Get Even More Visitors To Your Blog, Upgrade To A Business Listing >>

Paytm, Phonepe, Google pay  ಬಳಕೆದಾರರಿಗೆ ಗುಡ್ ನ್ಯೂಸ್.!  ಇನ್ನು ಮುಂದೆ ATM  ನಲ್ಲಿ ಹಣ ಪಡೆಯಲು ಕಾರ್ಡ್ ಅವಶ್ಯಕತೆ ಇಲ್ಲ.? tech rank kannada

Paytm, Phonepe, Google pay  ಬಳಕೆದಾರರಿಗೆ ಗುಡ್ ನ್ಯೂಸ್.!  ಇನ್ನು ಮುಂದೆ ATM  ನಲ್ಲಿ ಹಣ ಪಡೆಯಲು ಕಾರ್ಡ್ ಅವಶ್ಯಕತೆ ಇಲ್ಲ.? tech rank kannada

ಎಲ್ಲರಿಗೂ ನಮಸ್ಕಾರ… 

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಆನ್ಲೈನ್ ಪೇಮೆಂಟ್ ಗಳ ಮೇಲೆ ಅವಲಂಬಿತರಾಗಿದ್ದಾರೆ ಅಂದರೆ ಪ್ರತಿಯೊಂದು ವ್ಯವಹಾರಕ್ಕೆ ಮತ್ತು ಪ್ರತಿಯೊಂದು ಹಣದ ವರ್ಗಾವಣೆಗೂ ಕೂಡ Phonepe, Google pay, Paytm  ಗಳನ್ನು ಬಳಸಿ ಹಣವನ್ನು ವರ್ಗಾವಣೆ ಮಾಡುವುದು ಮತ್ತು ಆನ್ಲೈನ್ ವ್ಯವಹಾರವನ್ನು ಮಾಡಲಾಗುತ್ತಿದೆ ಅಲ್ಲದೆ ಇದೀಗ ಹೆಚ್ಚಾಗಿ ಪ್ರತಿಯೊಂದು ಅಂಗಡಿಗಳಲ್ಲಿ ಮತ್ತು ವ್ಯವಹಾರಿಕ ಸ್ಥಳಗಳಲ್ಲೂ ಕೂಡ ಈ ಆನ್ಲೈನ್ ಪೇಮೆಂಟ್ ಗಳ ಹಾವಳಿ ಹೆಚ್ಚಾಗಿದ್ದು ಜನರ ಬಳಿ ನಗದು ಸಿಗುವುದೇ ಡೌಟ್ ಎಂಬಂತೆ ಆಗಿದೆ.

 ಈ ಮಧ್ಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೇಂದ್ರ ಸರ್ಕಾರದ ಆದೇಶದಂತೆ  ಡಿಜಿಟಲ್ ವ್ಯವಹಾರವನ್ನು ಮತ್ತಷ್ಟು ಹೆಚ್ಚಿಸಲು ಕೆಲವು ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ ಇದೀಗ  ಕಾರ್ಡ್ ಬಳಸಿ ಹಣ ಪಡೆಯುತ್ತಿದ್ದಂತಹ  ಎಟಿಎಂ ನಲ್ಲೂ ಹೊಸ ಬದಲಾವಣೆಯನ್ನು ತರಲಾಗುತ್ತಿದೆ ಈ ಬಗ್ಗೆ ತಿಳಿಯಲು ಸಂಪೂರ್ಣವಾಗಿ ಲೇಖನವನ್ನು ಓದಿ.

Phonepe, Google pay, Paytm ಬಳಕೆದಾರರಿಗೆ ಗುಡ್ ನ್ಯೂಸ್.! 

Phonepe, Google pay, Paytm ಬಳಸುತ್ತಿರುವವರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಒಂದು ಹೊಸ ಗುಡ್ ನ್ಯೂಸ್ ನೀಡಿದೆ ಇದರಿಂದ ಈ ಆನ್ಲೈನ್ ವ್ಯವಹಾರ ಅಥವಾ ಆನ್ಲೈನ್ ಪೇಮೆಂಟ್ ಹೆಚ್ಚಾಗಿ ಬಳಸುತ್ತಿರುವವರಿಗೆ ಮತ್ತಷ್ಟು ಅನುಕೂಲ ಆಗಲಿದೆ.  ಈಗಾಗಲೇ ದೇಶದ ಪ್ರತಿಯೊಂದು ವ್ಯವಹಾರ ಅಥವಾ ಸರಕು ಸೇವೆ ಎಲ್ಲದಕ್ಕೂ ಕೂಡ ಆನ್ಲೈನ್ ಪೇಮೆಂಟ್ ಬಳಕೆ ಆಗುತ್ತಿದ್ದು ಇದೀಗ ನಮ್ಮ ರಾಜ್ಯದ ಬಸ್ ಸೇವೆಯಲ್ಲೂ ಕೂಡ ಮತ್ತು ರೈಲು ಸೇವೆಯನ್ನು ಕೂಡ ಆನ್ಲೈನ್ ಪೇಮೆಂಟ್ ಬಳಕೆಗೆ ಅವಕಾಶ ನೀಡಲಾಗಿದೆ ಇನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಗ್ರಾಹಕರಿಗೂ ಕೂಡ ಈ ಡಿಜಿಟಲ್ ಸೇವೆಯನ್ನು ನೀಡಬೇಕು ಎಂದು ಮತ್ತೊಂದು ಹೊಸ ಯೋಜನೆಯನ್ನು ಜಾರಿಗೆ ತಂದಿದೆ.

