Get Even More Visitors To Your Blog, Upgrade To A Business Listing >>

ಮಂಜೇಶ್ವರ: ವಿವಿಧ ಬೇಡಿಕೆ ಮುಂದಿಟ್ಟು ಎನ್ ಜಿ ಒ ನಿಂದ ಪ್ರತಿಭಟನಾ ಧರಣಿ

vlcsnap-2016-08-26-13h27m37s78 copy

ಮಂಜೇಶ್ವರ: ವಿವಿಧ ಬೇಡಿಕೆಗಳನ್ನು ಮುಂದಿಟ್ಟು ರಾಜ್ಯ ವ್ಯಾಪಕವಾಗಿ ಸರಕಾರಿ ನೌಕರರ ಸಂಘಟನೆಯಾದ ಎನ್ ಜಿ ಒ ನೇತೃತ್ವದಲ್ಲಿ ನಡೆಯು‌ಉತಿರುವ ಪ್ರತಿಭಟನೆಯ ಭಾಗವಾಗಿ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಮುಂಬಾಗದಲ್ಲೂ ಪ್ರತಿಭಟನಾ ಧರಣಿ ನಡೆಯಿತು.vlcsnap-2016-08-26-13h27m32s25 copyಪಾಲುದಾರರ ಪಿಂಚಣಿ ಹಿಂತೆಗೆಯಬೇಕು, 12.5 ಶೇಕಡಾ ಆಗಿ ಬೋನಸನ್ನು ಹೆಚ್ಚಳ ಗೊಳಿಸಬೇಕು, ಪೊಳ್ಳು ಭರವಸೆಗಳನ್ನು ನಿಲ್ಲಿಸಬೇಕು, ನಿವೃತಿ ಪ್ರಾಯವನ್ನು 60 ಕ್ಕೇರಿಸಬೇಕು ಮೊದಲಾದ ಬೇಡಿಕೆಯನ್ನು ಮುಂದಿಟ್ಟು ಪ್ರತಿಭಟನಾ ಧರಣಿಯನ್ನು ಹಮ್ಮಿಕೊಳ್ಳಲಾಗಿತ್ತು. ಧರಣಿಯನ್ನು ಎನ್ ಜಿ ಒ ಸಂಘಟನೆಯ ರಾಜ್ಯ ಕಾರ್ಯದರ್ಶಿ ಇ ಪಿ ಪಿತಾಂಬರನ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಇಲ್ಲ ಸಲ್ಲದ ಕಾರಣಗಳನ್ನು ಮುಂದಿಟ್ಟು ಸರಕಾರಿ ನೌಕರರನ್ನು ವರ್ಗಾಯಿಸುತ್ತಿರುವ ಎಡರಂಗ ಸರಕಾರ ಸರಕಾರಿ ನೌಕರರಿಗೆ ಕೊಡುತ್ತಿರುವ ಕಿರುಕುಲವನ್ನು ನಿಲ್ಲಿಸಬೇಕಾಗಿದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಪವಾಸ ಸತ್ಯಾಗ್ರಹದಂತಹ ಪ್ರತಿಭಟನಾ ಧರಣಿಗಳನ್ನು ಎದುರಿಸಬೇಕಾಗಿರುವುದಾಗಿ ಅವರು ಎಚ್ಚರಿಸಿದರು. ಎಂ. ಗಂಗಾಧರ ಅಧ್ಯಕ್ಷತೆ ವಹಿಸಿದರು. ವಿಜಯ, ಶಿವನಾಯ್ಕ್, ಕೆ ರಾಜ, ಎಂ ಬಾಬು, ಪೂವಪ್ಪ ಶೆಟ್ಟಿ, ಟಿ ಎಂ ನಾರಾಯನ ಮೊದಲಾದವರು ಮಾತನಾಡಿದರು. ಪ್ರತಿಭಟನಾ ಧರಣಿಯಲ್ಲಿ ಹಲವಾರು ಮಂದಿ ಪಾಲ್ಗೊಂಡರು.This post first appeared on V4news, please read the originial post: here

Share the post

ಮಂಜೇಶ್ವರ: ವಿವಿಧ ಬೇಡಿಕೆ ಮುಂದಿಟ್ಟು ಎನ್ ಜಿ ಒ ನಿಂದ ಪ್ರತಿಭಟನಾ ಧರಣಿ

×

Subscribe to V4news

Get updates delivered right to your inbox!

Thank you for your subscription

×