Get Even More Visitors To Your Blog, Upgrade To A Business Listing >>

Tata Safari vs Mahindra XUV700: ಫೀಚರ್ಸ್ ವಿಚಾರದಲ್ಲಿ ಮಹೀಂದ್ರಾ ಎಕ್ಸ್ ಯುವಿ700 ಹಿಂದಿಕ್ಕಿದ ಟಾಟಾ ಸಫಾರಿ

ಟಾಟಾ ಮೋಟಾರ್ಸ್(Tata Motors) ಕಂಪನಿಯು ತನ್ನ ಬಹುನೀರಿಕ್ಷಿತ ಸಫಾರಿ ಫೇಸ್‌ಲಿಫ್ಟ್(Safari Facelift) ಆವೃತ್ತಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದು, ಹೊಸ ಕಾರು ಮಾದರಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 16.19 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 25.49 ಲಕ್ಷ ಬೆಲೆ ಹೊಂದಿದೆ. ಹೊಸ ಸಫಾರಿ ಎಸ್ ಯುವಿ ಮಾದರಿಯು ಫೀಚರ್ಸ್ ಗಳಿಗೆ ಅನುಗುಣವಾಗಿ ಸ್ಮಾರ್ಟ್, ಪ್ಯೂರ್, ಅಡ್ವೆಂಚರ್ ಮತ್ತು ಅಕಾಂಪ್ಲಿಶ್ಡ್ ಎನ್ನುವ ನಾಲ್ಕು ವೆರಿಯೆಂಟ್ ಗಳನ್ನು ಹೊಂದಿದ್ದು, ಇದು ಗಮನಾರ್ಹವಾದ ನವೀಕರಣ ಸೇರಿದಂತೆ ಪ್ರತಿಸ್ಪರ್ಧಿ ಮಾದರಿಗಳಿಂತಲೂ ಭರ್ಜರಿ ಫೀಚರ್ಸ್ ಗಳನ್ನು ಪಡೆದುಕೊಂಡಿದೆ.

Tata Safari vs Mahindra XUV700: ಫೀಚರ್ಸ್ ವಿಚಾರದಲ್ಲಿ ಮಹೀಂದ್ರಾ ಎಕ್ಸ್ ಯುವಿ700 ಹಿಂದಿಕ್ಕಿದ ಟಾಟಾ ಸಫಾರಿ

ಹೊಸ ಸಫಾರಿ ಕಾರು ಮಾದರಿಯು 7 ಸೀಟರ್ ಸೌಲಭ್ಯದೊಂದಿಗೆ ಮಹೀಂದ್ರಾ ಎಕ್ಸ್ ಯುವಿ700(Mahindra XUV700) ಮಾದರಿಗೆ ಹೆಚ್ಚಿನ ಸ್ಪರ್ಧೆ ನೀಡುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಈ ಬಾರಿ ಹಲವಾರು ಫೀಚರ್ಸ್ ಪಡೆದುಕೊಂಡಿದೆ. ಹೊಸ ಸಫಾರಿಯಲ್ಲಿರುವ ಕೆಲವು ಫೀಚರ್ಸ್ ಗಳು ಸದ್ಯ ಮಾರುಕಟ್ಟೆಯಲ್ಲಿರುವ ಎಕ್ಸ್ ಯುವಿ700 ಮಾದರಿಯಲ್ಲೂ ಇಲ್ಲ ಎನ್ನಬಹುದಾಗಿದ್ದು, ಇದು ಈ ಸೆಗ್ಮೆಂಟ್ ನಲ್ಲಿ ಅತ್ಯುತ್ತಮ ಕಾರು ಮಾದರಿಯಾಗಿದೆ.

ಮಹೀಂದ್ರಾ ಎಕ್ಸ್ ಯುವಿ700 ಮಾದರಿಯಲ್ಲಿ ನೀಡದೆ ಇರುವ ಫೀಚರ್ಸ್ ಗಳು ಟಾಟಾ ಸಫಾರಿಯಲ್ಲಿರುವುದು ಗ್ರಾಹಕರನ್ನು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುವ ನೀರಿಕ್ಷೆಯಲ್ಲಿದ್ದು, ವಿವಿಧ ವೆರಿಯೆಂಟ್ ಗಳಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್ ನೀಡಲಾಗಿದೆ. ಹೊಸ ಸಫಾರಿಯಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಮುಂಭಾಗದಲ್ಲಿ ಮತ್ತು ಎರಡನೇ ಸಾಲಿನ ಆಸನಗಳಲ್ಲೂ ವೆಂಟಿಲೆಷನ್ ಸಿಸ್ಟಂ ಸೇರಿದಂತೆ ಪ್ಯಾಡಲ್ ಶಿಫ್ಟರ್, 12.3 ಇಂಚಿನ ಇನ್ಪೋಟೈನ್ ಮೆಂಟ್ ಸಿಸ್ಟಂ, 4 ಹಂತದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಫ್ರಂಟ್ ಪ್ಯಾಸೆಂಜರ್ ಸೀಟ್, ಪವರ್ಡ್ ಟೈಲ್ ಗೇಟ್, ಆಟೋ ಡಿಮ್ಮಿಂಗ್ ಇಂಟರ್ನಲ್ ರಿಯರ್ ವ್ಯೂ ಮಿರರ್ ಮತ್ತು ಟಾಪ್ ಎಂಡ್ ಮಾದರಿಯಾಗಿ 19 ಇಂಚಿನ ಅಲಾಯ್ ವ್ಹೀಲ್ ಜೋಡಣೆ ಮಾಡಿದೆ.

