಾಂತಿ, ಮನಸ್ಸನ್ನು ಪ್ರಫುಲ್ಲಗೊಳಿಸುತ್ತದೆ. ನಮ್ಮ ದೇಹದ ನರ ವ್ಯವಸ್ಥೆಯನ್ನು ಚೇತನಗೊಳಿಸುತ್ತದೆ.


This post first appeared on Kannada Tips, please read the originial post: here

Share the post

ಮೋದಿ ಯಾವಾಗಲೂ ಫ್ರೆಷ್ ಆಗಿರ್ತಾರೆ ಯಾಕೆ ಗೊತ್ತಾ?

×

Subscribe to Kannada Tips

Get updates delivered right to your inbox!

Thank you for your subscription

×