Get Even More Visitors To Your Blog, Upgrade To A Business Listing >>

ಬೆಂಗಳೂರಿನ ಮಾರ್ಕೆಟ್​​ಗಳಲ್ಲಿ ದಸರಾ ಹಬ್ಬದ ಖರೀದಿ ಜೋರು..! ಹೂವು-ಹಣ್ಣಿನ ಬೆಲೆ ಎಷ್ಟಿದೆ ಗೊತ್ತಾ?

ಬೆಂಗಳೂರು, ಅ.22: ನಾಡಿನೆಲ್ಲೆಡೆ ಆಯುಧ ಪೂಜೆ (Ayudha Puja) ಹಬ್ಬದ ಸಂಭ್ರಮ ಮನೆ ಮಾಡಿದೆ. ನಾಳೆ (ಅ.22) ಆಯುಧ ಪೂಜೆ ಹಿನ್ನೆಲೆ ಹೂ, ಹಣ್ಣು, ತರಕಾರಿ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ರಾಜ್ಯದ ಬಹುತೇಕ ಮಾರುಕಟ್ಟೆಗಳು ಜನರಿಂದ ತುಂಬಿ ಹೋಗಿವೆ. ಹಬ್ಬ ಹಿನ್ನೆಲೆ ಹೂ, ಹಣ್ಣಿನ ದರ ಕೊಂಚ ಏರಿಕೆಯಾಗಿದೆ. ಆಯಧ ಪೂಜೆಯ ಸಾಮಗ್ರಿಗಳಿಗೆ ಡಿಮ್ಯಾಂಡ್ ಹೆಚ್ಚಿದೆ. ಬೂದು ಕುಂಬಳಕಾಯಿ, ಹೂವು, ಹಣ್ಣು, ಬಾಳೆಕಂದು, ಮಾವಿನ ಸೊಪ್ಪು ಸೇರಿದಂತೆ ಆಯುಧ ಪೂಜೆಗೆ ಅಗತ್ಯವಾಗಿರುವ ವಸ್ತುಗಳ ಖರೀದಿಯಲ್ಲಿ ಜನ ತೊಡಗಿದ್ದಾರೆ.

ಮೈಸೂರಿನ ದೇವರಾಜ ಮಾರುಕಟ್ಟೆ, ಎಂ.ಜಿ ರಸ್ತೆಯ ಮಾರುಕಟ್ಟೆ ಸೇರಿದಂತೆ ವಿವಿಧೆಡೆಗಳಲ್ಲಿರುವ ಮಾರುಕಟ್ಟೆಯಲ್ಲಿ ಜನವೂ ಜನ ಸೇರಿದ್ದಾರೆ. ರಸ್ತೆ ಬದಿಯಲ್ಲೂ ಆಯುಧ ಪೂಜೆ ಸಾಮಗ್ರಿಗಳ ಖರೀದಿಯ ಭರಾಟೆ ಜೋರಾಗಿದೆ.

ಇನ್ನು ಬೆಂಗಳೂರಿನ ಕೆಆರ್ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಜೋರಾಗಿದೆ. ಕಾಲಿಡುವುದಕ್ಕೂ ಜಾಗವಿಲ್ಲದಷ್ಟು ಜನ ಸೇರಿದ್ದಾರೆ. ಹೂ, ಹಣ್ಣು, ತರಕಾರಿ ಖರೀದಿ ಮಾಡುವುದರಲ್ಲಿ ಜನ ಫುಲ್ ಬ್ಯುಸಿಯಾಗಿದ್ದಾರೆ. ಹೀಗಾಗಿ ಕೆ.ಆರ್. ಮಾರುಕಟ್ಟೆ ಸುತ್ತ – ಮುತ್ತ ಫುಲ್ ಟ್ರಾಫಿಕ್ ಜಾಮ್ ಆಗಿದೆ. ಹಬ್ಬದ ಸಲುವಾಗಿ ಹೂವಿನ ಬೆಲೆ ಏರಿಕೆಯಾಗಿದ್ದು ತರಕಾರಿಯ ಬೆಲೆ ಕೂಡ ಕೊಂಚ ಏರಿಕೆಯಾಗಿದೆ. ಹಣ್ಣುಗಳ‌ ಬೆಲೆ‌ 100ರ ಗಡಿ ದಾಟಿದೆ.

ನಿನ್ನೆಗೆ ಹೋಲಿಸಿದರೆ ಇಂದು ಬೆಲೆ ಡಬಲ್ ಆಗಿದೆ. ತರಕಾರಿಯಲ್ಲಿ 20ರೂ. ರಿಂದ 30ರೂ ಏರಿಕೆಯಾಗಿದೆ. ಹೂವಿನ ಬೆಲೆಯಲ್ಲಿ 50 ರಿಂದ 60ರುಪಾಯಿ ಏರಿಕೆಯಾಗಿದೆ. ಬೆಲೆ ಏರಿಕೆಯ ಮಧ್ಯೆಯೂ ಜನ ಖರೀದಿಯಲ್ಲಿ ತೊಡಗಿದ್ದಾರೆ.

ಇಂದಿನ ತರಕಾರಿ ದರ

  • ಕ್ಯಾರೆಟ್- 60 kg
  • ಬೀನ್ಸ್ – 80 kg
  • ಬಿಟ್ರೋಟ್ – 40 kg
  • ಬದನೆಕಾಯಿ – 50 kg
  • ಬೆಂಡೆಕಾಯಿ – 40 kg
  • ದಪ್ಪ ಮೆಣಸಿನಕಾಯಿ – 40 kg
  • ಗ್ರೀನ್ ಮೆಣಸಿನಕಾಯಿ – 50 kg
  • ಮೂಲಂಗಿ – 40 kg
  • ಟೊಮಾಟೋ – 25 kg
  • ಬಟಾಣಿ – 400 kg
  • ಅರವರೆಕಾಯಿ – 80 kg
  • ನವೀಲು ಕೋಸು – 80 kg
  • ಈರುಳ್ಳಿ – 50 kg
  • ಆಲೂಗೆಡ್ಡೆ – 30 kg
  • ಹೀರೇಕಾಯಿ – 120 kg
  • ತೊಗರಿಕಾಯಿ – 400 kg
  • ಬೆಳ್ಳುಳ್ಳಿ – 240 kg
  • ಹಾಗಲಕಾಯಿ – 120 kg

ಇಂದಿನ ಹೂಗಳ ದರ

The post ಬೆಂಗಳೂರಿನ ಮಾರ್ಕೆಟ್​​ಗಳಲ್ಲಿ ದಸರಾ ಹಬ್ಬದ ಖರೀದಿ ಜೋರು..! ಹೂವು-ಹಣ್ಣಿನ ಬೆಲೆ ಎಷ್ಟಿದೆ ಗೊತ್ತಾ? first appeared on techrankkannada.



This post first appeared on , please read the originial post: here

Share the post

ಬೆಂಗಳೂರಿನ ಮಾರ್ಕೆಟ್​​ಗಳಲ್ಲಿ ದಸರಾ ಹಬ್ಬದ ಖರೀದಿ ಜೋರು..! ಹೂವು-ಹಣ್ಣಿನ ಬೆಲೆ ಎಷ್ಟಿದೆ ಗೊತ್ತಾ?

×

Subscribe to

Get updates delivered right to your inbox!

Thank you for your subscription

×