Get Even More Visitors To Your Blog, Upgrade To A Business Listing >>

ಉಡುಪಿ: ಉದ್ಯಮಿ ಹತ್ಯಾ ಆರೋಪಿಗೆ ಸೆಲೆಬ್ರಿಟಿ ಟ್ರೀಟ್: ಕಾನೂನಿನ ಭರವಸೆಯಡಿಯಲ್ಲೇ ಕಾನೂನಿನ ಉಲ್ಲಂಘನೆ

rajeshwari

ಮಣಿಪಾಲ: ಬಹುಕೋಟಿ ಉದ್ಯಮಿ ಭಾಸ್ಕರ ಶೆಟ್ಟಿ ಹತ್ಯಾ ಪ್ರಕರಣ ದಲ್ಲಿ ಪತ್ನಿ, ಪ್ರಮುಖ ಆರೋಪಿಯೂ ಆಗಿರುವ ರಾಜೇಶ್ವರಿ ಶೆಟ್ಟಿ ಬಗ್ಗೆ ಪೊಲೀಸ್ ಇಲಾಖೆ ಮೃದು ಧೋರಣೆ ತಳೆಯುತ್ತಿದೆ ಎಂಬ ಶಂಕೆ ವ್ಯಕ್ತವಾಗಿದೆ. ಈಗಾಗಲೇ ಭಾಸ್ಕರ ಶೆಟ್ಟಿ ಹತ್ಯೆ ಪ್ರಕರಣವನ್ನು ನ್ಯಾಯಾ ಲಯದಲ್ಲಿ ಮೊದಲ ಏಟಿನಲ್ಲೇ ಹಳ್ಳ ಹಿಡಿಸುವ ಎಲ್ಲಾ ರೀತಿಯ ತಂತ್ರ ಗಾರಿಕೆ ನಡೆಯುತ್ತಿದೆ ಎಂಬ ಆರೋಪ ಭಾಸ್ಕರ ಶೆಟ್ಟಿ ಕುಟುಂಬ ದಿಂದ ವ್ಯಕ್ತವಾಗಿತ್ತು. ಇದೀಗ ಈ ಪ್ರಕರಣದಲ್ಲಿ ಮುಖ್ಯ ಆರೋಪಿಯಾಗಿರುವ ರಾಜೇಶ್ವರಿ ಶೆಟ್ಟಿಗೆ ಉಡುಪು ಬದಲಾಯಿಸಲು ಪೊಲೀಸ್ ಇಲಾಖೆ ಆಕೆಯ ಮನೆಗೆ ಹೋಗಿ ಬರುವ ವ್ಯವಸ್ಥೆ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ.
ರಾಜೇಶ್ವರಿ ಶೆಟ್ಟಿಯನ್ನು ಕೋರ್ಟ್‌ನಿಂದ ಜೈಲಿಗೆ, ಕೆಲವೊಮ್ಮೆ ತನಿಖೆಯ ಹಿನ್ನೆಲೆಯಲ್ಲಿ ಬೇರೆ ಬೇರೆ ಪ್ರದೇಶಗಳಿಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಪೊಲೀಸರ ವರ್ತನೆ ಓರ್ವ ಆರೋಪಿಯ ಜೊತೆ ಸಹಜ ಅನ್ನಿಸುವಂತಹದ್ದಿಲ್ಲ ಎಂಬ ಅಭಿಪ್ರಾಯವನ್ನು ಭಾಸ್ಕರ ಶೆಟ್ಟಿ ಕುಟುಂಬಿಕರು ವ್ಯಕ್ತ ಪಡಿಸಿದ್ದಾರೆ. ಪೊಲೀಸರು ರಾಜೇಶ್ವರಿ ಶೆಟ್ಟಿಯನ್ನು ಸಾಮಾನ್ಯ ಆರೋಪಿ ಎಂಬಂತೆ ನೋಡದೆ ಸೆಲೆಬ್ರಿಟಿ ಎಂಬಂತೆ ಟ್ರೀಟ್ ಮಾಡುತ್ತಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.