ಇನ್ನು ಮುಂದೆ ATM  ನಲ್ಲಿ ಹಣ ಪಡೆಯಲು ಕಾರ್ಡ್ ಅವಶ್ಯಕತೆ ಇಲ್ಲ.?

ಹೆಚ್ಚಾಗಿ ಎಲ್ಲರಿಗೂ ತಿಳಿದಿರುವ ಹಾಗೆ ಎಟಿಎಂ ಗಳಲ್ಲಿ ಹಣ ಪಡೆಯಲು ಎಟಿಎಂ ಕಾರ್ಡ್ ಕಡ್ಡಾಯ ಆಗಿರುತ್ತದೆ ಹಾಗೆ ಈಗಿನ ಸಮಯದಲ್ಲಿ ಕೇವಲ ಒಂದು ರೂಪಾಯಿ ಹಣ ನೀಡಬೇಕು ಎಂದರು ಅದನ್ನು ಯುಪಿಐ ಮೂಲಕ ಅಂದರೆ ಫೋನ್ ಪೇ ಗೂಗಲ್ ಪೇಟಿಎಂ ಗಳ ಮೂಲಕ ಹಣವನ್ನು ಪೇ ಮಾಡಲಾಗುತ್ತಿದೆ ಆದರೆ ಕೆಲವು ಸಮಯದಲ್ಲಿ ನಗದು ಹಣ ಬೇಕಾಗುತ್ತದೆ ಆ ಸಮಯದಲ್ಲಿ ಹತ್ತಿರದ ಎಟಿಎಂ ಮಷೀನ್ ನಲ್ಲಿ ಹಣವನ್ನು ಪಡೆಯಬೇಕಾಗಿರುತ್ತದೆ ಆದರೆ ನಿಮ್ಮ ಬಳಿ ಎಟಿಎಂ ಕಾರ್ಡ್ ಇದ್ದರೆ ಸರಿ ಒಂದು ವೇಳೆ ಫೋನ್ ಪೇ ಗೂಗಲ್ ಪೇ ಇದೆ ಎಂದು ಎಟಿಎಂ ಕಾರ್ಡ್ ಬಿಟ್ಟು ಬಂದಿದ್ದರೆ ಪರಿಸ್ಥಿತಿ ಏನು ಎಂಬ ಸಮಸ್ಯೆಯನ್ನು ಗಮನಿಸಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ಕಾರ್ಡ್ ಇಲ್ಲದೆ ಎಟಿಎಂ ಮಷೀನ್ ನಲ್ಲಿ ಅವರ ಬ್ಯಾಂಕ್ ಖಾತೆಯಲ್ಲಿ ಇರುವ ಹಣವನ್ನು ಪಡೆಯಲು ಹೊಸ ಅವಕಾಶವನ್ನು ನೀಡುತ್ತಿದೆ .

 ಇನ್ನು ಮುಂದೆ ಎಟಿಎಂ ಕಾರ್ಡ್ ಇಲ್ಲದೆ ಎಟಿಎಂ ಮಷೀನ್ ನಲ್ಲಿ ಹಣವನ್ನು ಪಡೆಯಬಹುದು ಹೇಗೆಂದರೆ ನೀವು ಬಳಸುತ್ತಿರುವ ನಿಮ್ಮ ಫೋನ್ ಪೇ ಗೂಗಲ್ ಪೇ ಅಥವಾ ಪೇಟಿಎಂ  ಗಳನ್ನು ಬಳಸಿ ಎಟಿಎಂ ಮಷೀನ್ ನಲ್ಲಿ ಹಣವನ್ನು ಪಡೆಯಬಹುದು.

ಎಟಿಎಂ ಮಷೀನ್ ನಲ್ಲಿ ಎಟಿಎಂ ಇಲ್ಲದೆ ಹಣ ಪಡೆಯುವುದು ಹೇಗೆ.?

