Get Even More Visitors To Your Blog, Upgrade To A Business Listing >>

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಟ್ಟಾ ಅಭಿಮಾನಿಗಳ ಜಗಳ ಕೊಲೆಯಲ್ಲಿ ಅಂತ್ಯ: ಕಾರಣ ಬಹಿರಂಗ

ಮಾಜಿ ಸ್ಪೀಕರ್ ರಮೇಶ್ ಕುಮಾರ್, ಕಾಂಗ್ರೆಸ್ ಮುಖಂಡ ಎಂ.ಶ್ರೀನಿವಾಸ್    , ಕೋಲಾರ, ಅ.24: ಆಯುಧ ಪೂಜೆ (Ayudha Puja) ದಿನವೇ ಕೋಲಾರದಲ್ಲಿ (Kolar) ರಕ್ತ ಹರಿದಿದೆ. ಕೇವಲ 3 ದಿನಗಳ ಅಂತರದಲ್ಲಿ ಇಬ್ಬರು ಕಾಂಗ್ರೆಸ್ ಮುಖಂಡರ ಹತ್ಯೆ ನಡೆದಿದೆ (Murder). ಗೃಪ ಸಚಿವರ ಆಪ್ತ, ಮಾಜಿ ಸಚಿವ ರಮೇಶ್ ಕುಮಾರ್ ಬಲಕೈ ಬಂಟ ಶ್ರೀನಿವಾಸ್​ನನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಆದರೆ ಇದರಲ್ಲಿ ಅನುಮಾನ ಹುಟ್ಟಿಸುವಂತಹ ವಿಷಯವೆಂದರೆ ಪ್ರಕರಣದಲ್ಲಿ ಅರೆಸ್ಟ್ ಆದ ಪ್ರಮುಖ ಆರೋಪಿ ವೇಣುಗೋಪಾಲ್ ಸಹ ರಮೇಶ್ ಕುಮಾರ್ ಅವರ ಕಟ್ಟಾ ಅಭಿಮಾನಿ. ಆದರೂ ಸಹ ಶ್ರೀನಿವಾಸ್​ನನ್ನು ಕೊಲೆ ಮಾಡಿದ್ದಾರೆ. ಸದ್ಯ ಈಗ ಈ ಕೊಲೆಗೆ ಕಾರಣ ಬಯಲಾಗಿದೆ.

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಟ್ಟಾ ಅಭಿಮಾನಿಗಳ ಜಗಳ ಕೊಲೆಯಲ್ಲಿ ಅಂತ್ಯ: ಕಾರಣ ಬಹಿರಂಗ

ಕೋಲಾರದಲ್ಲಿ ಕಾಂಗ್ರೆಸ್ ಮುಖಂಡ ಎಂ.ಶ್ರೀನಿವಾಸ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ವೇಣುಗೋಪಾಲ್ ರಮೇಶ್ ಕುಮಾರ್ ಕಟ್ಟಾ ಅಭಿಮಾನಿ. ಈತ ತನ್ನ ಎದೆ ಮೇಲೆ ರಮೇಶ್ ಕುಮಾರ್ ಹಚ್ಚೆ ಹಾಕಿಸಿಕೊಂಡಿದ್ದಾನೆ. ರಮೇಶ್ ಕುಮಾರ್ ವೀರಾಭಿಮಾನಿ ಎಂದೇ ಗುರುತಿಸಿಕೊಂಡಿದ್ದಾನೆ. ಆರೋಪಿ ವೇಣುಗೋಪಾಲ್, ಕೆಲ ವರ್ಷಗಳ ಹಿಂದೆ ಕಾಂಗ್ರೆಸ್ ತೊರೆದು JDS ಸೇರ್ಪಡೆಯಾಗಿದ್ದ. ಕೊಲೆಯಾದ ಶ್ರೀನಿವಾಸ್, ವೇಣು ನಡುವೆ 7 ವರ್ಷಗಳಿಂದ ವೈಷಮ್ಯವಿತ್ತು. ಜಮೀನು ವಿವಾದ, ಹಳೇ ದ್ವೇಷದ ಹಿನ್ನೆಲೆ ಕೊಲೆ ಮಾಡಿದ್ದಾನೆ.