ರಾಜ್ಯದಲ್ಲಿ ಕುತೂಹಲ ಕೆರಳಿಸಿರುವ ಹೈಪ್ರೊಫೈಲ್ ಪ್ರಕರಣ ಇದಾಗಿರುವುದರಿಂದ ಪೊಲೀಸ್ ಇಲಾಖೆ ಎಚ್ಚರಿಕೆಯಿಂದ ತಮ್ಮ ಕರ್ತವ್ಯ ನಿವಹಿಸಬೇಕಿತ್ತು. ಆದರೆ ಆರಂಭದಿಂದಲೇ ಈ ಪ್ರಕರಣದ ಬಗ್ಗೆ ಬೇಕಾಬಿಟ್ಟಿ ಯಾಗಿ ಪೊಲೀಸರು ವರ್ತಿಸುತ್ತಿದ್ದಾರೆ. ಇದಕ್ಕೆ ಕಾರಣ ಬಲವಾದ ರಾಜಕೀಯ ಒತ್ತಡ ಎಂಬ ಮಾತು ಕೇಳಿ ಬಂದಿದೆ. ಆರೋಪಿ ನಿರಂಜನ ಭಟ್‌ಗೆ ಗೊತ್ತಿದ್ದ ವ್ಯಕ್ತಿ ರಾಜಕಾರಣಿಗಳನ್ನು ಹಿಡಿದುಕೊಂಡು ಇಡೀ ಪ್ರಕರಣವನ್ನೇ ಹಳ್ಳ ಹಿಡಿಸಲು ಯೋಜನೆ ಹಾಕುತ್ತಿದ್ದಾನೆ ಎನ್ನಲಾಗಿದೆ. ಸಿ‌ಐಡಿ ನೆಪ ಮಾತ್ರ, ಎಲ್ಲವೂ ರಾಜಕೀಯ ಹಸ್ತಕ್ಷೇಪದಡಿಯಲ್ಲಿ ನಡೆಯುತ್ತಿದೆ. ನ್ಯಾಯಾಲಯದಲ್ಲಿ ಈ ಪ್ರಕರಣ ಬಲವಾಗಿ ನಿಲ್ಲಬಲ್ಲಂತಹ ಕಾರಣಗಳು ಕೂಡಾ ನನಗೆ ಗೋಚರಿಸುತ್ತಿಲ್ಲ ಎಂದು ಉಡುಪಿಯ ಹಿರಿಯ ವಕೀಲರೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಉಡುಪಿ: ಉದ್ಯಮಿ ಹತ್ಯಾ ಆರೋಪಿಗೆ ಸೆಲೆಬ್ರಿಟಿ ಟ್ರೀಟ್: ಕಾನೂನಿನ ಭರವಸೆಯಡಿಯಲ್ಲೇ ಕಾನೂನಿನ ಉಲ್ಲಂಘನೆ
ಮಣಿಪಾಲ: ಬಹುಕೋಟಿ ಉದ್ಯಮಿ ಭಾಸ್ಕರ ಶೆಟ್ಟಿ ಹತ್ಯಾ ಪ್ರಕರಣ ದಲ್ಲಿ ಪತ್ನಿ, ಪ್ರಮುಖ ಆರೋಪಿಯೂ ಆಗಿರುವ ರಾಜೇಶ್ವರಿ ಶೆಟ್ಟಿ ಬಗ್ಗೆ ಪೊಲೀಸ್ ಇಲಾಖೆ ಮೃದು ಧೋರಣೆ ತಳೆಯುತ್ತಿದೆ ಎಂಬ ಶಂಕೆ ವ್ಯಕ್ತವಾಗಿದೆ. ಈಗಾಗಲೇ ಭಾಸ್ಕರ ಶೆಟ್ಟಿ ಹತ್ಯೆ ಪ್ರಕರಣವನ್ನು ನ್ಯಾಯಾ ಲಯದಲ್ಲಿ ಮೊದಲ ಏಟಿನಲ್ಲೇ ಹಳ್ಳ ಹಿಡಿಸುವ ಎಲ್ಲಾ ರೀತಿಯ ತಂತ್ರ ಗಾರಿಕೆ ನಡೆಯುತ್ತಿದೆ ಎಂಬ ಆರೋಪ ಭಾಸ್ಕರ ಶೆಟ್ಟಿ ಕುಟುಂಬ ದಿಂದ ವ್ಯಕ್ತವಾಗಿತ್ತು. ಇದೀಗ ಈ ಪ್ರಕರಣದಲ್ಲಿ ಮುಖ್ಯ ಆರೋಪಿಯಾಗಿರುವ ರಾಜೇಶ್ವರಿ ಶೆಟ್ಟಿಗೆ ಉಡುಪು ಬದಲಾಯಿಸಲು ಪೊಲೀಸ್ ಇಲಾಖೆ ಆಕೆಯ ಮನೆಗೆ ಹೋಗಿ ಬರುವ ವ್ಯವಸ್ಥೆ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ.