ಹೌದು ಈಗಾಗಲೇ ತಿಳಿಸಿದ ಹಾಗೆ ಕೆಲವು ಸಮಯದಲ್ಲಿ ನಗದು ಹಣ ಬೇಕಾಗುತ್ತದೆ ಆ ಸಮಯದಲ್ಲಿ ನಿಮ್ಮ ಬಳಿ ನಗದು  ಹಣ ಇರುವುದಿಲ್ಲ ಆಗ ನಿಮಗೆ ಮೊದಲು ಯೋಚನೆ ಬರುವುದೇ ಬ್ಯಾಂಕ್ ಅಕೌಂಟ್ ಬ್ಯಾಂಕ್ ಅಕೌಂಟ್ ನಲ್ಲಿ ಹಣ ಇದೆ ಎಂದು ಚೆಕ್ ಮಾಡಿಕೊಳ್ಳುತ್ತೀರಾ ನಂತರ ಹಣವನ್ನು ಎಟಿಎಂ ನಲ್ಲಿ ಡ್ರಾ ಮಾಡಬೇಕು ಎಂದು ಯೋಚಿಸುತ್ತೀರಾ ಆದರೆ ಒಂದು ವೇಳೆ ನಿಮ್ಮ ಬಳಿ ಎಟಿಎಂ ನಲ್ಲಿ ಹಣ ಪಡೆಯಲು ಎಟಿಎಂ ಕಾರ್ಡ್ ಇಲ್ಲದಿದ್ದರೆ ಚಿಂತಿಸುವ ಅಗತ್ಯ ಇಲ್ಲ ಇನ್ನು ಮುಂದೆ ಎಟಿಎಂ ನಲ್ಲಿ ಫೋನ್ ಪೇ ಗೂಗಲ್ ಪೇ ಪೇಟಿಎಂ ಗಳನ್ನು ಬಳಸಿ ಹಣವನ್ನು ಡ್ರಾ ಮಾಡಬಹುದು.

 ಹೌದು ಎಟಿಎಂ ಕಾರ್ಡ್ ಇಲ್ಲದೆ ಎಟಿಎಂ ಮಷೀನ್ ನಲ್ಲಿ ಹಣ ಪಡೆಯಲು ಮೊದಲು ಇನ್ನು ಕೆಲವೇ ದಿನಗಳಲ್ಲಿ ಎಲ್ಲಾ ಎಟಿಎಂ ಮಷೀನ್ ಗಳಿಗೂ ಕೂಡ ಒಂದು ಹೊಸ ಆಪ್ಷನ್ ಬಿಡುಗಡೆ ಮಾಡಲಾಗುತ್ತಿದೆ ಇದರಲ್ಲಿ ವಿಥೌಟ್ ಎಟಿಎಂ ಎಂಬ ಆಪ್ಷನ್ ಇರುತ್ತದೆ ಅದನ್ನು ಕ್ಲಿಕ್ ಮಾಡಿ ನಂತರ UPI  ಎಂದು ಹೇಳುತ್ತದೆ ಅದನ್ನು ಕ್ಲಿಕ್ ಮಾಡಿ ನಂತರ ನಿಮ್ಮ ಕೆಲವು ಮಾಹಿತಿಗಳನ್ನು ಕೇಳುತ್ತದೆ ನಂತರ ಎಷ್ಟು ಹಣ ಡ್ರಾ ಮಾಡಬೇಕು ಎಂಬ ಮಾಹಿತಿ ಕೇಳಲಾಗುತ್ತದೆ ಕೊನೆಯದಾಗಿ ನಿಮಗೆ ಸ್ಕ್ಯಾನರ್ ಕೋಡ್ ಓಪನ್ ಆಗುತ್ತದೆ ಅದನ್ನು ನಿಮ್ಮ ಫೋನ್ ಪೆ ಗೂಗಲ್ ಪೇ ಅಥವಾ ಪೇಟಿಎಂ ನಲ್ಲಿ ಸ್ಕ್ಯಾನ್ ಮಾಡಿ ಹಣವನ್ನು ಪೇ ಮಾಡಿದರೆ ಕೆಲವೇ ಕ್ಷಣಗಳಲ್ಲಿ ಎಟಿಎಂ ಕಾರ್ಡ್ ಇಲ್ಲದೆ ಎಟಿಎಂ ಮಷೀನ್ ನಲ್ಲಿ ಹಣ ಡ್ರಾ ಆಗುತ್ತದೆ.  ಸದ್ಯ ಇದನ್ನು ಕೆಲವೇ ದಿನಗಳಲ್ಲಿ  ಎಲ್ಲಾ ಎಟಿಎಂ ಮಷೀನ್ ಗಳಲ್ಲೂ ಕೂಡ ಅಳವಡಿಸಲಾಗುತ್ತದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸೂಚನೆ ನೀಡಿದೆ ಇದರಿಂದ  ಯುಪಿಐ ಬಳಕೆದಾರರಿಗೆ ಮತ್ತಷ್ಟು ಅನುಕೂಲ ಆಗಲಿದೆ ಧನ್ಯವಾದಗಳು…

Source



This post first appeared on , please read the originial post: here

Share the post

Paytm, Phonepe, Google pay  ಬಳಕೆದಾರರಿಗೆ ಗುಡ್ ನ್ಯೂಸ್.!  ಇನ್ನು ಮುಂದೆ ATM  ನಲ್ಲಿ ಹಣ ಪಡೆಯಲು ಕಾರ್ಡ್ ಅವಶ್ಯಕತೆ ಇಲ್ಲ.? tech rank kannada

×

Subscribe to

Get updates delivered right to your inbox!

Thank you for your subscription

×