ಇದರೊಂದಿಗೆ ಹೊಸ ಸಫಾರಿ ಕಾರಿನಲ್ಲಿ ಕನೆಕ್ಟಿವಿಟಿ ಸೌಲಭ್ಯಕ್ಕಾಗಿ ಆಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ ಬೆಂಬಲಿಸುವ ಡಿಜಿಟಲ್ ಇನ್ಟ್ರುಮೆಂಟ್ ಕ್ಲಸ್ಟರ್ ನೀಡಲಾಗಿದ್ದು, ಇದರಲ್ಲಿ ನ್ಯಾವಿಗೇಷನ್ ಜೊತೆಗೆ ಹಲವಾರು ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ. ಇದರಲ್ಲಿ ಮತ್ತೊಂದು ಆಕರ್ಷಕ ತಾಂತ್ರಿಕ ಅಂಶವೆಂದರೆ ಆಟೋ ಆವೃತ್ತಿಗಳು ಏರ್ ಕ್ರಾಫ್ಟ್ ಸ್ಟೈಲ್ ಹೊಂದಿರುವ ಗೇರ್ ಲೀವರ್ ನೀಡಲಾಗಿದ್ದು, ಇನ್ನುಳಿದಂತೆ ಹೊಸ ಕಾರಿನಲ್ಲಿ ಲೊಗೊ ಬ್ಲ್ಯಾಕ್ ಲಿಟ್ ಹೊಂದಿರುವ ಫೋರ್ ಸ್ಪೋಕ್ ಸ್ಟೀರಿಂಗ್ ವ್ಹೀಲ್, 10-ಸ್ಪೀಕರ್ಸ್ ಜೆಬಿಎಲ್ ಸೌಂಡ್ ಸಿಸ್ಟಂ, ಮುಂಭಾಗದಲ್ಲಿ ಮೆಮೊರಿ ಫಂಕ್ಷನ್, ಪನೊರಮಿಕ್ ಸನ್ ರೂಫ್, ವೈರ್ ಲೇಸ್ ಚಾರ್ಜರ್ ಸೇರಿದಂತೆ ಹಲವಾರು ಫೀಚರ್ಸ್ ಗಳಿವೆ.

ಸುರಕ್ಷತೆಗಾಗಿ ಸಫಾರಿ ಫೇಸ್‌ಲಿಫ್ಟ್ ಮಾದರಿಯಲ್ಲಿ ಹಲವಾರು ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್ ಜೋಡಣೆ ಮಾಡಲಾಗಿದ್ದು, ಟಾಪ್ ಎಂಡ್ ಮಾದರಿಗೆ ಅನ್ವಯಿಸುವಂತೆ ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಸೌಲಭ್ಯವನ್ನು ನೀಡಲಾಗಿದೆ. ಜೊತೆಗೆ ಸ್ಟ್ಯಾಂಡರ್ಡ್ ಆಗಿ 6 ಏರ್ ಬ್ಯಾಗ್ ಗಳನ್ನು ಮತ್ತು ಟಾಪ್ ಎಂಡ್ ಮಾದರಿಯಲ್ಲಿ 7 ಏರ್ ಬ್ಯಾಗ್ ಗಳ ಜೊತೆಗೆ ಎಬಿಎಸ್, ಇಬಿಡಿ, ತ್ರಿ ಪಾಯಿಂಟ್ ಸೀಟ್ ಬೆಲ್ಟ್, ಹಿಲ್ ಹೋಲ್ಡ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, 360 ಡಿಗ್ರಿ ವ್ಯೂ ಕ್ಯಾಮೆರಾ ಸೇರಿದಂತೆ ಹಲವಾರು ಫೀಚರ್ಸ್ ಗಳಿವೆ.

ಇನ್ನು ಟಾಟಾ ಕಂಪನಿ ಹೊಸ ಸಫಾರಿಯಲ್ಲಿ ಈ ಹಿಂದಿನ 2.0 ಲೀಟರ್ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಮುಂದುವರಿಸಿದ್ದು, ಇದು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಮತ್ತು 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ವಿವಿಧ ಡ್ರೈವ್ ಮೋಡ್ ಗಳ ಮೂಲಕ 170 ಹಾರ್ಸ್ ಪವರ್ ಮತ್ತು 350 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರೊಂದಿಗೆ ಹೊಸ ಸಫಾರಿ ಕಾರಿನ ಇಂಧನ ದಕ್ಷತೆ ಕೂಡಾ ಸಾಕಷ್ಟು ಸುಧಾರಿಸಿದ್ದು, ಮ್ಯಾನುವಲ್ ಆವೃತ್ತಿಯು ಪ್ರತಿ ಲೀಟರ್ ಗೆ 16.30 ಕಿ.ಮೀ ಮೈಲೇಜ್ ನೀಡಿದರೆ ಆಟೋಮ್ಯಾಟಿಕ್ ಆವೃತ್ತಿಯು 14.50 ಕಿ.ಮೀ ಮೈಲೇಜ್ ನೀಡಲಿದೆ.

ತಾಜಾ ಸುದ್ದಿ

The post Tata Safari vs Mahindra XUV700: ಫೀಚರ್ಸ್ ವಿಚಾರದಲ್ಲಿ ಮಹೀಂದ್ರಾ ಎಕ್ಸ್ ಯುವಿ700 ಹಿಂದಿಕ್ಕಿದ ಟಾಟಾ ಸಫಾರಿ first appeared on techrankkannada.



This post first appeared on , please read the originial post: here

Share the post

Tata Safari vs Mahindra XUV700: ಫೀಚರ್ಸ್ ವಿಚಾರದಲ್ಲಿ ಮಹೀಂದ್ರಾ ಎಕ್ಸ್ ಯುವಿ700 ಹಿಂದಿಕ್ಕಿದ ಟಾಟಾ ಸಫಾರಿ

×

Subscribe to

Get updates delivered right to your inbox!

Thank you for your subscription

×