ರಾಜೇಶ್ವರಿ ಶೆಟ್ಟಿಯನ್ನು ಕೋರ್ಟ್‌ನಿಂದ ಜೈಲಿಗೆ, ಕೆಲವೊಮ್ಮೆ ತನಿಖೆಯ ಹಿನ್ನೆಲೆಯಲ್ಲಿ ಬೇರೆ ಬೇರೆ ಪ್ರದೇಶಗಳಿಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಪೊಲೀಸರ ವರ್ತನೆ ಓರ್ವ ಆರೋಪಿಯ ಜೊತೆ ಸಹಜ ಅನ್ನಿಸುವಂತಹದ್ದಿಲ್ಲ ಎಂಬ ಅಭಿಪ್ರಾಯವನ್ನು ಭಾಸ್ಕರ ಶೆಟ್ಟಿ ಕುಟುಂಬಿಕರು ವ್ಯಕ್ತ ಪಡಿಸಿದ್ದಾರೆ. ಪೊಲೀಸರು ರಾಜೇಶ್ವರಿ ಶೆಟ್ಟಿಯನ್ನು ಸಾಮಾನ್ಯ ಆರೋಪಿ ಎಂಬಂತೆ ನೋಡದೆ ಸೆಲೆಬ್ರಿಟಿ ಎಂಬಂತೆ ಟ್ರೀಟ್ ಮಾಡುತ್ತಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.
ರಾಜ್ಯದಲ್ಲಿ ಕುತೂಹಲ ಕೆರಳಿಸಿರುವ ಹೈಪ್ರೊಫೈಲ್ ಪ್ರಕರಣ ಇದಾಗಿರುವುದರಿಂದ ಪೊಲೀಸ್ ಇಲಾಖೆ ಎಚ್ಚರಿಕೆಯಿಂದ ತಮ್ಮ ಕರ್ತವ್ಯ ನಿವಹಿಸಬೇಕಿತ್ತು. ಆದರೆ ಆರಂಭದಿಂದಲೇ ಈ ಪ್ರಕರಣದ ಬಗ್ಗೆ ಬೇಕಾಬಿಟ್ಟಿ ಯಾಗಿ ಪೊಲೀಸರು ವರ್ತಿಸುತ್ತಿದ್ದಾರೆ. ಇದಕ್ಕೆ ಕಾರಣ ಬಲವಾದ ರಾಜಕೀಯ ಒತ್ತಡ ಎಂಬ ಮಾತು ಕೇಳಿ ಬಂದಿದೆ. ಆರೋಪಿ ನಿರಂಜನ ಭಟ್‌ಗೆ ಗೊತ್ತಿದ್ದ ವ್ಯಕ್ತಿ ರಾಜಕಾರಣಿಗಳನ್ನು ಹಿಡಿದುಕೊಂಡು ಇಡೀ ಪ್ರಕರಣವನ್ನೇ ಹಳ್ಳ ಹಿಡಿಸಲು ಯೋಜನೆ ಹಾಕುತ್ತಿದ್ದಾನೆ ಎನ್ನಲಾಗಿದೆ. ಸಿ‌ಐಡಿ ನೆಪ ಮಾತ್ರ, ಎಲ್ಲವೂ ರಾಜಕೀಯ ಹಸ್ತಕ್ಷೇಪದಡಿಯಲ್ಲಿ ನಡೆಯುತ್ತಿದೆ. ನ್ಯಾಯಾಲಯದಲ್ಲಿ ಈ ಪ್ರಕರಣ ಬಲವಾಗಿ ನಿಲ್ಲಬಲ್ಲಂತಹ ಕಾರಣಗಳು ಕೂಡಾ ನನಗೆ ಗೋಚರಿಸುತ್ತಿಲ್ಲ ಎಂದು ಉಡುಪಿಯ ಹಿರಿಯ ವಕೀಲರೊಬ್ಬರು ಪ್ರತಿಕ್ರಿಯಿಸಿದ್ದಾರೆ.This post first appeared on V4news, please read the originial post: here

Share the post

ಉಡುಪಿ: ಉದ್ಯಮಿ ಹತ್ಯಾ ಆರೋಪಿಗೆ ಸೆಲೆಬ್ರಿಟಿ ಟ್ರೀಟ್: ಕಾನೂನಿನ ಭರವಸೆಯಡಿಯಲ್ಲೇ ಕಾನೂನಿನ ಉಲ್ಲಂಘನೆ

×

Subscribe to V4news

Get updates delivered right to your inbox!

Thank you for your subscription

×