ಶ್ರೀನಿವಾಸಪುರ ಪಟ್ಟಣದ ಶ್ರೀನಿವಾಸ್ ನಿವಾಸದ ಎದುರು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಆಹಾರ ಸಚಿವ K.H. ಮುನಿಯಪ್ಪ ಅವರು ಶ್ರೀನಿವಾಸ್ ಅವರ ಅಂತಿಮ ದರ್ಶನ ಪಡೆದು ಕುಟುಂಬಸ್ತರಿಗೆ ಸಾಂತ್ವಾನ ಹೇಳಿದ್ದಾರೆ. ಇನ್ನು ಈ ವೇಳೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದು, ದ್ವೇಷ ಏನೇ ಇದ್ದರೂ ದಾರುಣ ಕೃತ್ಯಕ್ಕೆ ಯಾರು ಕೈ ಹಾಕಬಾರದು. ಕಳೆದ ನಾಲ್ಕು ಲೋಕಸಭೆ ಚುನಾವಣೆಯಲ್ಲಿ ನನ್ನ ಬೆಂಬಲಿಸಿದ್ದರು. ಪೊಲೀಸ್ ಇಲಾಖೆ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.

ಘಟನೆ ವಿವರ

ಅ.23ರಂದು ಶ್ರೀನಿವಾಸಪುರದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಲಗೈ ಬಂಟ, ಗೃಹ ಸಚಿವರ ಆಪ್ತರೂ ಆಗಿದ್ದ ಶ್ರೀನಿವಾಸ್ ಅಲಿಯಾಸ್ ಕೌನ್ಸಿಲರ್ ಶ್ರೀನಿವಾಸ್ ಬರ್ಬರವಾಗಿ ಹತ್ಯೆಯಾಗಿದೆ. ನಿನ್ನೆ ಬೆಳಗ್ಗೆ ತಮ್ಮ ತೋಟದ ಮನೆಯಲ್ಲಿ ಇರುವಾಗ್ಲೇ ಎಂಟ್ರಿಕೊಟ್ಟ 8 ಮಂದಿ ಆರೋಪಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಶ್ರೀನಿವಾಸ್ ನಿನ್ನೆ ಬೆಳಗ್ಗೆ 11.30ರ ಸುಮಾರಿಗೆ ಹೊಗಳಗೆರೆ ರಸ್ತೆಯಲ್ಲಿ ರೆಸ್ಟೋರೆಂಟ್ ಕಾಮಗಾರಿ ವೀಕ್ಷಣೆಗೆ ಅಂತ ಹೋಗಿದ್ರು. ಇದೇ ವೇಳೆ ಎಂಟ್ರಿಕೊಟ್ಟ ಹಂತಕರು ಮಾರಕಾಸ್ತ್ರಗಳಿಂದ ಕೊಚ್ಚಿ ಎಸ್ಕೇಪ್ ಆಗಿದ್ದಾರೆ. ಹೇಳಿ ಕೇಳಿ ಶ್ರೀನಿವಾಸ್ ದಲಿತ ನಾಯಕ. ಕಾಂಗ್ರೆಸ್​ನ ಪ್ರಭಾವಿ ಮುಖಂಡ. ತಮ್ಮ ನಾಯಕನ ಕೊಲೆ ವಿಷ್ಯ ಕಾಡ್ಗಿಚ್ಚಿನಂತೆ ಹಬ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಬೆಂಬಲಿಗರು ಆಸ್ಪತ್ರೆ ಮುಂದೆ ಜಮಾಯಿಸಿದ್ರು. ಮಾಜಿ ಸ್ಪೀಕರ್ ರಮೇಶ್ ಕುಮಾರ್ ತಮ್ಮ ಆಪ್ತನ ನೆನೆದು ಕಣ್ಣೀರಾಕಿದರು.

The post ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಟ್ಟಾ ಅಭಿಮಾನಿಗಳ ಜಗಳ ಕೊಲೆಯಲ್ಲಿ ಅಂತ್ಯ: ಕಾರಣ ಬಹಿರಂಗ first appeared on techrankkannada.



This post first appeared on , please read the originial post: here

Share the post

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಟ್ಟಾ ಅಭಿಮಾನಿಗಳ ಜಗಳ ಕೊಲೆಯಲ್ಲಿ ಅಂತ್ಯ: ಕಾರಣ ಬಹಿರಂಗ

×

Subscribe to

Get updates delivered right to your inbox!

Thank you for your subscription

×