Get Even More Visitors To Your Blog, Upgrade To A Business Listing >>

ರುಪಾಯಿ ಸಂಕೇತದ ಬಳಕೆ - Halatu Honnu




ರುಪಾಯಿ ಸಂಕೇತವನ್ನು ಬಳಸುವುದು ಹೇಗೆಂದು ತಿಳಿಯಲು ಇಲ್ಲಿ ಪಟ್ಟಿ ಮಾಡಿರುವ ಹಂತಗಳನ್ನು ಅನುಸರಿಸಿ.


ಹಂತ ೧:

             ರುಪಾಯಿ ಸಂಕೇತದ ಲಿಪಿಯನ್ನು ಇಲ್ಲಿಂದ ಕೆಳಗಿಳಿಸಿ.

ಹಂತ ೨:

             ಇಳಿಸಿರುವ ಕಡತದ ಜಾಗವನ್ನು ತೆರೆಯಿರಿ, ಮತ್ತು ಇಲ್ಲಿಂದ ಮುಂದುವರಿಯಲು ಎರಡು ವಿಧಾನಗಳಿವೆ. ಅವುಗಳನ್ನು ಮುಂದೆ ವಿವರಿಸಲಾಗಿದೆ. ಯಾವುದೇ ಒಂದು ವಿಧಾನವನ್ನು ಅನುಸರಿಸಿದರೆ ಸಾಕು.



ವಿಧಾನ ಒಂದು

ಹಂತ ೧:
             ಇಳಿಸಿರುವ "Rupee_Foradian.ttf" ಕಡತದ ಮೇಲೆ ಬಲ-ಗುಂಡಿ ಒತ್ತಿ. ತೆರೆಯುವ ಸಂದರ್ಭ ಮೆನುವಿನಲ್ಲಿ "ಸ್ಥಾಪಿಸು ( ಇನ್ಸ್ಟಾಲ್ )" ಆಯ್ಕೆಮಾಡಿ.



ಹಂತ ೨:
             ಲಿಪಿಯು ನಿಮ್ಮ ಗಣಕಕ್ಕೆ ಸ್ಥಾಪಿತವಾಗಲು ಆರಂಭವಾಗುತ್ತದೆ. ತುಸು ತಾಳ್ಮೆಯಿಂದಿರಿ. ಸ್ಥಾಪನೆ ಮುಗಿದ ತಕ್ಷಣ ಕೆಳಗೆ ತೋರಿಸಿರುವ ಸೂಚನಾ ಕಿಂಡಿ (ಪಾಪ್ ಅಪ್ ವಿಂಡೊ) ಸ್ವಯಂಚಾಲಿತವಾಗಿ ಮುಚ್ಚಿಕೊಳ್ಳುತ್ತದೆ.



             ಲಿಪಿಯು ಸ್ಥಾಪನೆಗೊಂಡಮೇಲೆ ಮುಖ್ಯ ಹಂತ ೩ ರಿಂದ ಮುಂದುವರೆಯಿರಿ.


ವಿಧಾನ ಎರಡು

ಹಂತ ೧:
             ಕೆಳಗಿಳಿಸಿದ ಲಿಪಿ-ಕಡತದ ಮೇಲೆ ಬಲ-ಗುಂಡಿ ಒತ್ತಿದಾಗ ತೆರೆಯುವ ಸಂದರ್ಭ ಮೆನುವಿನಲ್ಲಿ "ಮುನ್ನೋಟ (ಪ್ರಿವ್ಯೂ)" ಆಯ್ಕೆಮಾಡಿ.



ಹಂತ ೨:
             ತೆರೆಯುವ ಲಿಪಿ-ಕಿಂಡಿಯಲ್ಲಿ ಸ್ಥಾಪಿಸು/ಇನ್ಸ್ಟಾಲ್ ಗುಂಡಿ ಒತ್ತಿ.



ಹಂತ ೩:
             ಲಿಪಿಯು ನಿಮ್ಮ ಗಣಕಕ್ಕೆ ಸ್ಥಾಪಿತವಾಗಲು ಆರಂಭವಾಗುತ್ತದೆ. ತುಸು ತಾಳ್ಮೆಯಿಂದಿರಿ. ಸ್ಥಾಪನೆ ಮುಗಿದ ತಕ್ಷಣ ಕೆಳಗೆ ತೋರಿಸಿರುವ ಸೂಚನಾ ಕಿಂಡಿ (ಪಾಪ್ ಅಪ್ ವಿಂಡೊ) ಸ್ವಯಂಚಾಲಿತವಾಗಿ ಮುಚ್ಚಿಕೊಳ್ಳುತ್ತದೆ.






