Get Even More Visitors To Your Blog, Upgrade To A Business Listing >>

[ ಕ್ಯಾರೆಟ್ ನ ಉಪಯೋಗ ] ಔಷಧ ಗುಣಗಳ ಕಣಜ ಕ್ಯಾರೆಟ್ !


ದೇಹ ಸದಾ ಚಟುವಟಿಕೆಯಿಂದ ಇರಬೇಕಾದರೆ ಕೊಬ್ಬಿನಾಂಶ ಅಗತ್ಯ. 30 ವರ್ಷದ ನಂತರ ಕೊಬ್ಬಿನ ಅಂಶದಲ್ಲಿ ಸಮತೋಲನ ಕಾಪಾಡಿಕೊಳ್ಳುವುದು ಕೂಡ ಮುಖ್ಯ. ಆದರೆ, ಒತ್ತಡದ ಜೀವನದಲ್ಲಿ ಬಹುತೇಕರಿಗೆ ಅದು ಸಾಧ್ಯವಾಗುತ್ತಿಲ್ಲ ಎಂಬುದು ನೋವಿನ ಸಂಗತಿ. ನಾವು ದಿನನಿತ್ಯ ತೆಗೆದುಕೊಳ್ಳುವ ಆಹಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಬಳಸಬೇಕು. ಇದರಿಂದ ಕೊಬ್ಬಿನಾಂಶದಲ್ಲಿ ಸಮತೋಲನ ಕಾಪಾಡಿಕೊಳ್ಳಲು ಅನುಕೂಲವಾಗುತ್ತದೆ. ಅದರಂತೆ ತರಕಾರಿಯಲ್ಲಿ ಹೆಚ್ಚು ಮುಖ್ಯವಾಗಿದ್ದು ಕ್ಯಾರೆಟ್.

ಏಕೆಂದರೆ ನಮ್ಮ ದೇಹದ ಮುಖ್ಯ ಅಂಗ ಕಣ್ಣಿನ ಆರೋಗ್ಯ ಕಾಪಾಡಲು ಕ್ಯಾರೆಟ್ ಉತ್ತಮ ತರಕಾರಿ. ಜತೆಗೆ ದೇಹದ ಲವಲವಿಕೆ ಹೆಚ್ಚಿಸುತ್ತದೆ. ನಾವು ದಿನವೂ ಕ್ಯಾರೆಟ್ ಬಳಸವುದರಿಂದ ಸಾಕಷ್ಟು ಪ್ರಯೋಜನೆಗಳು ಆಗುತ್ತವೆ.  ಕ್ಯಾರೆಟ್ ನಿಂದ ದೇಹಕ್ಕೆ ಸಮತೋಲನದಲ್ಲಿ ವಿಟಮಿನ್‌ಗಳು ಸಿಗುತ್ತವೆ. ಚರ್ಮದ ಕಾಂತಿ ಹೆಚ್ಚಿಸುತ್ತದೆ.  ಮಾರಕ ಕ್ಯಾನ್ಸರ್ ತಡೆಗಟ್ಟಲು ಸಹ ಕ್ಯಾರೇಟ್ ಅವಶ್ಯ ಎನ್ನುತ್ತಾರೆ ಹಿರಿಯರು.



ಕಣ್ಣಿನ ದೃಷ್ಟಿ ಶಕ್ತಿ ವೃದ್ಧಿಸಲು ಸಹಕಾರಿ ಈ ಕ್ಯಾರೆಟ್


ಕ್ಯಾರೆಟ್ ಸೇವನೆಯಿಂದ ಕಣ್ಣುಗಳ ಆರೋಗ್ಯ ವೃದ್ಧಿಸುತ್ತದೆ. ಕ್ಯಾರೇಟ್‌ನಲ್ಲಿ ಎ ವಿಟಮಿನ್ ಹೆಚ್ಚಿರುವ ಕಾರಣ ತಜ್ಞರು ಇದರ ಸೇವನೆಗೆ ಹೆಚ್ಚು ಶಿಫಾರಸು ಮಾಡುವುದುಂಟು. ರಾತ್ರಿ ಹೊತ್ತು ದೃಷ್ಟಿಗೆ ಅಗತ್ಯವಿರುವ ಕೆನ್ನೆರಳೆ ವರ್ಣದ್ರವ್ಯ ಒದಗಿಸುವ ವಿಶೇಷ ಶಕ್ತಿ ಕ್ಯಾರೇಟ್‌ಗೆ ಇದೆ. ಜತೆಗೆ ಕಣ್ಣಿನ ಪೊರೆ ಬರದಂತೆ ಕ್ಯಾರೆಟ್ ರಕ್ಷಣಾ ಕಾರ್ಯನಿರ್ವಹಿಸುತ್ತದೆ.

ಕ್ಯಾರೆಟ್ ನಲ್ಲಿವೆ ಕ್ಯಾನ್ಸರ್ ಪ್ರತಿಬಂಧಕ ಶಕ್ತಿ


ಫಲ್ಕಾರಿನಾಲ್ ಎಂಬ ನೈಸರ್ಗಿಕ ಔಷಧಿ ಕ್ಯಾರೆಟ್ ನಲ್ಲಿದೆ. ಇದು ಶೀಲಿಂದ್ರಗಳಿಂದ ಬರುವ ರೋಗಗಳನ್ನು ಬೇರುಮಟ್ಟದಲ್ಲಿ ತಡೆಯುತ್ತದೆ. ಶ್ವಾಸಕೋಶದ ಕ್ಯಾನ್ಸರ್ , ಸ್ತನ ಕ್ಯಾನ್ಸರ್ ಮತ್ತು ಕರುಳಿನ ಕ್ಯಾನ್ಸರ್ ದೂರ ಮಾಡಲು ಕ್ಯಾರೆಟ್ ಸಹಾಯ ಮಾಡುತ್ತದೆ ಎಂದರೆ ನೀವು ಅಚ್ಚರಿಪಡಬಹುದು.



