Get Even More Visitors To Your Blog, Upgrade To A Business Listing >>

ಸೇಬು ಹಣ್ಣಿನ ಉಪಯುಕ್ತತೆ


ಸೇಬು ಬುಹುತೇಕ ಎಲ್ಲರಿಗೂ ಇಷ್ಟವಾಗುವ ಹಣ್ಣು. ರುಚಿ ಹಾಗೂ ಪೌಷ್ಟಿಕಾಂಶದ ವಿಷಯದಲ್ಲಿ ಸೇಬು ಹಣ್ಣಿಗೆ ಅಗ್ರಸ್ಥಾನ. ಪ್ರತಿ ದಿನ ಒಂದು ಸೇಬು ತಿಂದು ವೈದ್ಯರಿಂದ ದೂರವಿರು ಎಂದು ಹಿಂದೆ ಹಿರಿಯರು ಸಲಹೆ ನೀಡುತ್ತಿದ್ದರು.


ಸೇಬು ಹಣ್ಣಿನ ಉಪಯುಕ್ತತೆ 


  1.  ಆರೋಗ್ಯ ವೃದ್ಧಿಗೆ ಸೇಬು ಸೇವನೆ ಉತ್ತಮ ಪರಿಹಾರ.
  2.  ಸೇಬು ಹಣ್ಣಿನ ನಿಯಮಿತ ಸೇವನೆಯಿಂದ ನೆನಪಿನ ಶಕ್ತಿ ಹೆಚ್ಚಿಸುತ್ತದೆ.
  3.  ದೈಹಿಕ ಬಲ ಹೆಚ್ಚಿಸುತ್ತದೆ. 
  4.  ನರಗಳ ಶಕ್ತಿ ಹೆಚ್ಚಿ, ನಿಶಕ್ತಿ ದೂರಾಗುತ್ತದೆ. 
  5.  ಅಮಶಂಕೆ ದೂರವಾಗುತ್ತದೆ.
  6.  ಅತಿಸಾರದಿಂದ ಬಳಲುವ ಮಗುವಿಗೆ ಸೇಬು ಹುಣ್ಣು ತುರಿದು ಹಾಲಿನೊಂದಿಗೆ ಸೇರಿಸಿ ಕುಡಿಸಿದರೆ ಬೇಗನೆ ಗುಣವಾಗುತ್ತದೆ. 
  7.  ಸೇಬುಹಣ್ಣಿನ ಸಿಪ್ಪೆ ಹಾಗೂ ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ ನಂತರ ಪುಡಿ ಮಾಡಿ ಹಾಲಿನೊಂದಿಗೆ ಮುಖಕ್ಕೆ ಹಚ್ಚಿಕೊಂಡರೆ ಮೊಡವೆ ಸಮಸ್ಯೆಗೆ ಪರಿಹಾರ ಸಿಗುತ್ತದೆ.
  8. ಕರುಳಿನ ಸಮಸ್ಯೆ ನಿವಾರಣೆಯಾಗಲು ಸೇಬು ಉಪಯುಕ್ತ ಫಲ ಆಹಾರ. 
  9.  ಹಲ್ಲು ಹಾಗೂ ಒಸಡು ಗಟ್ಟಿಯಾಗುತ್ತವೆ. 
  10.  ಜೀರ್ಣಶಕ್ತಿ ವೃದ್ಧಿಸುತ್ತದೆ. 
  11. ಸಂಧಿವಾತ, ಮಲಕಟ್ಟು, ಮಾತ್ರಕಟ್ಟು ಮತ್ತು ಯಕೃತ್ತಿನ ದೋಷಗಳಿಂದ ಉಂಟಾಗುವ ರೋಗಗಳು ದೂರಾಗುತ್ತದೆ. 
  12.  ಜೇನಿನಲ್ಲಿ ಸೇಬು ಹಣ್ಣು ನೆನೆಹಾಕಿ ನಂತರ ಗುಲಾಬಿ ದಳಗಳನ್ನು ಸೇರಿಸಿ ಬಿಸಿಲಿನಲ್ಲಿ ಇಟ್ಟು ನಂತರ ಹಾಲಿನೊಂದಿಗೆ ಸೇವಿಸಿದರೆ ಚೈತನ್ಯ ಹೆಚ್ಚುತ್ತದೆ ಎಂಬುದು ಹಿರಿಯರ ಮಾತು, 
  13.  ಎರಡರಿಂದ ಮೂರು ಕಪ್ ನೀರನ್ನು ಕುದಿಸಿ ಈ ನೀರಿನಲ್ಲಿ ಒಂದು ಸೇಬು, ಒಂದು ನಿಂಬೆ ಹಣ್ಣನ್ನು ಚೂರು ಮಾಡಿ ಹಾಕಬೇಕು. ನಂತರ ಪಾತ್ರೆಯನ್ನು ಕೆಳಗೆ ಇಳಿಸಿ ಹತ್ತು ನಿಮಿಷ ಬಿಡಬೇಕು. ನಂತರ ಶೋಧಿಸಿ ಸೇವಿಸಿದರೆ ಬಳಲಿಕೆ, ಆಯಾಸ ದೂರಾಗುತ್ತದೆ. 



ಆರೋಗ್ಯ, ಆಹಾರ, ಜೀವನಶೈಲಿ ಕುರಿತು kannadatips.com ಗೆ ನೀವು ಕೂಡ ಲೇಖನ ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ [email protected]  ಗೆ ಸಂಪರ್ಕಿಸಿ.

#ಆರೋಗ್ಯ #ಆಹಾರ #ಜೀವನಶೈಲಿ   #kannadatips #kannadahealthtips#healthtips .




This post first appeared on Kannada Tips, please read the originial post: here

Share the post

ಸೇಬು ಹಣ್ಣಿನ ಉಪಯುಕ್ತತೆ

×

Subscribe to Kannada Tips

Get updates delivered right to your inbox!

Thank you for your subscription

×