Get Even More Visitors To Your Blog, Upgrade To A Business Listing >>

ಮಂಗಳೂರು: ಬಿಜೆಪಿಯಲ್ಲೀಗ ಎದ್ದಿದೆಯೇ ಬಿಲ್ಲವರ ಸ್ಥಾನಮಾನದ ಪ್ರಶ್ನೆ

kamala_2 copy

ಮಂಗಳೂರು: ಪಕ್ಷ ಯಾವುದೇ ಇರಲಿ ಬಿಲ್ಲವರು ಮಾತ್ರ ಬಳಸಿ ಬೀಸಾಡುವ ಎಲೆಯಂತೆಯೇ ಬಳಕೆಯಾಗುತ್ತಾರೆ. ದ.ಕ. ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದ ಮತದಾರರಾಗಿದ್ದರೂ ಕೂಡ ಅದಕ್ಕೆ ತಕ್ಕ ಪ್ರಮಾಣದ ಅಧಿಕಾರ ಸ್ಥಾನಗಳು ದೊರಕುತ್ತಿಲ್ಲ ಎಂಬ ಕೂಗು ಈ ಬಿಲ್ಲವರಿಂದ ಎದ್ದಿದೆ.. ಕಾಂಗ್ರೆಸ್‌ನಲ್ಲಿ ಸಿಗಲಿಲ್ಲವ ಎಂದು ಬಿಜೆಪಿಗೆ ಬಂದರೆ ಅಲ್ಲೂ ಅಷ್ಟೇ ಎಂಬುದು ಬಿಲ್ಲವ ಸಂಘಟಕರ ಆರೋಪವಾಗಿದೆ.
ಬಿಲ್ಲವ ಯುವಕರಲ್ಲಿ ಬಹುಪಾಲು ಬಿಜೆಪಿ ಬೆಂಬಲಿಗರಾಗಿದ್ದಾರೆ. ಸಂಘಪರಿವಾರದ ಟಿಸಿಲು ಸಂಘಟನೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾರ್ಯಕರ್ತರು ಬಿಲ್ಲವರೇ ಆಗಿದ್ದಾರೆ. ಪೆಟ್ಟು ತಿನ್ನುವ, ಜೈಲಿಗೆ ಹೋಗುವವರ ಪ್ರಮಾಣ ಕೂಡ ಬಿಲ್ಲವ ಯವಕರದ್ದೇ ಹೆಚ್ಚು . ಇದಕ್ಕೆ ಪ್ರತಿಯಾಗಿ ಸಂಘಪರಿವಾರದಲ್ಲಿ ಮತ್ತು ಬಿಜೆಪಿಯಲ್ಲಿ ಬಿಲ್ಲವರಿಗೇನು ಸಿಗುತ್ತಿದೆ ಎಂಬ ಪ್ರಶ್ನೆ ಕೂಡ ಇದೇ ಸಂದರ್ಭದಲ್ಲಿ ಎದ್ದಿದೆ. ಹರೀಶ್ ಪೂಜಾರಿಯ ಕೊಲೆಯ ಬಳಿಕವಂತೂ ಬಿಜೆಪಿಯಲ್ಲಿ ಬಿಲ್ಲವರು ಹಕ್ಕು ಸ್ಥಾಪನೆಯ ಮಾತುಗಳನ್ನು ಆಡುತ್ತಿದ್ದಾರೆ.
ರುಕ್ಮಯ್ಯ ಪೂಜಾರಿ, ವಸಂತ ಬಂಗೇರ, ಶಾಸಕರಾಗಿದ್ದು ಬಿಜೆಪಿಯಿಂದಲೇ ಆದರೆ ಅವರ ಹೊರತಾದ ಬಿಲ್ಲವರು ಶಾಸಕರಾಗಿದ್ದು ಕಾಣುತ್ತಿಲ್ಲ ಕಳೆದ ಬಾರಿ ಮುಲ್ಕಿ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದಲ್ಲಿ ಉಮಾನಾಥ ಕೊಟ್ಯಾನರಿಗೆ ಸ್ಪರ್ಧಿಸುವ ಅವಕಾಶ ಸಿಕ್ಕಿತ್ತಷ್ಟೇ ಗೆಲವು ಸಾಧ್ಯವಾಗಿಲ್ಲ. ದುರದೃಷ್ಟವಶಾತ್ ಎರಡು ಸಾವಿರ ಮತಗಳ ಅಂತರದಿಂದ ಸೋತರವರು. ಮತ್ತೆ ಚುನಾವಣೆಯ ಸಿದ್ದತೆ ನಡೆಯುತ್ತಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಬಂಟರ ಪ್ಪಾಭಲ್ಯದ ಮಾತುಗಳೇ ಕೇಳುತ್ತಿವೆ. ಬಿಲ್ಲವರು ಲೆಕ್ಕಕ್ಕೆ ಮಾತ್ರ ಎಂಬಂತಾಗಿದೆ. ಮಂಡಲ ಅಧ್ಯಕ್ಷರ ಆಯ್ಕೆಯಲ್ಲಿ ಬಿಲ್ಲವರಿಗೆ ದಕ್ಕಿದ್ದು ಮೂಡಬಿದ್ರೆ ಮಂಡಲ ಮಾತ್ರ. ಪದಾಧಿಕಾರಿಗಳಾಗಿಯೂ ಬಿಲ್ಲವರ ಪ್ರಮಾಣ ಅಷ್ಟಕ್ಕಷ್ಟೇ. ಇಲ್ಲಿ ಸಿಕ್ಕದ್ದು ಚುನಾವಣೆಯಲ್ಲಿ ಪಡೆಯಬೇಕು ಎಂಬ ಲೆಕ್ಕಾಚಾರದ ಮಾತುಗಳು ಬಿಲ್ಲವರಿಂದ ಕೇಳಿ ಬರುತ್ತಿವೆ.
