Get Even More Visitors To Your Blog, Upgrade To A Business Listing >>

ಕುಂದಾಪುರ: ಯುವತಿ ಅತ್ಯಾಚಾರ ಪ್ರಕರಣ : ಕುತೂಹಲದ ಹೊಸ ತಿರುವು

Tags: agravesup

23

ಕುಂದಾಪುರ: ಇತ್ತೀಚೆಗೆ ಯೆಲ್ಲೂರು ಸಮೀಪ ಯುವತಿ ಮೇಲೆ ನಡೆದಿದೆ ಎನ್ನಲಾದ ಅತ್ಯಾಚಾರ ಪ್ರಕರಣ ಇದೀಗ ಕುತೂಹಲದ ಹೊಸ ತಿರುವೊಂದನ್ನು ಪಡೆಯುತ್ತಿದೆ. ಇದೀಗ ಯುವತಿಯ ಹೇಳಿಕೆಯನ್ನು ಆಧರಿಸಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಕೊಲ್ಲೂರಿನ ರಾಜೀವ್ ಬಂಧಿತ ಆರೋಪಿ. ಆದರೆ ಯುವತಿಯ ಹೇಳಿಕೆ, ತಾಂತ್ರಿಕ ವಿಚಾರ ಹಾಗೂ ಆರೋಪಿಯ ಹೇಳಿಕೆಗೂ ಸಾಮ್ಯತೆ ಸಿಗುತ್ತಿಲ್ಲ. ಹಾಗಾಗಿ ಯುವತಿ ಸುಳ್ಳು ಹೇಳುತ್ತಿರುವುದಾಗಿ ಸಂಶಯ ಮೂಡುತ್ತಿದೆ ಎಂದು ಪೊಲೀಸ್ ಉನ್ನತ ಮೂಲಗಳು ಹೇಳುತ್ತಿವೆ.
ಕೊಲ್ಲೂರು ಸಮಿಪದ ಯಲ್ಲೂ ರಿನ ಬಡ ಕುಟುಂಬದ ಯುವತಿ ಪಿಯುಸಿ ತನಕ ಓದಿದ್ದಾಳೆ. ಇನ್ನೂ ಅರಂಭಗೊಳ್ಳುವ ಹಂತದಲ್ಲಿರುವ ಸಂಸ್ಥೆಯೊಂದಕ್ಕೆ ಕೆಲಸಕ್ಕೆ ಸೇರುವ ಯುವತಿ ಅಗಾಗ್ಗೆ ಕುಂದಾಪುರ, ಕೊಲ್ಲೂರು ಎಂದು ಓಡಾಡಿಕೊಂ ಡಿರುವ ಹಂತದಲ್ಲಿಯೇ ಇವಳ ಮನ ಸಿನ ಹಿತ್ತಲಲ್ಲಿ ಕಾಲಿಟ್ಟವನು ಕೊಲ್ಲೂರಿ ನಲ್ಲಿ ಕಾರೊಂದನ್ನು ಬಾಡಿಗೆಗೆ ಓಡಿ ಸುವ ರಾಜು ಯಾನೆ ರಾಜೇಶ್ ಖನ್ನ (31). ಯುವತಿಯೇ ಹೇಳಿಕೊಂ ಡಿರುವ ಪ್ರಕಾರ ಮೊನ್ನೆ ಸೋಮವಾರ ಬೆಳಿಗ್ಗೆ ಸುಮಾರಿಗೆ ಕಚೇರಿ ಕೆಲಸಕ್ಕಾಗಿ ಕುಂದಾಪುರಕ್ಕೆ ತೆರಳುತಿದ್ದವಳಿಗೆ ಕೊಲ್ಲೂರಿನಲ್ಲಿ ಎದುರಾದ ರಾಜು ತಾನೂ ಕುಂದಾಪುರಕ್ಕೆ ಹೋಗುತ್ತಿ ದ್ದೇನೆ ಎಂದು ಲಿಫ್ಟ್ ಕೊಟ್ಟಿದ್ದಾನೆ. ಆದರೆ ಕಾರು ಕೊಲ್ಲೂರು ಹಾದಿ ಬಿಟ್ಟು ಉಡುಪಿಯತ್ತ ದೌಡಾಯಿಸು ವುದನ್ನು ಕಂಡ ಯುವತಿ ಎಲ್ಲಿ ಅಂತ ಕೇಳಿದ್ದಾಳಂತೆ. ಇಲ್ಲಿಯೇ ಫ್ರೆಂಡ್ ಇದ್ದಾನೆ. ಅವನು ಕೊಲ್ಲೂರಿಗೆ ಬರು ತ್ತಾನೆ ಎಂದು ಕಾರನ್ನು ಮುಂದೋ ಡಿಸಿದ ರಾಜು ತುಸು ದೂರದಲ್ಲಿ ಮತ್ತೋರ್ವನನ್ನು ಕಾರಿಗೆ ಏರಿಸಿಕೊಂಡಿದ್ದಾನೆ. ಆ ಸಮಯದಲ್ಲಿ ಯುವತಿಗೆ ಕುಡಿಯಲು ಪಾನೀಯವನ್ನು ನೀಡಲಾಗಿದ್ದು ನಂತರ ಆಕೆಗೆ ಪ್ರಜ್ಞೆ ತಪ್ಪಿದೆ. ಮರುದಿನ ಅಸ್ವಸ್ಥ ಸ್ಥಿತಿಯಲ್ಲಿ ರಿಕ್ಷಾದಲ್ಲಿ ಮನೆಗೆ ಬಂದಿದ್ದು ಮಾತ್ರ ಗೊತ್ತು ಎಂಬ ಹೇಳಿಕೆ ಆಕೆ ಇದೀಗ ವಿಚಾರದಲ್ಲಿ ನೀಡಿದ್ದಾಳೆ. ಈ ಹಿನ್ನಲೆಯಲ್ಲಿ ಪೊಲೀಸರು ತನಿಖೆ ನಡೆಸಿದ್ದರು.

ವರದಿ; ಸಂತೋಷ್ ಉಡುಪಿ



This post first appeared on V4news, please read the originial post: here

Share the post

ಕುಂದಾಪುರ: ಯುವತಿ ಅತ್ಯಾಚಾರ ಪ್ರಕರಣ : ಕುತೂಹಲದ ಹೊಸ ತಿರುವು

×

Subscribe to V4news

Get updates delivered right to your inbox!

Thank you for your subscription

×