Get Even More Visitors To Your Blog, Upgrade To A Business Listing >>

ಬೆಳ್ತಂಗಡಿ: ಕೃಷ್ಣಾಷ್ಟಮಿ ವೇಳೆ ದಲಿತರ ಮೇಲೆ ಹಲ್ಲೆ ಯತ್ನ

beltangadi 1 copy

ಬೆಳ್ತಂಗಡಿ: ಲ್ಯಾಲ ಪಡ್ಲಾಡಿಯಲ್ಲಿ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ವೇಳೆಯಲ್ಲಿ ಕೇಸರಿ ಪತಾಕೆ ವಿಷಯವಾಗಿ ದಲಿತರ ಮೇಲೆ ಹಲ್ಲೆಗೆ ಯತ್ನ ನಡೆದ ಘಟನೆ ವರದಿಯಾಗಿದೆ. beltangadi 2 copyಕಾರ‍್ಯಕ್ರಮದ ಅಂಗವಾಗಿ ಸ್ಥಳೀಯ ಸಂಘ ಪರಿವಾರದ ನಾಯಕ ಮತ್ತು ಲಾಯಿಲ ಪಂಚಾ ಯತ್‌ನ ಗಿರೀಶ್ ಡೋಂಗ್ರೆ ಮತ್ತು ತಂಡದವರು ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಟೆಲಿಫೋನ್ ಕಂಬಕ್ಕೆ ಕೇಸರಿ ಪತಾಕೆ ಹಾಕಿದ್ದನ್ನು ಯಾರೋ ಕಿಡಿಗೇಡಿಗಳು ನಿನ್ನೆ ರಾತ್ರಿ ಕೆಳಗೆ ಹಾಕಿ ದ್ದಾರೆ. ಸುದ್ದಿ ತಿಳಿದ ಸಂಘಟ ನೆಯ ಕಾರ್ಯಕರ್ತರು ಸ್ಥಳಕ್ಕೆ ಬಂದು ವಿರೋಧ ವ್ಯಕ್ತಪಡಿಸಿ, ಲಾಯಿಲದ ನಿವಾಸಿ ರೋಹಿತ್ ಎಂಬುವವರ ಮೇಲೆ ಬೆಳ್ತಂಗಡಿ ಠಾಣೆಯಲ್ಲಿ ದೂರು ನೀಡಿದ್ದಾರೆ. ವಿಚಾ ರಣೆಯಲ್ಲಿ ರೋಹಿತ್ ಪಾತ್ರ ಇಲ್ಲ ಎಂದು ತಿಳಿದು ಎಚ್ಚರಿಕೆ ನೀಡಿ ಪೊಲೀಸರು ಬಿಟ್ಟಿದ್ದಾರೆ. ಸಂಜೆ ಇದೇ ವಿಚಾರ ಮುಂದಿಟ್ಟುಕೊಂಡು ಕೆಲವರು ಲಾಯಿಲ ಬಳಿ ಗುಂಪು ಸೇರಿದ್ದರು. ಈ ನಡುವೆ ಅಲ್ಲಿಗೆ ಬಂದ ದಲಿತ ಯುವಕರ ಜತೆ ಮಾತಿಗಿಳಿದು ಹಲ್ಲೆಗೆ ಯತ್ನಿಸಿದ್ದಾರೆ.
ಈ ವೇಳೆ ವಸಂತ್ ರಾಣೆ ಹಾಗೂ ಹರೀಶ್ ಎಂಬ ದಲಿತರ ಮೇಲೆ ಸಂಘಪರಿವಾರದ ಕಾರ್ಯಕರ್ತರು ಹಲ್ಲೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಅಲ್ಲಿಗೆ ಧಾವಿಸಿದ ಪೊಲೀಸ್ ಅಧಿಕಾರಿಗಳು ದಲಿತರನ್ನು ರಕ್ಷಿಸಿ ಠಾಣೆಗೆ ಕರೆತಂದಿದ್ದಾರೆ. ಅಷ್ಟರಲ್ಲಿ ಸಂಘ ಪರಿವಾರದ ಕಾರ್ಯಕರ್ತರು ಪರಾರಿಯಾಗಿದ್ದಾರೆ. ಸುದ್ದಿ ತಿಳಿದ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಸಂಘಟನೆಯ ಮುಖಂಡರಾದ ಬಿ.ಕೆ.ವಸಂತ್ ಬೆಳ್ತಂಗಡಿ, ಚಂದು ಎಲ್,ಶೇಖರ್ ಕುಕ್ಕೇಡಿ, ನೇಮಿರಾಜ್ ಪೊಲೀಸ್ ಠಾಣೆಗೆ ಭೇಟಿ ನೀಡಿ ಹಲ್ಲೆ ನಡೆಸಲು ಯತ್ನ ನಡೆಸಿದ ಸಂಘ ಪರಿವಾರದ ಕಾರ‍್ಯಕರ್ತರ ವಿರುದ್ಧ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.



This post first appeared on V4news, please read the originial post: here

Share the post

ಬೆಳ್ತಂಗಡಿ: ಕೃಷ್ಣಾಷ್ಟಮಿ ವೇಳೆ ದಲಿತರ ಮೇಲೆ ಹಲ್ಲೆ ಯತ್ನ

×

Subscribe to V4news

Get updates delivered right to your inbox!

Thank you for your subscription

×