ಹಿರಿಯ ನಾಯಕರಾದ ರುಕ್ಮಯ್ಯ ಪೂಜಾರಿಯವರಿಗೆ ಮತ್ತೆ ಸ್ಪರ್ಧೆಗೆ ಇಳಿಸಲೇ ಬೇಕು, ಅದು ಬಂಟ್ವಾಳವಾದರೂ ಸರಿಯೇ. ಪ್ರಭಾಕರ ಬಂಗೇರರು ಬೆಳ್ತಂಗಡಿಯಲ್ಲಿ ಕಣಕ್ಕಿಳಿದರೆ ತಪ್ಪೇನು, ಕಳೆದ ಬಾರಿಯ ಚುನಾವಣೆಯಲ್ಲಿ ಕೇವಲ ಎರಡು ಸಾವಿರ ಮತಗಳ ಅಂತರದಿಂದ ಸೋತ ಉಮಾನಾಥ ಕೊಟ್ಯಾನರಿಗೆ ಮತ್ತೊಂದು ಅವಕಾಶ ಕೊಡಲೇ ಬೇಕು ಎಂಬ ಆಗ್ರಹ ಬಿಲ್ಲವ ರಿಂದ ಬಿಜೆಪಿಯ ನಾಯಕರ ಮೇಲೆ ಬೀಳುತ್ತಿವೆ. ಮುಲ್ಕಿ- ಮೂಡಬಿದ್ರೆ ಕ್ಷೇತ್ರದಲ್ಲಿ ಈಶ್ವರ್ ಕಟೀಲ್, ಸುದರ್ಶನರ ಹೆಸರುಗಳೂ ಚಾಲ್ತಿಯಲ್ಲಿವೆ. ಇವರೂ ಬಿಲ್ಲವ ಸ್ಪರ್ಧಾ ಕೂಡದ ಭಾಗವೇ ಆಗಿದ್ದಾರೆ. ಮಂಗಳೂರು ಉತ್ತರ ಕ್ಷೇತ್ರದಲ್ಲಿ ಸತ್ಯಜಿತ ಸುರತ್ಕಲ್‌ರವರ ಹೆಸರು ಚಾಲ್ತಿಯಲ್ಲಿದೆ. ಅವರೀಗ ಬಿಜೆಪಿಯಲ್ಲಿ ಪದಾಧಿಕಾರಿಯೂ ಆಗಿದ್ದಾರೆ. ಮಂಗಳೂರು ನಗರ ಕ್ಷೇತ್ರಕ್ಕೆ ಬರುವುದಾದರೆ ಇಲ್ಲಿ ಬಿಲ್ಲವರಾಗಿ ಸತೀಶ್ ಕುಂಪಲ ಮತ್ತು ಚಂದ್ರ ಶೇಖರ್ ಉಚ್ಚಿಲರ ಹೆಸರು ಬರುತ್ತದೆ. ಈ ಬಾರಿ ಏನಿಲ್ಲ ಎಂದರೂ ದ.ಕ. ಜಿಲ್ಲೆಯಲ್ಲಿ ಎರಡು ಕ್ಷೇತ್ರಗಳಲ್ಲಾದರೂ ಬಿಲ್ಲವ ಅಭ್ಯರ್ಥಿಗಳು ಬಿಜೆಪಿಯಿಂದ ಅಗಲಿದ್ದಾರೆ ಎಂಬ ನಿರೀಕ್ಷೆ ಹೊಂದಲಾಗಿದೆ. ಆದರೆ ಬಿಜೆಪಿಯಲ್ಲಿ ಜಾತಿ ಲೆಕ್ಕಾಚಾರಕ್ಕಿಂತ ಗೆಲುವಿನ ಸಾಧ್ಯತೆಯ ಲೆಕ್ಕಾಚಾರಕ್ಕೆ ಹೆಚ್ಚು ಆಧ್ಯತೆ ಕೊಡುವುದರಿಂದ ಬಿಲ್ಲವರ ಅವಕಾಶಗಳು ಯಾವ ರೂಪದಲ್ಲಿರಲಿವೆ ಎಂಬುದು ಕೂಡ ಕುತೂಹಲದ ವಿಷಯವಾಗಿದೆ.This post first appeared on V4news, please read the originial post: here

Share the post

ಮಂಗಳೂರು: ಬಿಜೆಪಿಯಲ್ಲೀಗ ಎದ್ದಿದೆಯೇ ಬಿಲ್ಲವರ ಸ್ಥಾನಮಾನದ ಪ್ರಶ್ನೆ

×

Subscribe to V4news

Get updates delivered right to your inbox!

Thank you for your subscription

×