ಹಂತ ೩:


             ಸ್ಥಾಪಿತಗೊಂಡಿರುವ ರುಪಾಯಿ ಸಂಕೇತವನ್ನು ಬಳಸಲು/ಪರೀಕ್ಷಿಸಲು ಹೊಸ ಕಡತವೊಂದನ್ನು ತೆರೆಯಿರಿ. ನಾನಿಲ್ಲಿ ನೋಟ್ ಪ್ಯಾಡ್ ಬಳಸುತ್ತಿರುವೆ. ಇದರಲ್ಲಿ "ಸ್ವರೂಪ (ಫಾರ್ಮ್ಯಾಟ್)" ಪಟ್ಟಿಯಿಂದ "ಲಿಪಿ (ಫೊಂಟ್)" ಆಯ್ಕೆಯನ್ನು ಒತ್ತಿ.



ಹಂತ ೪:

             ತೆರೆಯುವ ಕಿಂಡಿಯಲ್ಲಿ "ರುಪಾಯಿ ಫೊರಾಡಿಯನ್ Rupee Foradian" ಲಿಪಿಯನ್ನು ಆಯ್ಕೆಮಾಡಿ, "ಸರಿ/ಓ‌ಕೆ" ಒತ್ತಿ.



ಹಂತ ೫:

             ಈಗ ಕಡತದಲ್ಲಿ ರುಪಾಯಿ ಸಂಕೇತವನ್ನು ಛಾಪಿಸಲು (ಟೈಪ್ ಮಾಡಲು) ನಿಮ್ಮ ಕೀಲಿಮಣಿಯ ( ` ) ಟಿಲ್ಡ್ ( Tilde ) ಗುಂಡಿ ಒತ್ತಿ.



ಹಂತ ೬:

             ಇನ್ನೇನು, ರುಪಾಯಿ ಸಂಕೇತ ಕೆಳತೋರಿಸಿದಂತೆ ಕಡತದಲ್ಲಿ ಮೂಡಬೇಕು. ಅಲ್ಲಿಗೆ ನೀವು ಯಶಸ್ವಿಯಾಗಿ ರುಪಾಯಿ ಸಂಕೇತವನ್ನು ಬಳಸಬಹುದು. ಇದೇ ರೀತಿ ಯಾವುದೇ ತಂತ್ರಾಂಶದಲ್ಲಿಯೂ "ರುಪಾಯಿ ಫೊರಾಡಿಯನ್ Rupee Foradian" ಲಿಪಿಯನ್ನು ಆಯ್ಕೆಮಾಡುವುದರ ಮೂಲಕ ನೀವು ಸಂಕೇತವನ್ನು ಪಡೆಯಬಹುದು.




ಯಾವುದೇ ಹೊಸತಾಗಿರುವುದನ್ನು ಅಳವಡಿಸಿಕೊಂಡು ಪಾಲಿಸುವಾಗ ಸಮಸ್ಯೆಗಳು ಎದುರಾಗುವುದು ಸಹಜ. ಈ ಪ್ರಕ್ರೀಯೆಯಲ್ಲಿ ನಿಮಗೇನಾದರೂ ತೊಂದರೆಯಾಗಿದ್ದರೆ ದಯವಿಟ್ಟು ಕೆಳಗಡೆಯ ಪ್ರತಿಕ್ರೀಯೆ ವಿಭಾಗ ಅಥವಾ "ಅನಿಸಿಕೆ (ಫೀಡ್ ಬ್ಯಾಕ್)" ಪುಟದ ಮೂಲಕ ನಮಗೆ ತಿಳಿಸಿ.






This post first appeared on Halatu Honnu, please read the originial post: here

Share the post

ರುಪಾಯಿ ಸಂಕೇತದ ಬಳಕೆ - Halatu Honnu

×

Subscribe to Halatu Honnu

Get updates delivered right to your inbox!

Thank you for your subscription

×