ವಯಸ್ಸಾಗದಂತೆ ತಡೆಯುತ್ತದೆ ಕ್ಯಾರೆಟ್


ಜೀವನ ಕ್ರಮ, ಆಹಾರ ಪದ್ಧತಿಯಿಂದ 20ರ ಯುವಕನು ಕೂಡ 30 ವರ್ಷ ದಾಟಿ ವಯಸ್ಸಾದಂತೆ ಕಾಣುತ್ತಾನೆ. ಇದಕ್ಕೆ ಸೇವಿಸುವ ಜಂಕ್‌ಫುಡ್, ಒತ್ತಡ ಬದುಕಿನ ಕೆಲಸಗಳೇ ಕಾರಣ. ನಾವು ಆಹಾರದಲ್ಲಿ ಕ್ಯಾರೆಟ್ ಬಳಸಿದರೆ ಪಚನ ಕ್ರಿಯೆ ವೃದ್ಧಿಸಿ ಜೀವಕೋಶಗಳು ವಯಸ್ಸಾಗುವುದನ್ನು ಮುಂದೂಡುತ್ತದೆ ಎನ್ನುತ್ತಾರೆ ತಜ್ಞರು.  

ಚರ್ಮಕಾಂತಿ ವೃದ್ಧಿಸಲು ಉತ್ತೇಜನ ನೀಡುತ್ತದೆ ಕ್ಯಾರೆಟ್ 

ನಾವು ಕೆಲಸ ಮಾಡಲು ಮನೆಯಿಂದ ಹೊರಗೆ ಹೋಗಬೇಕಾಗುತ್ತದೆ, ಪರಿಸರದಲ್ಲಿ ಉಂಟಾಗುತ್ತಿರುವ ಮಾಲಿನ್ಯ, ಹೊಗೆ, ದೂಳಿನಿಂದ ಪಾರಾಗಿಬರುವುದು ಕಷ್ಟ. ಇವು ನಮ್ಮ ದೇಹದ ಮೇಲೆ ಬಿದ್ದು ನಮ್ಮ ಆರೋಗ್ಯವಲ್ಲದೇ ದೇಹದ ಚರ್ಮಕಾಂತಿಯನ್ನು ಕಡಿಮೆಗೊಳಿಸುತ್ತವೆ. ಇದನ್ನು ತಡೆಯಲು ನಮಗೆ ವಿಟಮಿನ್ ಎ ಹಾಗೂ ಆಂಟಿಆಕ್ಸಿಡೆಂಟ್‌ಗಳು ಬೇಕು. ವಿಟಮಿನ್ ಎ ಹೇರಳವಾಗಿರುವ ಕ್ಯಾರೆಟ್ ಸೇವಿಸಿದರೆ ಆರೋಗ್ಯವೂ ಚೆನ್ನಾಗಿದ್ದು, ಚರ್ಮಕಾಂತಿ ವೃದ್ಧಿಸುತ್ತದೆ. 

ಸೋಂಕು ತಡೆಯಲು ಸಹಾಯ ಮಾಡುತ್ತದೆ ಕ್ಯಾರೆಟ್

ಸೋಂಕನ್ನು ತಡೆಗಟ್ಟಲು ಕ್ಯಾರೆಟ್ ಉತ್ತಮ ಗಿಡಮೂಲಿಕೆ. ಕ್ಯಾರೇಟ್‌ನ್ನು ಬೇಯಿಸಿ ಅಥವಾ ಹಾಗೆಯೇ ಸೇವಿಸಬಹುದು. 


ಹೃದ್ರೋಗ ತಡೆಯಲು ಸಹಕಾರಿ 


ಕ್ಯಾರೇಟ್‌ನ ಹೇರಳವಾಗಿ ಸೇವಿಸುವುದರಿಂದ ಹೃದಯ ಸಂಬಂಧಿ ಕಾಯಿಲೆ ಕಡಿಮೆಯಾಗುತ್ತೆ ಎಂದು ಅಧ್ಯಯನಗಳು ದೃಢಪಡಿಸುತ್ತವೆ. ಹಲ್ಲು ಮತ್ತು ಒಸಡುಗಳ ರಕ್ಷಣೆಗೂ ಕೂಡ ಕ್ಯಾರೆಟ್ ಸೇವನೆ ಸಹಾಯಕ. 



ಒಟ್ಟಾರೆ ಔಷಧ ಗುಣಗಳ ಖಣಜವಾಗಿರುವ ಕ್ಯಾರೇಟ್‌ನ ನಿಯಮಿತ ಸೇವನೆಯಿಂದ ಹಲವು ರೋಗಗಳಿಂದ ದೂರವಿರಲು ಸಾಧ್ಯ, ಆದರೆ, ಸೇವಿಸುವ ಪ್ರಮಾಣ ಹಾಗೂ ಸೇವಿಸುವ ಬಗೆ ಕುರಿತು ಅರಿತುಕೊಳ್ಳುವುದು ಉತ್ತಮ.


This post first appeared on Kannada Tips, please read the originial post: here

Share the post

[ ಕ್ಯಾರೆಟ್ ನ ಉಪಯೋಗ ] ಔಷಧ ಗುಣಗಳ ಕಣಜ ಕ್ಯಾರೆಟ್ !

×

Subscribe to Kannada Tips

Get updates delivered right to your inbox!

Thank you for your subscription

×